– ನನ್ನ ಮಗ ಕೈ ಸೇರೋದು ಗೊತ್ತಿಲ್ಲ ಅಂದ್ರು ಬಚ್ಚೇಗೌಡ
ಚಿಕ್ಕಬಳ್ಳಾಪುರ: ಹೊಸಕೋಟೆ ಪಕ್ಷೇತರ ಶಾಸಕ ಶರತ್ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಜ್ಜಾಗಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾರನ್ನು ಶರತ್ ಭೇಟಿಯಾಗಿ ಖಚಿತ ಪಡಿಸಿದ್ದಾರೆ.
Advertisement
ಈ ಬಗ್ಗೆ ಶರತ್ ತಂದೆ ಬಚ್ಚೇಗೌಡ ಪ್ರತಿಕ್ರಿಯಿಸಿ, ಸತ್ಯವಾಗಲೂ ನನ್ನ ಮಗ ಕಾಂಗ್ರೆಸ್ ಸೇರುವ ವಿಚಾರ ನನಗೆ ಗೊತ್ತಿಲ್ಲ. ಯಾವತ್ತು ಸೇರ್ತಾರೆ ಅಂತ ನನಗೆ ಗೊತ್ತಿಲ್ಲ. ನಾನು ಪದೇ ಪದೇ ಹೇಳಿದ್ದೇನೆ. ಇನ್ನು ನನ್ನ ಮಗನಿಗೆ ಬಿಟ್ಟ ವಿಚಾರ. ಈಗಾಗಲೇ ಎಂಟಿಬಿ ನಾಗರಾಜ್ ಬಿಜೆಪಿ ಸೇರಿ ಮಂತ್ರಿಯೂ ಆಗಿದ್ದಾರೆ. ಹೀಗಾಗಿ ನನ್ನ ಮಗ ರಾಷ್ಟ್ರೀಯ ಪಕ್ಷ ಸೇರಬೇಕಾಗುತ್ತದೆ. ನನ್ನ ಮಗ ಏನ್ ಮಾಡಬೇಕು ಅಂತ ನನ್ನ ಮಗ ಯಾವತ್ತು ಕೇಳಿಲ್ಲ. ನನ್ನ ಅವಧಿ 4 ವರ್ಷ ಇದೆ 82 ನೇ ವರ್ಷಕ್ಕೆ ನಿವೃತ್ತಿ ಆಗೋದು. ನಾನು ಈಗ ಬಿಜೆಪಿಯಲ್ಲೇ ಇದ್ದೀನಿ ನಾನು ಬದಲಾಯಿಸುವ ಸ್ಥಿತಿಯಲ್ಲಿಲ್ಲ ಎಂದರು.
Advertisement
Advertisement
ಮಗನಿಗೆ ಇನ್ನೂ ಎರಡೂವರೆ ವರ್ಷಕ್ಕೆ ಅಸೆಂಬ್ಲಿ ಎಲೆಕ್ಷನ್ ಬರಲಿದೆ. ರಾಜಕೀಯ ದಿನದಿಂದ ದಿನಕ್ಕೆ ತಿರುವ ಪಡೆದುಕೊಳ್ತಿದೆ. ಇಬ್ಬರು ಜೊತೆ ಜೊತೆಯಲ್ಲಿ ಹೋಗ್ತೀವಾ ಅಂತ ಈಗಲೇ ಹೇಳೋಕೆ ಬರಲ್ಲ. ಮುಂದೆ ದೇಶದಲ್ಲಿ ರಾಜಕಾರಣ ನೋಡಿಕೊಂಡು ತೀರ್ಮಾನ ಮಾಡಬಹುದು. ಹೀಗಾಗಿ ನನ್ನ ಪಾಡಿಗೆ ನಾನು ಬಿಜೆಪಿಯಲ್ಲಿ ಕೆಲಸ ಮಾಡಿಕೊಂಡು ಹೋಗ್ತೇನೆ. ನಾನು ನ್ಯಾಯವಾಗಿ ಬಿಜೆಪಿಯಲ್ಲಿ ನಡೆದುಕೊಂಡು ಹೋಗ್ತಾ ಇದ್ದೀನಿ ಎಂದರು.
Advertisement
ಇದೇ ವೇಳೆ ರಾಮಮಂದಿರ ದೇಣಿಗೆ ವಿಚಾರದಲ್ಲಿ ಮಾಜಿ ಸಿಎಂಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಮಮಂದಿರ ವಿಚಾರದಲ್ಲಿ ಎಲ್ಲರಿಗೂ ಗೌರವ ಇರಬೇಕು. ಒಳ್ಳೆಯ ಕಾರ್ಯ ಯಾರೇ ಮಾಡಿದ್ರೂ ಮೆಚ್ಚಬೇಕು. ಇದು ಪಕ್ಷಗಳ ಧೋರಣೆ ತೋರಿಸುವ ವಿಚಾರ ಅಲ್ಲ. ರಾಮಮಂದಿರಕ್ಕೆ ಅಪಪ್ರಚಾರ ಮಾಡಿದರೇ ತಪ್ಪು ಅಂತ ಹೇಳಬೇಕು. ರಾಮಮಂದಿರ ಕಟ್ಟುವ ಒಳ್ಳೆಯ ಕಾರ್ಯ ಮೆಚ್ಚಬೇಕು. ದೇವರ ವಿಷಯದಲ್ಲಿ ತಪ್ಪು ಮಾಡಿದವನಿಗೆ ಆ ಪಾಪ ಅವನಿಗೆ ಮುಚ್ಚಿಕೊಳ್ಳುತ್ತೆ. ದೇವರ ಹೆಸರಲ್ಲಿ ವಸೂಲಿ ದುರುಪಯೋಗ ಮಾಡಿಕೊಂಡರೆ ಪಾಪ ಅವರಿಗೆ ಮುಚ್ಚಿಕೊಳ್ಳುತ್ತೆ. ತಪ್ಪು ಅಲ್ವಾ..? ದೇವರ ಹೆಸರಲ್ಲಿ ಯಾರಾದ್ರಾ ಮಾಡ್ತಾರಾ..? ಭಕ್ತಿಪೂರ್ವಕವಾಗಿ ತಾನೇ ಜನ ಕೊಡೋದು ಎಂದು ಹೇಳಿದರು.
ರಾಮಮಂದಿರ ಕಟ್ಟಲು ಮುಖಂಡರು ಹೋಗಿ ಹಣ ಕೇಳೋದು ತಪ್ಪಲ್ಲ. ಆದ್ರೆ ಅದರ ಹೆಸರಿನಲ್ಲಿ ತಪ್ಪು ಮಾಡೋದು ಸರಿಯಲ್ಲ ಅಂತ ಹೇಳಬೇಕು. ದುರ್ಬಳಕೆ ಮಾಡೋದು ತಪ್ಪು ಅಂತ ನಾನು ಹೇಳ್ತೀನಿ. ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು. ದೇಶದಲ್ಲಿ 600 ಕೋಟಿ ಹಣ ಸಂಗ್ರಹ ಆಗಿದ್ದು, ಕರ್ನಾಟಕದಲ್ಲಿ 80 ಕೋಟಿ ಆಗಿದೆ ಎಂದರು.