ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮುನಿರತ್ನ ಜಯಗಳಿಸಿದ ಬೆನ್ನಲ್ಲೇ ಬಿಜೆಪಿ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಕಾಲೆಳೆದಿದೆ.
ಪ್ರಚಾರದ ಸಮಯದಲ್ಲಿ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಲೆಯೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆಇಂದು ತಿರುಗೇಟು ನೀಡಿದ ಬಿಜೆಪಿ, ಅಯ್ಯೋ ಸಿದ್ದರಾಮಯ್ಯನವರೇ ಆರ್. ಆರ್ ನಗರದಲ್ಲಿ ಕಾಂಗ್ರೆಸ್ಸ್ ಪಕ್ಷವೇ ಇಲ್ಲವಲ್ಲ ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕವಾಗಿ ವಂಗ್ಯವಾಡಿದೆ.
Advertisement
ಟ್ವೀಟ್‍ನಲ್ಲಿ ಏನಿದೆ?
ಸಿದ್ದರಾಮಯ್ಯ: ರಾಜರಾಜೇಶ್ವರಿನಗರದಲ್ಲಿ ಬಿಜೆಪಿಯ ಅಲೆಯೇ ಇಲ್ಲ
ಮತದಾರ: ಅಯ್ಯೋ ಸಿದ್ದರಾಮಯ್ಯನವರೇ ಇಲ್ಲಿ ನಿಮ್ಮ ಕಾಂಗ್ರೆಸ್ ಪಕ್ಷವೇ ಇಲ್ಲವಲ್ಲ
Advertisement
Advertisement
ಸಿದ್ದರಾಮಯ್ಯ: ರಾಜರಾಜೇಶ್ವರಿನಗರದಲ್ಲಿ ಬಿಜೆಪಿಯ ಅಲೆಯೇ ಇಲ್ಲ . . .
ಮತದಾರ: ಅಯ್ಯೋ @siddaramaiah ನವರೇ ಇಲ್ಲಿ ನಿಮ್ಮ @INCKarnataka ಪಕ್ಷವೇ ಇಲ್ಲವಲ್ಲ ! ! ! #CONgressComedianSiddaramaiah
— BJP Karnataka (@BJP4Karnataka) November 10, 2020
Advertisement
ಬಿಜೆಪಿ ಈ ರೀತಿ ಬರೆಯುವುದರ ಜೊತೆಗೆ ಕಾಂಂಗ್ರೆಸ್ ಕಾಮಿಡಿಯನ್ ಸಿದ್ದರಾಮಯ್ಯ ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.
ಆರ್.ಆರ್. ನಗರ ಮತ ಎಣಿಕೆ ಮುಕ್ತಾಯಗೊಂಡಿದ್ದು, ಮುನಿರತ್ನ ಅವರು 57,936 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಕಳೆದ ಚುನಾವಣೆಗಿಂತ ಎರಡು ಪಟ್ಟು ಮತ ಪಡೆದು ಗೆಲುವು ಕಂಡಿದ್ದಾರೆ.
ಮುನಿರತ್ನ 1,25,734 ಮತಗಳನ್ನು ಪಡೆದರೆ ಕುಸುಮಾ 67,798 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಕೇಶವಮೂರ್ತಿ 10,251 ಮತಗಳನ್ನು ಪಡೆದಿದ್ದಾರೆ.