ಕಾಂಗ್ರೆಸ್ಸಿಗೆ ಟಕ್ಕರ್ ಕೊಡಲು ಬಿಜೆಪಿ ಜೊತೆ ದೋಸ್ತಿಗೆ ಮುಂದಾಗುತ್ತಾ ಜೆಡಿಎಸ್..?

Public TV
1 Min Read
LC 1

ಬೆಂಗಳೂರು: ವಿಧಾನ ಪರಿಷತ್ ನಲ್ಲಿಂದು ಸಭಾಪತಿ ಚುನಾವಣೆ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಇಂದು ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಬಿಜೆಪಿ- ಜೆಡಿಎಸ್ ಅಭ್ಯರ್ಥಿಯಾಗಿ ಬಸವರಾಜ್ ಹೊರಟ್ಟಿ ಕಣದಲ್ಲಿದ್ದರೆ, ಇತ್ತ ಸಂಖ್ಯಾಬಲ ಇಲ್ಲದೆ ಇದ್ದರು ಕಾಂಗ್ರೆಸ್ಸಿನಿಂದ ನಜೀರ್ ಅಹಮದ್ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ.

LC 2

ಸಂಖ್ಯಾಬಲದ ಮೇಲೆ ಬಸವರಾಜ್ ಹೊರಟ್ಟಿ ಗೆಲುವು ಬಹುತೇಕ ಖಚಿತವಾಗಿದೆ. ಆದರೆ ಜೆಡಿಎಸ್ ಜಾತ್ಯಾತೀತ ಮುಖವಾಡ ಕಳಚಲು ಸಿದ್ದರಾಮಯ್ಯ ಅವರು ಅಭ್ಯರ್ಥಿ ಹಾಕೋ ತಂತ್ರ ಹೂಡಿದ್ದಾರೆ. ಒಂದೆಡೆ ಸಿದ್ದರಾಮಯ್ಯದ ರಾಜಕೀಯ ಲೆಕ್ಕಾಚಾರವಿದ್ದರೆ ಮತ್ತೊಂದೆಡೆ ಬಿಜೆಪಿ-ಜೆಡಿಎಸ್ ಲೆಕ್ಕಚಾರ ಇದ್ದು, ಈ ಮೂಲಕ ಸಭಾಪತಿ ಚುನಾವಣೆ ದೋಸ್ತಿ ನಂತ್ರ ರಾಜ್ಯದಲ್ಲಿ ಪ್ರಾರಂಭ ಆಗುತ್ತಾ ದೋಸ್ತಿ ರಾಜಕೀಯ..?, ಕಾಂಗ್ರೆಸ್‍ಗೆ ಟಕ್ಕರ್ ಕೊಡಲು ಬಿಜೆಪಿ ಜೊತೆ ದೋಸ್ತಿಗೆ ಜೆಡಿಎಸ್ ಮುಂದಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ ಕೇಂದ್ರದಲ್ಲಿ ಮೋದಿ ದೇವೇಗೌಡರನ್ನು ಹೊಗಳಿದ್ದೇ ಹೊಗಳಿದ್ದು, ಇತ್ತ ರಾಜ್ಯದಲ್ಲಿ ಯಡಿಯೂರಪ್ಪ-ಕುಮಾರಸ್ವಾಮಿ ಕೂಡ ಸಾಫ್ಟ್ ಕಾರ್ನರ್ ತೋರಿದ್ದಾರೆ.

HDD

ಬಿಜೆಪಿ-ಜೆಡಿಎಸ್ ದೋಸ್ತಿ ಲೆಕ್ಕಾಚಾರ!
ಕಾಂಗ್ರೆಸ್ಸನ್ನು ದೂರ ಇಡಲು ವಿಷಯಾಧಾರಿತವಾಗಿ ಇಬ್ಬರು ಒಂದಾಗಿ ಪಾಠ ಕಲಿಸೋದು. ಸದಾ ಜೆಡಿಎಸ್ ವಿರುದ್ಧ ತಿರುಗಿ ಬೀಳ್ತಿರೋ ಸಿದ್ದರಾಮಯ್ಯಗೆ ದೋಸ್ತಿ ಮೂಲಕ ಟಕ್ಕರ್ ಕೊಡೋದು. ಮುಂದಿನ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿಗಳ ಚುನಾವಣೆಯಲ್ಲಿ ಅಗತ್ಯ ಬಿದ್ದರೆ ಮೈತ್ರಿ ಮಾಡಿಕೊಳ್ಳುವುದು. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಅಗತ್ಯ ಬಿದ್ದರೆ ದೋಸ್ತಿ ಮಾಡಿಕೊಳ್ಳೋದು. ತಮ್ಮ ಶಾಸಕರ ಕೆಲಸ ಆಗಬೇಕಾದ್ರೆ ಬಿಜೆಪಿ ಜೊತೆ ಉತ್ತಮ ಬಾಂಧವ್ಯ ಇರಬೇಕು. ಹೀಗಾಗಿ ಈ ದೋಸ್ತಿ ಅನುಕೂಲವಾಗಲಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದ್ದು, ಅಸೆಂಬ್ಲಿ ಎಲೆಕ್ಷನ್ ರಿಸಲ್ಟ್ ಹೆಚ್ಚು ಕಡಿಮೆ ಆದ್ರೆ ದೋಸ್ತಿಗೆ ಬಾಗಿಲು ಓಪನ್ ಅನ್ನೋ ಲೆಕ್ಕಾಚಾರವಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

LC

Share This Article
Leave a Comment

Leave a Reply

Your email address will not be published. Required fields are marked *