– 1962ರ ನೆಹರು ಭಾರತವಲ್ಲ, 2020ರ ಮೋದಿ ಭಾರತ
ಮೈಸೂರು: ಇದು 1962ರ ನೆಹರು ಭಾರತವಲ್ಲ. 2020ರ ಮೋದಿ ಭಾರತ. ಈಗ ಪ್ರಧಾನಿಯಾಗಿರೋದು ಮೋದಿ. ಹೀಗಾಗಿ ನೆಹರು ರೀತಿ ಸೋತು ಶರಣಾಗುವ ಮನಸ್ಥಿತಿ ನರೇಂದ್ರ ಮೋದಿ ಅವರಲ್ಲಿ ಇಲ್ಲ. ತಕ್ಕ ಉತ್ತರ ಕೊಡುವ ಮನಸ್ಥಿತಿ ಮೋದಿ ಅವರಲ್ಲಿದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಚೀನಾ ಭಾರತದ ಜೊತೆ ಪೂರ್ಣ ಪ್ರಮಾಣದ ಯುದ್ಧ ಮಾಡುವಂತ ದುಸ್ಸಾಹಸಕ್ಕೆ ಕೈ ಹಾಕಲ್ಲ. ಏಕೆಂದರೆ ಭಾರತ ಅಣ್ವಸ್ತ್ರ ಹೊಂದಿರುವ ಒಂದು ರಾಷ್ಟ್ರವಾಗಿದೆ. ಗಡಿಯಲ್ಲಿ ಸಂಘರ್ಷ ನಡೆಯಬಹುದು. ಯಾಕೆಂದರೆ ಈ ಸಂಘರ್ಷಗಳು ಹೊಸತೇನಲ್ಲ. ಪಾಕಿಸ್ತಾನದ ಜೊತೆ ಸದಾ ಸಂಘರ್ಷ ನಡೆಯುತ್ತಿರುತ್ತವೆ. ಈಗ ಚೀನಾ ಜೊತೆ ನಡೆಯುತ್ತಿದೆ ಎಂದರು.
Advertisement
Advertisement
ಇದು 1962ರ ನೆಹರು ಭಾರತವಲ್ಲ. 2020ರ ಮೋದಿ ಭಾರತ. ಈಗ ಪ್ರಧಾನಿಯಾಗಿರೋದು ಮೋದಿ. ಹೀಗಾಗಿ ನೆಹರು ರೀತಿ ಸೋತು ಶರಣಾಗುವ ಮನಸ್ಥಿತಿ ನರೇಂದ್ರ ಮೋದಿ ಅವರಲ್ಲಿ ಇಲ್ಲ. ತಕ್ಕ ಉತ್ತರ ಕೊಡುವ ಮನಸ್ಥಿತಿ ಮೋದಿ ಅವರಲ್ಲಿದೆ. ಹೀಗಾಗಿ ಚೀನಾ ಕ್ಯಾತೆಗೆ ದೇಶದ ಜನ ಆತಂಕ ಪಡುವ ಅಗತ್ಯವಿಲ್ಲ. ನಮ್ಮ 20 ಸೈನಿಕರು ಹುತಾತ್ಮರಾಗಿರಬಹುದು. ಆದರೆ ಚೀನಾದ 40 ಸೈನಿಕರನ್ನು ಹತ್ಯೆ ಮಾಡುವ ಶಕ್ತಿ ನಮ್ಮ ಸೈನ್ಯದಲ್ಲಿದೆ ಎಂಬುದನ್ನು ನಮ್ಮ ಸೈನಿಕರು ತೋರಿದ್ದಾರೆ ಎಂದು ಪ್ರತಾಪ್ ಸಿಂಹ ತಿಳಿಸಿದರು.
Advertisement
ಕಾಂಗ್ರೆಸ್‍ಗೆ ಪುಕ್ಕಲು ಮನಃಸ್ಥಿತಿ, ಬ್ರಿಟಿಷ್‍ರ ವಿರುದ್ಧ ಹುಲ್ಲುಕಡ್ಡಿಯನ್ನು ಎತ್ತದವರು ಚೀನಾ ವಿರುದ್ಧ ಗಟ್ಟಿ ಧ್ವನಿಯಲ್ಲಿ ಹೇಗೆ ಮಾತಾಡುತ್ತಾರೆ? ಎಂದು ಪ್ರಶ್ನೆ ಮಾಡಿದರು. ಅವರದ್ದು ಯಾವಾಗಲೂ ಶರಣಾಗತಿ ಮನಃಸ್ಥಿತಿ. ಆದರೆ ದೇಶ ಈಗ ಆ ಮನಃಸ್ಥಿತಿಯಲ್ಲಿ ಇಲ್ಲ. ನಮ್ಮ ಸೈನಿಕರಿಗೆ ಪ್ರತ್ಯುತ್ತರ ನೀಡಲು ಪ್ರಧಾನಿಗಳು ಮುಕ್ತ ಅವಕಾಶ ಕೊಟ್ಟಿದ್ದಾರೆ. ನಮ್ಮ ಸೈನ್ಯ ಸದೃಢವಾಗಿದೆ ಎಂದರು.
Advertisement
ನಮ್ಮ ದೇಶದೊಳಗಡೆ ನಮಗಿಂತ ಚೀನಾ ಶಕ್ತಿಶಾಲಿ ಎಂದು ಹೇಳುವ ಕೆಟ್ಟ ಮನಸ್ಥಿತಿಯ ಜನ ಇದ್ದಾರೆ. ಅವರಿಗೆ ನಮಗಿಂತ ಚೀನಾ ಬಗ್ಗೆಯೇ ಹೆಚ್ಚು ಪ್ರೀತಿ ಇದ್ದಂತಿದೆ. ಇಂತಹ ಮಾತುಗಳಿಗೆ ನಾವು ಬೆಲೆ ಕೊಡಬೇಕಾಗಿಲ್ಲ. ಗಡಿಯಲ್ಲಿ ಸಂಘರ್ಷ ಉಂಟಾದ ತಕ್ಷಣಕ್ಕೆ ಯುದ್ಧ ಎನ್ನುವ ಮನಸ್ಥಿತಿ ಬೇಡ. ಆದರೆ ಯುದ್ಧಕ್ಕೂ ನಾವು ಸಿದ್ಧ. ನಾವು ಅಣ್ವಸ್ತ್ರವನ್ನು ಹೊಂದಿದ್ದೇವೆ. ಶಕ್ತಿಶಾಲಿಗಳು, ಸಮರ್ಥ ನಾಯಕನ ಕೈಯಲ್ಲಿ ದೇಶವಿದೆ ಎಂದು ಪ್ರತಾಪ್ ಸಿಂಹ ವಾಗ್ದಾಳಿ ಮಾಡಿದರು.