ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ಹುಟ್ಟುಹಬ್ಬದ ಹಿನ್ನೆಲೆ ಇಂದು ಕೋಟಿಗೊಬ್ಬ-3 ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದೇ ಶೀರ್ಷಿಕೆಯಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಟೀಸರ್ ಸಿನಿಮಾದ ನಿರೀಕ್ಷೆಯನ್ನ ಹೆಚ್ಚಿಸಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಫಸ್ಟ್ ಲುಕ್, ಟೀಸರ್ ಸಿನಿಮಾ ಮಾಸ್ ಅಭಿಮಾನಿಗಳನ್ನ ಸೆಳೆದಿತ್ತು. ಇದೀಗ ಚಿತ್ರದ ಕಾಮಿಡಿ ಕಚಗುಳಿ ಝಲಕ್, ಕ್ಯೂಟ್ ಲವ್ ಸ್ಟೋರಿ ಇಂದು ಬಿಡುಗಡೆ ಟೀಸರ್ ನಲ್ಲಿ ನೋಡಬಹುದಾಗಿದೆ.
ಎರಡು ದಿನದ ಮುಂಚೆಯೇ ಕೋಟಿಗೊಬ್ಬ ಚಿತ್ರತಂಡ ಸುದೀಪ್ ಅವರ ಹುಟ್ಟುಹಬ್ಬದಂದು ಟೀಸರ್ ಬಿಡುಗಡೆ ಮಾಡುವ ಗುಡ್ ನ್ಯೂಸ್ ನೀಡಿತ್ತು. ಚಿತ್ರದಲ್ಲಿ ಅಭಿನಯ ಚಕ್ರವರ್ತಿಗೆ ಮಡೋನಾ ಸೆಬಾಸ್ಟಿಯನ್ ಮತ್ತು ಶ್ರದ್ಧಾ ಜೊತೆಯಾಗಿದ್ದಾರೆ. ಶಿವಕಾರ್ತಿಕ್ ನಿರ್ದೇಶನ, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಮ್ಯೂಸಿಕಲ್ ಪೈಲ್ವಾನ್ ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ. ಮೊದಲ ಬಾರಿ ಬಾಲಿವುಡ್‍ನಟ ಅಫ್ತಾಬ್ ಕೋಟಿಗೊಬ್ಬ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇಂದು ಫ್ಯಾಂಟಮ್ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಆದ್ರೆ ಕೊನೆ ಗಳಿಗೆಯಲ್ಲಿ ಚಿತ್ರತಂಡ ಟೀಸರ್ ಬಿಡುಗಡೆ ದಿನಾಂಕ ಮೂಂದೂಡಿದೆ. ಈ ಕುರಿತು ನಿರ್ದೇಶಕ ಅನೂಪ್ ಭಂಡಾರಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.