ಮಡಿಕೇರಿ: ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಹಲವರು ಪ್ರಾಣ ಕಳೆದುಕೊಳ್ಳಲು ಕಾರಣವಾಗಿದ್ದ, 20 ಕಾಡಾನೆಗಳ ಹಿಂಡನ್ನು ಮೀಸಲು ಅರಣ್ಯಕ್ಕೆ ಸೇರಿಸುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.
Advertisement
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತಿತಿಮತಿ ಆರ್.ಆರ್.ಟಿ ತಂಡ ಮತ್ತು ಅನೆಚೌಕೂರು ವನ್ಯಜೀವಿ ವಲಯ ಜಂಟಿ ಕಾರ್ಯಾಚರಣೆ ನಡೆಸಿತು. ಸುಮಾರು 20 ಆನೆಗಳ ಹಿಂಡನ್ನು ನೊಕ್ಯ ಗ್ರಾಮಕ್ಕೆ ಸೇರಿದ ರಾಮನಕಟ್ಟೆಯಲ್ಲಿನ ರೈಲ್ವೆ ಬ್ಯಾರಿಕೇಡ್ ಗೇಟ್ ಮೂಲಕ ನಾಗರಹೊಳೆ ಉದ್ಯಾನವನದ ಅನೆಚೌಕೂರು ವಲಯ ವ್ಯಾಪ್ತಿಯ ಮೂಲಕ ಅರಣ್ಯಕ್ಕೆ ಸೇರಿಸಲಾಯಿತು. ಇದನ್ನೂ ಓದಿ : ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಕಾರು ಡಿಕ್ಕಿ
Advertisement
Advertisement
ಆನೆಗಳ ಹಿಂಡು ಈ ಹಿಂದೆ ಮಾಯಮುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬುಕೋಟೆ ಎಂಬಲ್ಲಿ ಸೇರಿಕೊಂಡಿತ್ತು. ಶುಕ್ರವಾರ ಸಂಜೆವರೆಗೂ ನಡೆದ ಕಾರ್ಯಾಚರಣೆಯಲ್ಲಿ ನೊಕ್ಯ ಗ್ರಾಮದ ಚೆಪ್ಪುಡೀರ ಕುಟುಂಬದ ಸ್ಕಾಲರ್‍ಶಿಪ್ ಗದ್ದೆವರೆಗೆ ಅಟ್ಟಲಾಗಿತ್ತು. ಶನಿವಾರ ಮುಂಜಾನೆಯಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಕಾಡು ಸೇರಿಸಲಾಯಿತು. ಇದೀಗ ಆನೆಗಳು ಮೀಸಲು ಅರಣ್ಯ ಪ್ರದೇಶ ಸೇರಿದ್ದು, ಜನರು ನಿಟ್ಟುಸಿರುವ ಬಿಡುವಂತಾಗಿದೆ. ಸುಮಾರು 15 ಅರಣ್ಯ ಇಲಾಖೆ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
Advertisement