ಚಾಮರಾಜನಗರ: ಕಾದಾಟದಲ್ಲಿ ಬಾಲ ಕಳೆದುಕೊಂಡ ಆನೆ ನೋವು ತಾಳಲಾರದೆ ನದಿಗಿಳಿದು ನೀರಲ್ಲಿಯೇ ನಿಂತ ಘಟನೆ ಚಾಮರಾಜನಗರದ ಕಾವೇರಿ ವನ್ಯ ಜೀವಿ ವ್ಯಾಪ್ತಿಯಲ್ಲಿ ನಡೆದಿದೆ.
ಕಾವೇರಿ ವನ್ಯಧಾಮದ ಭೀಮೇಶ್ವರಿ ಕಳ್ಳಭೇಟೆ ಶಿಬಿರದ ಬಳಿ ಈ ಘಟನೆ ನಡೆದಿದ್ದು, ಬಾಲ ತುಂಡಾಗಿ ಗಾಯವಾಗಿರುವ ಆನೆ ನೊಣಗಳ ಹಾವಳಿ ಹಾಗೂ ನೋವು ತಾಳಲಾರದೆ ನದಿಗಿಳಿದಿದೆ. ಈ ಆನೆಗೆ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿದೆ.
Advertisement
ಗಾಯಗೊಂಡಿರುವ ಆನೆ ಮೇಲೆ ನಿಗಾ ಇಟ್ಟಿರುವ ಅರಣ್ಯ ಸಿಬ್ಬಂದಿ ದಸರಾ ಆನೆಗಳಾದ ಅಭಿಮನ್ಯು ಹಾಗು ಕೃಷ್ಣ ಆನೆಯನ್ನು ಕರೆಸಿಕೊಂಡಿದ್ದಾರೆ. ಈ ಆನೆಗಳ ಮೂಲಕ ಗಾಯಗೊಂಡಿರುವ ಕಾಡಾನೆಗೆ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಮೂರು ಟೀಂ ರಚನೆ ಮಾಡಿ ಆನೆಯ ಹುಡುಕಾಟ ನಡೆಸಿದ್ದಾರೆ. ರಾಮನಗರ ಜಿಲ್ಲೆಯ ಸಂಗಂ ವಲಯ ವ್ಯಾಪ್ತಿಯಲ್ಲಿ ಆನೆ ಬೀಡು ಬಿಟ್ಟಿರುವ ಸಾಧ್ಯತೆಯಿದ್ದು, ಸೆರೆಹಿಡಿದು ಚಿಕಿತ್ಸೆ ನೀಡಲೂ ಪ್ಲಾನ್ ಮಾಡಿದ್ದಾರೆ.