– ಒಂದಾಗಿ ಹೋದ್ರೆ ಅಧಿಕಾರಕ್ಕೆ ಬರ್ತಿವಿ, ಕಚ್ಚಾಟ ಇದ್ದರೆ ಬಿಜೆಪಿಗೆ ಲಾಭ
ಬೆಂಗಳೂರು: ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಘೋಷಣೆ ಮಾಡಿದವರ ಕುರಿತು ಇಂದು ಕಾಂಗ್ರೆಸ್ ಶಿಸ್ತುಪಾಲನ ಸಮಿತಿ ಸಭೆ ನಡೆಸಿದೆ. ಕೆಪಿಸಿಸಿ ಶಿಸ್ತು ಸಮಿತಿ ಸಭೆ ಕರೆದ ಅಧ್ಯಕ್ಷ ರೆಹಮಾನ್ ಖಾನ್ ವರ್ಚ್ಯೂವಲ್ ಸಭೆ ನಡೆಸಿದ್ದು, ಪಕ್ಷ ವಿರೋಧಿ ಹೇಳಿಕೆ ಸಾಕ್ಷ್ಯ ಸಂಗ್ರಹಿಸಲು ತೀರ್ಮಾನ ಮಾಡಲಾಗಿದೆ.
Advertisement
Advertisement
ರೆಹಮಾನ್ ಖಾನ್, ಕೋಳಿವಾಡ, ರಾಣೀಸತೀಶ್, ಮಲ್ಲಜಮ್ಮ ಧನಂಜಯ, ನಿವೇದಿತಾ ಆಳ್ವ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಪಕ್ಷಕ್ಕೆ ಸಂಘಟನೆಗೆ ಮಾರಕ ಹೇಳಿಕೆ ಕೊಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ಭಾಗವಾಗಿ ಶಾಸಕರುಗಳ ಹೇಳಿಕೆಯ ಸಾಕ್ಷ್ಯ ಸಂಗ್ರಹಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಾಕ್ಷ್ಯ ಸಿಕ್ಕ ನಂತರ ನೋಟೀಸ್ ನೀಡಿ ಕ್ಲಾರಿಫಿಕೇಷನ್ ಕೇಳುವ ಬಗ್ಗೆ ಇಂದಿನ ತೀರ್ಮಾನಿಸಲಾಗಿದೆ. ಸಾಕ್ಷ್ಯ ಸಂಗ್ರಹವಾಗುತ್ತಿದ್ದಂತೆ ಮುಂದಿನ ಸಭೆ ನಡೆಸಿ ಪಕ್ಷಕ್ಕೆ ಡ್ಯಾಮೇಜ್ ಮಾಡಿದವರಿಗೆ ನೋಟಿಸ್ ಜಾರಿಗೆ ನಿರ್ಧಾರ ಶಾಸಕ ಜಮೀರ್ ಅಹಮ್ಮದ್ ಸೇರಿದಂತೆ ಒಟ್ಟು 8 ಶಾಸಕರಿಂದ ಮುಂದಿನ ಸಿಎಂ ಹೇಳಿಕೆ ನೀಡಿದ್ದರು. ಸಭೆ ಬಳಿಕ ಮಾರನಾಡಿದ ಶಿಸ್ತುಪಾಲನ ಸಮಿತಿ ಅಧ್ಯಕ್ಷ ರಹೆಮಾನ್ ಖಾನ್ ಪಕ್ಷದಲ್ಲಿ ಮುಂದಿನ ಸಿಎಂ ಹೇಳಿಕೆ ಸಂಬಂಧ ನಾವು ಸುಮೋಟು ಕೇಸ್ ತೆಗೆದುಕೊಂಡಿದ್ದೇವೆ, ಸುರ್ಜೇವಾಲಾ ಸಹ ಮಾತನಾಡಬೇಡಿ ಎಂದು ಹೇಳಿದ್ದಾರೆ.
Advertisement
Advertisement
ಅವರ ಹೇಳಿಕೆ ಆಧರಿಸಿ ಸುಮೋಟು ತೆಗೆದುಕೊಂಡಿದ್ದೇವೆ. ನಮ್ಮ ಬಳಿ ಯಾವುದೇ ದಾಖಲೆ ಇರಲಿಲ್ಲ. ವೀಡಿಯೋ ಕ್ಲಿಪ್ ಇರಲಿಲ್ಲ, ಪೇಪರ್ ಕಟ್ಟಿಂಗ್ಸ್ ಸಹ ಇರಲಿಲ್ಲ. ಇಂದು ಶಿಸ್ತು ಸಮಿತಿ ಸಭೆ ನಡೆಸಿದ್ದೇವೆ. ಇತ್ತೀಚೆಗೆ ಕೆಲ ಶಾಸಕರು ನೀಡಿರುವ ಹೇಳಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಂದಿನ ಸಿಎಂ ಹೇಳಿಕೆ ಶಿಸ್ತು ಉಲ್ಲಂಘನೆ ಆಗಿದೆ.ಇದರ ಬಗ್ಗೆ ಸುಧೀರ್ಘ ಚರ್ಚೆ ಆಗಿದೆ. ಶಾಸಕರು ಏನು ಹೇಳಿಕೆ ಕೊಟ್ಟಿರುವುದರ ಬಗ್ಗೆ ಮಾಹಿತಿ ಬೇಕಿದೆ. ದಾಖಲೆ ಕಲೆ ಹಾಕಬೇಕಿದೆ. ಹೀಗಾಗಿ ಮುಂದಿನ ವಾರಕ್ಕೆ ಸಭೆ ಮುಂದೂಡಿಕೆ ಆಗಿದೆ. ಮುಂದಿನ ಸಿಎಂ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಮಾರಕ ಶಿಸ್ತು ಉಲ್ಲಂಘನೆ. ಈ ಹಿಂದೆ ಆರ್‍ಆರ್ ನಗರ ಉಪಚುನಾವಣೆಯಲ್ಲಿ ಕೆಲವರ ಕೊಟ್ಟ ಹೇಳಿಕೆ ಬಗ್ಗೆ ಸಹ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಮೊದಲು ಲಸಿಕೆ, ನಂತರ ಮನ್ ಕೀ ಬಾತ್: ರಾಹುಲ್ ಕಿಡಿ
ಸಾರ್ವಜನಿಕವಾಗಿ ಹೇಳಿಕೆ ಕೊಡುವ ಅಧಿಕಾರ ಶಾಸಕರಿಗಿಲ್ಲ ಏನೇ ಇದ್ದರು ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ಮಾಡಿ. ಮುಂದಿನ ಸಿಎಂ ಯಾರು ಎಂದು ಹೇಳಕ್ಕೆ ನಿಮಗೆ ಅಧಿಕಾರ ಇಲ್ಲ.ನೀವು ಕೆಪಿಸಿಸಿ ಗೆ ಹೋಗಿ ಅಧ್ಯಕ್ಷರಿಗೆ ಹೇಳಿ. ಎಐಸಿಸಿಗೆ ಹೋಗಿ ಅಧ್ಯಕ್ಷರಿಗೆ ತಿಳಿಸಿ. ಪಕ್ಷಕ್ಕೆ ಬಂದ ಮೇಲೆ ಪಕ್ಷದ ಸಂಪ್ರದಾಯ ನಾವು ಅನುಸರಿಸಬೇಕು. ಕಾಂಗ್ರೆಸ್ ಪಕ್ಷ ಬೆಳೆದಿದ್ದೆ ಶಿಸ್ತಿನಿಂದ. ಪಕ್ಷದಿಂದ ನಾವು ನಮ್ಮಿಂದ ಪಕ್ಷ ಅಲ್ಲ.ಇದನ್ನ ಲೀಡರ್ಸ್ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹುಡುಗಿಯರ ಮೇಕಪ್ ಕಿಟ್‍ನಲ್ಲಿ ಇರಲೇಬೇಕಾದ 5 ಬ್ಯೂಟಿ ಪ್ರೊಡಕ್ಟ್‌ಗಳು
ನಾಯಕರನ್ನ ಕಾರ್ಯಕರ್ತರು ನೋಡುತ್ತಿದ್ದಾರೆ. ಹೀಗಾಗಿ ಸಮಸ್ಯೆ ಆಗಬಾರದು. ನಾವು ಒಂದಾಗಿ ಹೋದ್ರೆ ಅಧಿಕಾರಕ್ಕೆ ಬರ್ತಿವಿ. ನಮ್ಮಲ್ಲಿಯೇ ಕಚ್ಚಾಟ ಇದ್ದರೆ ಬಿಜೆಪಿಗೆ ಲಾಭ ಆಗುತ್ತೆ. ನಿನ್ನೆ ಕೋಳಿವಾಡ ಸಹ ಇದನ್ನೇ ಹೇಳಿದ್ದಾರೆ. ಪಕ್ಷ ಮುಖ್ಯ, ಶಿಸ್ತು ಮುಖ್ಯ, ಪಕ್ಷಕ್ಕೆ ಶಿಸ್ತಿನ ಇತಿಹಾಸ ಇದೆ.ನೆಹರು ಪಟೇಲ್ ಶಿಸ್ತಿನಿಂದ ಇದ್ದರು, ಅವರಿಂದಲೇ ಈ ಪಕ್ಷ ಇದನ್ನ ನಾವು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.