ಶಿವಮೊಗ್ಗ: ಕಾಂಗ್ರೆಸ್ ಪಕ್ಷಕ್ಕೆ ಕಳೆದ ಎರಡು ವರ್ಷದಿಂದ ಒಬ್ಬ ಯೋಗ್ಯ ಅಧ್ಯಕ್ಷನನ್ನು ಹುಡುಕಿಕೊಳ್ಳುವಂತಹ ಯೋಗ್ಯತೆ ಇಲ್ಲ. ಇಂತಹ ಪಕ್ಷದಿಂದ ಬಿಜೆಪಿ ಪಕ್ಷ ಮಣಿಸುವುದು ಸಾಧ್ಯವೇ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
Advertisement
ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಆರ್‍ಎಸ್‍ಎಸ್ ಹಾಗೂ ಬಿಜೆಪಿ ಪಕ್ಷದವರು ಹಿಂದುತ್ವವಾದಿಗಳು ಎಂದು ಹೇಳಿಕೊಂಡು ನಾಟಕ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನಾನು ನಿಜವಾದ ಹಿಂದೂ ಪಂಡಿತ ಎಂದು ಕಾಶ್ಮೀರಕ್ಕೆ ಭೇಟಿ ನೀಡಿದ್ದಂತಹ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ ಆದರೆ ಇದಕ್ಕೆಲ್ಲ ಜನ ಮರುಳಾಗುವುದಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ದಾವಣಗೆರೆ ಸಜ್ಜು
Advertisement
Advertisement
ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೇಗಾದರೂ ಮಾಡಿ ದೂರ ಇಡಬೇಕು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬಾರದು ಎಂಬ ತಿರುಕನ ಕನಸು ಕಾಣುತ್ತಿದ್ದಾರೆ. ವಿಪಕ್ಷಗಳನ್ನು ಒಗ್ಗೂಡಿಸಿ, ಮೋದಿಯವರನ್ನು ಮಣಿಸಿ ತಾವು ನಾಯಕರಾಗಬೇಕು ಎಂದು ರಾಹುಲ್ ಗಾಂಧಿ ಹೊರಟಿದ್ದಾರೆ. ಅದಕ್ಕೂ ಮೊದಲು ನಿಮ್ಮ ಪಕ್ಷಕ್ಕೆ ಯೋಗ್ಯ ಅಧ್ಯಕ್ಷನನ್ನು ಹುಡುಕಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಮ್ಮ ಮೆಟ್ರೋ ರೈಲು ಸೇವಾವಧಿ ವಿಸ್ತರಣೆ
Advertisement
ಸ್ಥಾನಮಾನ ವರಿಷ್ಟರು ನಿರ್ಧರಿಸುತ್ತಾರೆ:
ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಸೇರಲು ಬಿ.ವೈ ವಿಜಯೇಂದ್ರ ಲಾಬಿ ಮಾಡುತ್ತಿದ್ದಾರೆ ಎಂಬುದು ಕೇವಲ ಊಹಾ ಪೋಹ ಅಷ್ಟೇ. ಸದ್ಯ ನಾನೊಬ್ಬ ಬಿಜೆಪಿ ಕಾರ್ಯಕರ್ತ, ರಾಜ್ಯ ಬಿಜೆಪಿ ಉಪಾಧ್ಯಕ್ಷ. ಪಕ್ಷ ಏನನ್ನು ಸೂಚಿಸುತ್ತದೋ ಆ ಕೆಲಸ ಮಾಡುತ್ತೇನೆ. ಮಂತ್ರಿ ಮಂಡಲಕ್ಕೆ ಸೇರುವ ಬಗ್ಗೆ ಯಾವುದೇ ಲಾಬಿ ಮಾಡಿಲ್ಲ. ಮಾಡುವುದು ಇಲ್ಲ. ನಮ್ಮ ಪಕ್ಷ, ನಮ್ಮ ನಾಯಕರು ಯಾರಿಗೆ ಯಾವ ಸ್ಥಾನಮಾನವನ್ನು ಯಾವ ಸಂದರ್ಭದಲ್ಲಿ ನೀಡಬೇಕು ಎಂಬುದನ್ನು ತೀರ್ಮಾನಿಸುತ್ತಾರೆ. ಮಂತ್ರಿ ಮಂಡಲಕ್ಕೆ ಸೇರ್ಪಡೆ ಆಗುವುದು, ಚುನಾವಣೆಗೆ ಸ್ಪರ್ಧಿಸುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.