– ಬಂದೂಕು, ಪಿಸ್ತೂಲ್, ವಾಹನಗಳ ವಶ
ಚಿತ್ರದುರ್ಗ: ಅಕ್ರಮವಾಗಿ ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ ಏಳು ಮಂದಿ ಬೇಟೆಗಾರರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಪಿಸ್ತೂಲು, ಬಂದೂಕು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement
ಜಿಲ್ಲೆಯ ಹಿರಿಯೂರು ತಾಲೂಕಿನ ಕಾಡಿನಂಚಿನಲ್ಲಿ ಘಟನೆ ನಡೆದಿದ್ದು, ಆರೋಪಿಗಳು ತಂದಿದ್ದ ಅತ್ಯಾಧುನಿಕ ನಾಲ್ಕು ಬಂದೂಕುಗಳನ್ನು, ಒಂದು ಪಿಸ್ತೂಲ್, ಬೌ ಆ್ಯಂಡ್ ಆರೋ, ಹೈ ಫ್ಲ್ಯಾಶ್ ಲೈಟ್‍ಗಳು ಹಾಗೂ ಬೇಟೆಗೆ ಉಪಯೋಗಿಸುವ ಹಲವಾರು ಉಪಕರಣಗಳು, ಬೇಟೆಗಾರರ ಎರಡು ಮಹಿಂದ್ರ ಜೀಪ್ ಹಾಗೂ ಮಹಿಂದ್ರ ಸ್ಕಾರ್ಪಿಯೋ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
Advertisement
ಬಂಧಿತ 7 ಮಂದಿ ಆರೋಪಿಗಳು ಶಿವಮೊಗ್ಗ, ಬೆಂಗಳೂರು ಮೂಲದವರಾಗಿದ್ದು, ಪ್ರಮುಖ ನಾಲ್ಕು ಮಂದಿ ಬೇಟೆಗಾಗರರು ಮತ್ತು ಮೂರು ಮಂದಿ ವಾಹನಗಳ ಚಾಲಕರಾಗಿದ್ದಾರೆ. ಬೇಟೆಗಾರರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ಪರಿಪಾಲಕರು ಕಾರ್ಯ ಪ್ರವೃತ್ತರಾಗಿ, ಇಡೀ ಅರಣ್ಯ ಪ್ರದೇಶವನ್ನು ಎರಡು ಬಾರಿ ಸ್ಥಳ ವೀಕ್ಷಣೆ ಮಾಡಿ ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ಚಿತ್ರದುರ್ಗ ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾದ ರಘುರಾಮ್ ಜಿ.ಎಚ್., ಹಿರಿಯೂರು ವಲಯ ಅರಣ್ಯಾಧಿಕಾರಿ ಶ್ರಿಹರ್ಷ, ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ಕೇಸರಿ ಮತ್ತು ಸಿಬ್ಬಂದಿ ನೇರವಾಗಿ ದಾಳಿ ನಡೆಸಿ ಬೇಟೆಗಾರರನ್ನು ಹಿಡಿದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಸಿಎಫ್ ಲಿಂಗರಾಜು ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.