ತಿರುವನಂತಪುರಂ: ಪಂಚಾಯತ್‍ನಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಅಧ್ಯಕ್ಷೆ ಪಟ್ಟ ಒಲಿದು ಬಂದಿದೆ. ಈ ಮೂಲಕ ಸಾಮಾನ್ಯ ವ್ಯಕ್ತಿಯೂ ಕೂಡ ಉನ್ನತ ಹುದ್ದೆಗೆ ಏರಬಹುದು ಎಂಬುದಕ್ಕೆ ಕೊಲ್ಲಂ ಜಿಲ್ಲೆಯ ಪಥನಪುರಂ ಬ್ಲಾಕ್ ಸಾಕ್ಷಿಯಾಗಿದೆ.
Advertisement
ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಮಹಿಳೆ ಕೆ.ಆನಂದವಲ್ಲಿ (46) ಅವರಾಗಿದ್ದಾರೆ. ಇದೀಗ ಪಂಚಾಯತ್ ಅಧ್ಯಕ್ಷರಾಗುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.
Advertisement
ಪಂಚಾಯತ್‍ನಲ್ಲಿ ಕಸ ಗುಡಿಸುವ ಅರೆಕಾಲಿಕ ಹುದ್ದೆಗೆ ಆನಂದವಲ್ಲಿ 2011ರಲ್ಲಿ ನೇಮಕಗೊಂಡಿದ್ದರು. ಇತ್ತೀಚೆಗೆ ನಡೆದಿದರುವ ಪಂಚಾಯತ್ ಚುನಾವಣೆಯಲ್ಲಿ ಆನಂದವಲ್ಲಿ ಅವರು ಜಯಗಳಿಸಿದ್ದಾರೆ. ಇದೀಗ ಪಂಚಾಯತ್ ಅಧ್ಯಕ್ಷೆಯಾಗಿ ನೇಕಮಗೊಂಡು ಸುದ್ದಿಯಲ್ಲಿದ್ದಾರೆ.
Advertisement
Advertisement
ಪಂಚಾಯತ್ ಅಧ್ಯಕ್ಷೆ ಹುದ್ದೆಗೆ ಏರುತ್ತೇನೆ ಎಂಬ ವಿಶ್ವಾಸ ಇರಲಿಲ್ಲ. ಕಸ ಗುಡಿಸುವ ಅರೆಕಾಲಿಕ ಕೆಲಸವನ್ನು ಪಂಚಾಯತ್‍ನಲ್ಲಿ ಮಾಡುವಾಗ ಕಚೇರಿಯಲ್ಲಿ ಇರುತ್ತಿದ್ದೆ ಎಂದು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖುಷಿಯನ್ನು ಆನಂದವಲ್ಲಿ ಹಂಚಿಕೊಂಡಿದ್ದಾರೆ.
ಆನಂದವಲ್ಲಿ ಅವರು ಪಂಚಾಯತ್ ಕಾರ್ಯ ವೈಖರಿಯ ಕುರಿತಾಗಿ ತಿಳಿದುಕೊಳ್ಳುತ್ತಿದ್ದಾರೆ. ಕಸ ಗುಡಿಸುವ ಕೆಲಸ ಮಾಡುವಾಗ ಚಹಾ, ನೀರು ಪೂರೈಕೆ ಮತ್ತು ಇನ್ನಿತರ ಕೆಲಸವನ್ನು ಮಾಡುತ್ತಿದ್ದರು. ಸಭೆ ನಡೆಸುವ ವೇಳೆ ಅಲ್ಲಿ ಚರ್ಚೆಯಾಗುವ ಕೆಲವು ವಿಷಯಗಳನ್ನು ಕೇಳಿ ತಿಳಿದುಕೊಂಡಿದ್ದಾರೆ. ಇನ್ನೂ ಹೆಚ್ಚಿನದಾಗಿ ತಿಳಿದು ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಪಿಯುಸಿವರೆಗೆ ಶಿಕ್ಷಣವನ್ನು ಮುಗಿಸಿದ್ದಾರೆ. 2011 ಕ್ಕೆ ಪಂಚಾಯತ್ ನಲ್ಲಿ ಕೆಲಸಕ್ಕೆ ಸೇರಿದ್ದರು. ಇದೀಗ ಪಂಚಾತಯ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.