ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ ‘ಮುಂದಿನ ಸಿಎಂ’ ಕುರ್ಚಿ ಕದನಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ನಾಯಕರ ಕಚ್ಚಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್, ಆಗಸ್ಟ್ ನಲ್ಲಿ ಸಮನ್ವಯ ಸಮಿತಿ ರಚಿಸಲು ತೀರ್ಮಾನಿಸಿದೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸೇರಿದಂತೆ 6 ರಿಂದ 7 ಜನ ಸಮಿತಿಯಲ್ಲಿ ಇರಲಿದ್ದಾರೆ. ಮೂಲ ಕಾಂಗ್ರೆಸ್‍ನ ಕೆಲ ಹಿರಿಯ ನಾಯಕರಿಗೆ ಸಮನ್ವಯ ಸಮಿತಿಯಲ್ಲಿ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಏನೇ ತೀರ್ಮಾನ ಕೈಗೊಳ್ಳುವುದಿದ್ದರೂ ಸಮನ್ವಯ ಸಮಿತಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಇಂಥದ್ದೊಂದು ಮೇಜರ್ ಸರ್ಜರಿಗೆ ಹೈಕಮಾಂಡ್ ಮುಂದಾಗಿದೆ.
ಸಿದ್ದರಾಮಯ್ಯಗೆ ಡಿಕೆಶಿ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಕಾಂಗ್ರೆಸ್ ಪ್ರಚಾರದ ಕಾರಿನಲ್ಲಿದ್ದ ಸಿದ್ದರಾಮಯ್ಯರ ಫೋಟೊವನ್ನು ಡಿಕೆಶಿ ತೆಗೆಸಿದ್ದಾರೆ. ಡಿಕೆಶಿ ನಿವಾಸದಲ್ಲಿರುವ ಪ್ರಚಾರದ ಕಾರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ರಾಹುಲ್ ಗಾಂಧಿ, ಸಿದ್ದರಾಮಯ್ಯರ ಫೋಟೋ ಇತ್ತು. ಈ ಮೂಲಕ ಡಿಕೆ ಬ್ರದರ್ಸ್ ಸಿದ್ದರಾಮಯ್ಯ ವಿರುದ್ಧ ನೇರ ಸಮರಕ್ಕೆ ನಿಂತ್ರಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದನ್ನೂ ಓದಿ: ಅಮೆರಿಕದ ಮಡೆರ್ನಾ ಬಳಕೆಗೆ ಕೇಂದ್ರ ಅನುಮತಿ
ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ನಮ್ಮಲ್ಲಿ ಯಾವುದೇ ಬಣಗಳಿಲ್ಲ, ಜಗಳಗಳಿಲ್ಲ. ಪಕ್ಷದ ಆಂತರಿಕ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇವೆ ಅಂದಿದ್ದಾರೆ. ಈ ಮಧ್ಯೆ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಹಾಗೂ ನಲ್‍ಪಾಡ್ ಮಧ್ಯೆ ಡಿಕೆಶಿ ಸಂಧಾನ ಯತ್ನ ನಡೆಸಿದ್ದಾರೆ.