– ಒಬ್ಬರು ಚಿನ್ನ, ಮತ್ತೊಬ್ಬರು ಬೆಳ್ಳಿ ಕದ್ರು
ತಿರುವನಂತಪುರ: ವಿಧಾನಸಭಾ ಚುನಾವಣೆ ಹಿನ್ನೆಲೆ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಲಕ್ಕಾಡದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ. ಕೇರಳದ ಜನತೆ ಎಲ್‍ಡಿಎಫ್-ಯುಡಿಎಫ್ ರಾಜಕಾರಣಕ್ಕೆ ಬೇಸತ್ತಿದ್ದು, ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಹೇಳಿದರು.
ಐದು ವರ್ಷ ಒಬ್ಬರು ಲೂಟಿ ಮಾಡ್ತಾರೆ, ಮತ್ತೈದು ವರ್ಷ ಮತ್ತೊಬ್ಬರು ಕನ್ನ ಹಾಕ್ತಾರೆ. ಒಬ್ಬರು ಚಿನ್ನ ಮತ್ತು ಮತ್ತೊಬ್ಬರು ಬೆಳ್ಳಿ ಕದ್ದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಂದೇ ಆಗಿವೆ. ಉತ್ತರ ಪ್ರದೇಶದಲ್ಲಿ ಜೊತೆಯಾಗಿದ್ದು, ಚುನಾವಣೆ ಹಿನ್ನೆಲೆ ಇಲ್ಲಿ ಪ್ರತ್ಯೇಕವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
The fixed match of UDF and LDF is going to be rejected by Kerala. Watch from Palakkad. https://t.co/iFfxm5PY6b
— Narendra Modi (@narendramodi) March 30, 2021
Advertisement
ಕೇರಳ ವಿಕಾಸದ ಕುರಿತು ಮಾತನಾಡಿ ಮತಯಾಚನೆ ಮಾಡಿದರು. ದೇಶದ ಜನತೆ ವಿಕಾಸ ಮತ್ತು ವಿಶ್ವಾಸದ ಮೇಲೆ ಬಿಜೆಪಿ ಜೊತೆ ಕೈ ಜೋಡಿಸುತ್ತಿದ್ದಾರೆ ಎಂದು ಹೇಳಿದರು. ಈ ವೇದಿಕೆ ಮೇಲಿದ್ದ ಮೆಟ್ರೋ ಮ್ಯಾನ್ ಇ.ಶ್ರೀಧರನ್ ಅವರನ್ನ ಹಾಡಿ ಹೊಗಳಿದರು. ಕೆಲವರು ಸ್ವಾರ್ಥ ಅಥವಾ ತಮ್ಮ ಲಾಭಕ್ಕಾಗಿ ರಾಜಕಾರಣಕ್ಕೆ ಬರುತ್ತಾರೆ. ಆದ್ರೆ ಶ್ರೀಧರನ್, ತಮ್ಮ ಜೀವನವನ್ನೇ ದೇಶಕ್ಕೆ ಅರ್ಪಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿಯೂ ಕೇರಳ ಜನತೆಯ ಸೇವೆಗೆ ಮುಂದಾಗಿದ್ದಾರೆ ಎಂದು ಹೇಳಿದರು.
Advertisement
യുഡിഎഫും എൽഡിഎഫും വികസന പ്രവർത്തനങ്ങൾക്ക് വഴിമുടക്കി വികസനത്തിന്റെ വേഗത കുറയ്ക്കുന്നു.
അതുകൊണ്ടാണ് ബിജെപി FAST വികസനം കേരളത്തിന് വാഗ്ദാനം ചെയ്യുന്നത് : PM @narendramodi#KeralaWithModi pic.twitter.com/oCxFpEYSJh
— BJP KERALAM (@BJP4Keralam) March 30, 2021