ಕೋಲ್ಕತ್ತಾ: ನಟಿ ಮಣಿಯೊಬ್ಬರು ಕಾಂಡೋಮ್ ಚಿತ್ರವನ್ನು ಟ್ವೀಟ್ ಮಾಡಿ ಹಿಂದೂ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
2015ರಲ್ಲಿ ಬಂಗಾಳಿ ನಟಿ ಸಾಯೋನಿ ಘೋಷ್ ಶಿವಲಿಂಗವನ್ನು ಅವಹೇಳನ ಮಾಡಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿಂದೂ ನಂಬಿಕೆಯ ಪ್ರತೀಕವಾಗಿರುವ ಶಿವಲಿಂಗವನ್ನು ಅವಮಾನಿಸಿರುವ ಈ ಬಂಗಾಳಿ ನಟಿಯ ವಿರುದ್ಧವಾಗಿ ಅಸಂಖ್ಯಾತ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ದೂರು ಸಹ ದಾಖಲಾಗಿತ್ತು.
Advertisement
ಟ್ವೀಟ್‍ನಲ್ಲಿ ಏನಿದೆ?
ಸೀರೆಯುಟ್ಟ ಮಹಿಳೆಯೊಬ್ಬರು ಹಿಂದೂ ಧರ್ಮದ ಪಾವಿತ್ರತೆಯ ಸಂಕೇತವಾಗಿರವ ಶಿವಲಿಂಗಕ್ಕೆ ಕಾಂಡೋಮ್ ಹಾಕುತ್ತಿರುವ ಚಿತ್ರವಿತ್ತು. ದೇವರುಗಳು ಹೆಚ್ಚು ಉಪಯುಕ್ತವಾಗುತ್ತಿರಲಿಲ್ಲ ಎಂದು ಬರೆದು ಶಿವರಾತ್ರಿ ಪ್ರಯುಕ್ತವಾಗಿ 2015 ರಲ್ಲಿ ಸಹೋನಿ ಟ್ವೀಟ್ ಮಾಡಿದ್ದಳು.
Advertisement
Dear all, a post from 2015 has been brought to my notice which is extremely obnoxious..for all your information, I have joined twitter on 2010 and after a brief use I lost interest in carrying forward however the account remained. After a while my pr Bhaska Roy intimidated me
— saayoni ghosh (@sayani06) January 16, 2021
Advertisement
ಈ ಕುರಿತಾನಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಮಾಣದ ಆಕ್ರೋಶ ವ್ಯಕ್ತವಾಗಿತ್ತು. ಭಾರತೀಯ ದಂಡ ಸಂಹಿತೆ ಪ್ರಕಾರ ಇದು ಜಾಮೀನು ರಹಿತ ಅಪರಾಧವಾಗಿದೆ. ಈ ಕೂಡಲೇ ಸಾಯೋನಿ ವಿರುದ್ಧ ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದರು.
Advertisement
That my account has been hacked and we need to retrieve it immediately. For various reasons we could only do that after 2017 and I got back in touch with the Twitter world with a bang. We have skipped a few unnecessary post while deleting most and I would take strict measure to
— saayoni ghosh (@sayani06) January 16, 2021
ಸಯೋನಿ ಈ ಕುರಿತಾಗಿ ಕ್ಷಮೆಯಾಚಿಸಿದ್ದಳು. ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು ಎಂದು ಹಾರಿಕೆಯ ಉತ್ತರವನ್ನು ನೀಡಿದ್ದಳು. 2010ರಲ್ಲಿ ಖಾತೆಯನ್ನು ಆರಂಭಿಸಿದೆ. ಆದರೆ ಈ ಖಾತೆಯ ಬಳಕೆಯನ್ನು ನಾನು ಮಾಡಿರಲಿಲ್ಲ. 2015 ರಲ್ಲಿ ಟ್ವಿಟ್ಟರ್ ಖಾತೆಯ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟಿದ್ದೇನು. ಮತ್ತೆ ಖಾತೆಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದಾರೆ.