– ಅಂದು ತನ್ವೀರ್ ಸೇಠ್, ಇಂದು ಅಖಂಡ ಶ್ರೀನಿವಾಸಮೂರ್ತಿ
– ಎಸ್‌ಡಿಪಿಐ, ಪಿಎಫ್‍ಐ ಭಯೋತ್ಪಾದನೆ ಸೃಷ್ಟಿಸುತ್ತಿವೆ
ಬೆಂಗಳೂರು: ಅಂದು ತನ್ವೀರ್ ಸೇಠ್, ಇಂದು ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ ತಾನೇ ಗೊಬ್ಬರ ಹಾಕಿ ಬೆಳೆಸಿದ ಸಂಘಟನೆಗಳು ಇಂದು ಶಾಸಕರನ್ನು ಬಲಿ ಪಡೆಯುತ್ತಿವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರಿಹಾಯ್ದಿದ್ದಾರೆ.
“ಅಂದು ತನ್ವೀರ್ ಸೇಠ್,ಇಂದು ಅಖಂಡ ಶ್ರೀನಿವಾಸ ಮೂರ್ತಿ”ಕಾಂಗ್ರೆಸ್ ತಾನೇ ಗೊಬ್ಬರ ಹಾಕಿ ಪೋಷಿಸಿ,ರಕ್ಷಿಸಿದ SDPI,PFIಎಂಬ ಒಂದೇ ಮುಖದ ವಿಧ್ವಂಸಕ ಸಂಘಟನೆಗಳು ಇಂದು ಕಾಂಗ್ರೆಸ್ ಶಾಸಕರುಗಳನ್ನೇ ಬಲಿ ತೆಗೆದುಕೊಳ್ಳಬೇಕೆಂಬಷ್ಟರ ಮಟ್ಟಿಗೆ ಭಯೋತ್ಪಾದನೆ ಸೃಷ್ಟಿಸುತ್ತಿದ್ದರೂ ಕಾಂಗ್ರೆಸ್ ಇನ್ನೂ ಈ ಸಂಘಟನೆಗಳ ವಿರುದ್ಧ ಸೊಲ್ಲೆತ್ತುತ್ತಿಲ್ಲವೇಕೆ?
— Vijayendra Yeddyurappa (@BYVijayendra) August 12, 2020
ಈ ಕುರಿತು ಟ್ವೀಟ್ ಮಾಡಿರುವ ಅವರು, ಅಂದು ತನ್ವೀರ್ ಸೇಠ್, ಇಂದು ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ ತಾನೇ ಗೊಬ್ಬರ ಹಾಕಿ ಪೋಷಿಸಿ, ರಕ್ಷಿಸಿದ ಎಸ್‍ಡಿಪಿಐ, ಪಿಎಫ್‍ಐ ಎಂಬ ಒಂದೇ ಮುಖದ ವಿಧ್ವಂಸಕ ಸಂಘಟನೆಗಳು ಇಂದು ಕಾಂಗ್ರೆಸ್ ಶಾಸಕರುಗಳನ್ನೇ ಬಲಿ ತೆಗೆದುಕೊಳ್ಳಬೇಕೆಂಬಷ್ಟರ ಮಟ್ಟಿಗೆ ಭಯೋತ್ಪಾದನೆ ಸೃಷ್ಟಿಸುತ್ತಿವೆ. ಇಷ್ಟಾದರೂ ಕಾಂಗ್ರೆಸ್‍ಇನ್ನೂ ಈ ಸಂಘಟನೆಗಳ ವಿರುದ್ಧ ಸೊಲ್ಲೆತ್ತುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ನಡೆದ ಗಲಭೆ ಪ್ರಕರಣದ ಕುರಿತು ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ನಾಯಕರತು ಸಹ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರೋರಾತ್ರಿ ಶಾಸಕರ ಮನೆ, ಪೊಲೀಸ್ ಠಾಣೆ ಸುಟ್ಟು ದುಷ್ಕರ್ಮಿಗಳು ವಿಕೃತಿ ಎರೆದಿದ್ದಾರೆ. ಈ ಕುರಿತು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ವಿಜಯೇಂದ್ರ ಸಹ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.