ದಾವಣಗೆರೆ: ನಾವು ಕಾಂಗ್ರೆಸ್ ನಲ್ಲಿರುವ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳನ್ನು ಸೆಳೆಯುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿಯವರನ್ನು ಸೆಳೆಯಲು ಆಹ್ವಾನ ಮಾಡಿದ್ದ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಬಿಜೆಪಿಯವರನ್ನು ಸೆಳೆಯಲು ಆಹ್ವಾನ ಮಾಡಿದ್ದು, ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೇ ನಾವು ಕಾಂಗ್ರೆಸ್ಸಿಗರನ್ನು ಸೆಳೆಯುತ್ತೇವೆ. ಬಿಜೆಪಿಯಲ್ಲಿ ನಾವು 17 ಶಾಸಕರು ಸಂತೋಷದಿಂದ ನೆಮ್ಮದಿಯಾಗಿದ್ದೇವೆ ಎಂದು ಹೇಳುವ ಮೂಲಕವಾಗಿ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಜನ ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡಿಕೊಳ್ಳದಿರುವುದು ಆತಂಕಕ್ಕೆ ಕಾರಣ: ಮೋದಿ
Advertisement
ದಾವಣಗೆರೆ ಜಿಲ್ಲೆಯಲ್ಲಿ ಮರಗಿಡಗಳನ್ನು ಬೆಳೆಸುವ ಉದ್ದೇಶದಿಂದ ಬೀಜದುಂಡೆಗಳನ್ನು ತಯಾರಿಸಲಾಗಿದ್ದು ಈ ಉಂಡೆಯನ್ನು ಭೂಮಿಗೆ ಹಾಕಲಾಯಿತು. ಮುಂಬರುವ ದಿನಗಳಲ್ಲಿ ಈ ಭೂಮಿಯು ಹಸಿರಿನಿಂದ ತುಂಬಿರುತ್ತದೆ. @BSYBJP@nalinkateel@DVSadanandGowda@BJP4Karnataka#davanagere pic.twitter.com/eGxuzyiO0S
— Byrathi Basavaraja (@BABasavaraja) July 13, 2021
Advertisement
ಕಮಲದ ಚಿಹ್ನೆಯಡಿ ಬಂದ ನಾವು ನೆಮ್ಮದಿಯಾಗಿ ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾದ ನಂತರ 17 ಬಾರಿ ಜಿಲ್ಲೆಗೆ ಬಂದಿದ್ದೇನೆ, ಮುಂದೆ 10 ದಿನಗಳಿಗೊಮ್ಮೆ ದಾವಣಗೆರೆ ಜಿಲ್ಲೆಗೆ ಬರುತ್ತೇನೆ. ನಗರ ಪ್ರದೇಶ ಬಿಟ್ಟು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡುತ್ತೇವೆ. ಗ್ರಾಮಗಳಲ್ಲಿನ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ಮೊಬೈಲ್‍ಗೆ ಗ್ರಾ.ಪಂ. ಸದಸ್ಯನಿಂದ ಅಶ್ಲೀಲ ಮೆಸೇಜ್
Advertisement
ದಾವಣಗೆರೆ ಸಂಸದರಾದ ಶ್ರೀ ಜಿ ಎಂ ಸಿದ್ದೇಶ್ವರ್ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ವೀರೇಶ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.#davanagere
— Byrathi Basavaraja (@BABasavaraja) July 13, 2021
Advertisement
ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬಗಳಿಗೆ ಪರಿಹಾರದ ಚೆಕ್ ನೀಡುತ್ತಿದ್ದು, ಒಂದು ವೇಳೆ ಬಿಪಿಎಲ್ ವ್ಯಾಪ್ತಿಗೆ ಬರುವುದಿಲ್ಲವೆಂದರೆ ಅಂತಹ ಕುಟುಂಬಗಳಿಗೆ ವೈಯಕ್ತಿಕವಾಗಿ ಪರಿಹಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.