ಧಾರವಾಡ: ಕಾಂಗ್ರೆಸ್‍ನಲ್ಲಿ ಈಗಲೇ ಹತ್ತಿಪ್ಪತ್ತು ಜನ ಸಿಎಂ ಸೂಟ್‍ಗೆ ಆರ್ಡರ್ ಕೊಟ್ಟಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪೂರ ನಾಗೇಂದ್ರ ಲೇವಡಿ ಮಾಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರೋಧ ಪಕ್ಷದ ಜವಾಬ್ದಾರಿ ನಿರ್ವಹಣೆ ಮಾಡುತ್ತಿಲ್ಲ, ಕಾಂಗ್ರೆಸ್‍ನ ಹತ್ತಿಪ್ಪತ್ತು ಜನ ಸಿಎಂ ಸೂಟ್‍ಗೆ ಆರ್ಡರ್ ಕೊಟ್ಟಿದ್ದಾರೆ. ಏಕೆಂದರೆ ಸಿಎಂ ಆದ ಮೇಲೆ ಅವರು ಪ್ರಮಾಣ ವಚನ ಸ್ವೀಕರಿಸಲು ಡ್ರೆಸ್ ಹಾಕಿಕೊಳ್ಳಬೇಕಲ್ವಾ ಎಂದಿದ್ದಾರೆ.
Advertisement
Advertisement
ಜನ ಬಹುಮತವನ್ನೇ ಕೊಟ್ಟಿಲ್ಲ, ಆದರೂ 10 ರಿಂದ 20 ಜನ ಸಿಎಂ ಕನಸು ಹೊತ್ತಿದ್ದಾರೆ. ಚುನಾವಣೆ ಇನ್ನೂ ಎರಡು ವರ್ಷ ಇದೆ. ಆಗಲೇ ಮುಂಬೈ, ಮೈಸೂರು, ದೆಹಲಿ, ಬೆಂಗಳೂರು, ಕೋಲ್ಕತಾದ ಟೇಲರ್ ಅಂಗಡಿಗೆ ಸೂಟ್ ಆರ್ಡರ್ ಕೊಟ್ಟಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದೆಯಾ, ಜನರ ಸಮಸ್ಯೆಗೆ ಸ್ಪಂದಿಸುವ ವಿರೋಧ ಪಕ್ಷನಾ ಇದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ
Advertisement
ಈಗಲೇ ಕಾಂಗ್ರೆಸ್ ನವರು ನಾನು ಸಿಎಂ, ನೀನು ಸಿಎಂ ಅಂತಾ ಬೀದಿಯಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ನಾಗೇಂದ್ರ ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಂ ವಿರುದ್ಧ ಭ್ರಷ್ಟಾಚಾರ ಆರೋಪ -ಯತ್ನಾಳ್‍ಗೆ ಬಿಎಸ್‍ವೈ ಅಭಿಮಾನಿಗಳಿಂದ ಘೆರಾವ್
Advertisement