– 4 ಬಾಲಿಗೆ 20 ರನ್ ಚಚ್ಚಿದ ಕ್ರುನಾಲ್
ಶಾರ್ಜಾ: ಐಪಿಎಲ್ 13ನೇ ಆವೃತ್ತಿಯ 17ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡ ಎದುರಾಳಿ ಟೀಂಗೆ 209 ರನ್‍ಗಳ ಟಾರ್ಗೆಟ್ ನೀಡಿದೆ.
ಇಂದು ಶಾರ್ಜ್ ಮೈದಾನದಲ್ಲಿ ನಡೆಯುತ್ತಿರುವ 17ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‍ಗೆ ಬಂದ ಮುಂಬೈ ತಂಡ ನಾಯಕ ರೋಹಿತ್ ಶರ್ಮಾ ಅವರ ಆಯ್ಕೆಯನ್ನು ಸಮರ್ಥಿಸಿಕೊಳ್ಳವುಂತೆ ಬ್ಯಾಟ್ ಮಾಡಿದೆ. ಆರಂಭಿಕ ಕ್ವಿಂಟನ್ ಡಿ ಕಾಕ್ ಅವರ ಆಕರ್ಷಕ ಅರ್ಧಶತಕ ಮತ್ತು ಕೊನೆಯಲ್ಲಿ ಪಾಂಡ್ಯ ಸಹೋದರ ಅಬ್ಬರದಿಂದ ಹೈದರಾಬಾದ್ ತಂಡಕ್ಕೆ ದೊಡ್ಡ ಮೊತ್ತವನ್ನು ಟಾರ್ಗೆಟ್ ನೀಡಿದೆ. ಕೊನೆಯ ನಾಲ್ಕು ಬಾಲಿಗೆ ಕ್ರುನಾಲ್ ಪಾಂಡ್ಯ 20 ರನ್ ಸಿಡಿಸಿ ಮಿಂಚಿದರು.
Advertisement
Krunal Pandya 20* (4) pic.twitter.com/OHDSoz1V29
— Mumbai Indians (@mipaltan) October 4, 2020
Advertisement
ಆರಂಭಿಕರಾಗಿ ಅಂಗಳಕ್ಕಿಳಿದ ನಾಯಕ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮೊದಲ ಓವರ್ ನಲ್ಲಿ ಸಂದೀಪ್ ಶರ್ಮಾ ಎಸೆತದಲ್ಲಿ ಕೀಪರ್ ಜಾನಿ ಬೈರ್‍ಸ್ಪೋವ್ ಗೆ ಕ್ಯಾಚ್ ನೀಡಿದರು. ನಂತರ ಜೊತೆಯಾದ ಸೂರ್ಯಕುಮಾರ್ ಯಾದವ್ ಮತ್ತು ಕ್ವಿಂಟನ್ ಡಿ ಕಾಕ್ ಅವರು ತಾಳ್ಮೆಯ ಆಟಕ್ಕೆ ಮುಂದಾದರು. ಆದರೆ 5ನೇ ಓವರಿನ 4ನೇ ಬಾಲಿನಲ್ಲಿ ಸಿದ್ದಾರ್ಥ್ ಕೌಲ್ ಎಸೆದ ಎಸೆತವನ್ನು ಬೌಂಡರಿಗಟ್ಟುವ ತವಕದಲ್ಲಿ 27 ರನ್ ಗಳಿಸಿ ಸೂರ್ಯಕುಮಾರ್ ಯಾದವ್ ಔಟ್ ಆದರು.
Advertisement
WATCH – Safe hands Rashid.
Up high in the air, calls for it and takes it with success. Safe pair of hands from Rashid.https://t.co/qBm4EnGbRZ #Dream11IPL #MIvSRH pic.twitter.com/umj7b1Patm
— IndianPremierLeague (@IPL) October 4, 2020
Advertisement
ಆರು ಓವರ್ ಮುಕ್ತಾಯಕ್ಕೆ ಮುಂಬೈ ತಂಡ ಎರಡು ವಿಕೆಟ್ ಕಳೆದುಕೊಂಡು 48 ರನ್ ಸೇರಿಸಿತು. 6 ಓವರ್ ನಂತರ ಸ್ಫೋಟಕ ಆಟಕ್ಕೆ ಮುಂದಾದ ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶನ್ 10 ಓವರ್ ಮುಕ್ತಾಯದ ವೇಳೆಗೆ ತಂಡವನ್ನು 90ರ ಗಡಿ ಮುಟ್ಟಿಸಿದರು. ಉತ್ತಮವಾಗಿ ಬ್ಯಾಟ್ ಬೀಸಿದ ಈ ಜೋಡಿ 44 ಬಾಲಿಗೆ 78 ರನ್‍ಗಳ ಜೊತೆಯಾಟವಾಡಿತು. ನಂತರ 13ನೇ ಓವರಿನಲ್ಲಿ 39 ಬಾಲಿಗೆ 67 ರನ್ ಸಿಡಿಸಿದ್ದ ಕ್ವಿಂಟನ್ ಡಿ ಕಾಕ್ (4 ಫೋರ್, 4 ಸಿಕ್ಸ್) ಸಿಡಿಸಿ ರಶೀದ್ ಖಾನ್ ಅವರಿಗೆ ಔಟ್ ಆದರು.
FIFTY!
QDK brings up a fine half-century, his first in #Dream11IPL 2020 and 11th overall.#MIvSRH pic.twitter.com/gShfC7kHGd
— IndianPremierLeague (@IPL) October 4, 2020
ಇದಾದ ಬಳಿಕ ಇಶಾನ್ ಕಿಶಾನ್ ಅವರು 31 ರನ್ ಗಳಿಸಿ ಮನೀಶ್ ಪಾಂಡೆ ಹಿಡಿದ ಅದ್ಭುತ ಕ್ಯಾಚಿಗೆ ಬಲಿಯಾದರು. ಇದಾದ ನಂತರ ಒಂದಾದ ಕಿರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರ ಬ್ಯಾಟಿಂಗ್‍ಗೆ ಮುಂದಾದರು. ರೈಸರ್ಸ್ ಬೌಲರ್ ಗಳನ್ನು ದಂಡಿಸಿದ ಈ ಜೋಡಿ 25 ಬಾಲಿಗೆ 41 ರನ್‍ಗಳ ಜೊತೆಯಾಟವಾಡಿತು. ಆದರೆ ಇನ್ನಿಂಗ್ಸ್ ನ ಕೊನೆಯ ಓವರಿನ ಎರಡನೇ ಬಾಲಿನಲ್ಲಿ ಹಾರ್ದಿಕ್ ಪಾಂಡ್ಯ ಅವರು 28 ರನ್ ಗಳಿಸಿ ಔಟ್ ಆದರು.