ಬೆಂಗಳೂರು: ರೆಮ್‍ಡೆಸಿವರ್ ವಯಲ್‍ಗಳ ಅಭಾವದ ಬಗ್ಗೆ ಕಾಳಸಂತೆಯಲ್ಲಿ ಬಿಕರಿ ಆಗುತ್ತಿರುವ ಬಗ್ಗೆ ದೊಡ್ಡ ಪ್ರಮಾಣದಲ್ಲಿ ದೂರುಗಳು ಕೇಳಿಬರ್ತಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು ಈ ವೇಳೆ ಇಲಾಖಾ ಅಧಿಕಾರಿಗಳ ವಿರುದ್ಧ ಸಿಎಂ ಫುಲ್ ಗರಂ ಆಗಿದ್ದರು ಎಂದು ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.
Advertisement
ರೆಮ್‍ಡೆಸಿವರ್ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ. ಹೊರ ರಾಜ್ಯಗಳಿಗೂ ಮಾರಾಟವಾಗ್ತಿದೆ ಎಂಬ ಮಾಹಿತಿ ನನ್ನಲ್ಲಿದೆ. ಆದರೆ ನೀವು ನೋಡಿದ್ರೆ ಆ ಬಗ್ಗೆ ಮಾತನಾಡದೇ ಮಾಹಿತಿ ಮುಚ್ಚಿಡ್ತಿದ್ದೀರಿ ಏಕೆ? ಹೀಗೆ ಮಾಡೋದು ಅಂತಾ ಕ್ಲಾಸ್ ತೆಗೆದುಕೊಂಡರು. ನಾನು ರೆಮ್‍ಡೆಸಿವರ್ ಕಾಳಸಂತೆ ಮಾರಾಟದ ಬಗ್ಗೆ ಸಮಗ್ರ ತನಿಖೆ ಮಾಡಿಸುತ್ತೇನೆ. ಆಗ ಎಲ್ಲರ ಬಂಡವಾಳ ಬಯಲಾಗುತ್ತೆ. ತಪ್ಪಿತಸ್ಥ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಯಾರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ತುರ್ತು ಸಭೆಯಲ್ಲಿ ನಡೆದಿದ್ದೇನು?
ಸಿಎಂ: ಔಷಧಿ ಬ್ಲಾಕ್‍ನಲ್ಲಿ ಮಾರಾಟ, ಆಕ್ಸಿಜನ್ ಸಿಲಿಂಡರ್ ಕೊರತೆ ಸೇರಿದಂತೆ 3 ರೀತಿಯ ದೂರು ಬರ್ತಿದೆ ಇದಕ್ಕೆ ಏನ್ ಕ್ರಮ ಕೈಗೊಂಡಿದ್ದಿರಾ..?
ಅಧಿಕಾರಿ: ವಿಜಯಪುರದಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಎಷ್ಟೆಷ್ಟು ರೇಟಿಗೆ ಆಕ್ಸಿಜನ್ ಮಾರಬೇಕು ಅನ್ನೋ ಬಗ್ಗೆ ಬೆಲೆ ಕೂಡ ನಿಗದಿ ಮಾಡಿದ್ದೇವೆ.
Advertisement
ಸಿಎಂ: ಹೊರ ರಾಜ್ಯಕ್ಕೂ ಮಾರಾಟ ಮಾಡ್ತಾ ಇದ್ದಾರೆ ಅಂತಾ ನಮಗೆ ರಿಪೋರ್ಟ್ ಬಂತು.. ಇದನ್ನೆಲ್ಲ ಮುಚ್ಚಿಟ್ಟು ಅಧಿಕಾರಿಗಳು ಮಾತನಾಡಬಾರದು. ಇದರ ಬಗ್ಗೆ ಸಮಗ್ರ ತನಿಖೆ ಮಾಡಿಸುತ್ತೇನೆ. ಪರಿಣಾಮ ಬಹಳ ಕೆಟ್ಟದಾಗಿರುತ್ತದೆ. ನೀವೆಲ್ಲರೂ ಸೇರಿ ಫೇಸ್ ಮಾಡಬೇಕಾಗುತ್ತೆ. ನಾನು ಯಾರನ್ನೂ ಸುಮ್ಮನೆ ಬಿಡೋದಿಲ್ಲ.
ಸಿಎಂ : ಇಂತಹ ಕಷ್ಟ ಕಾಲದಲ್ಲಿ ಬ್ಲಾಕ್ ಮಾರ್ಕೆಟ್‍ನಲ್ಲಿ ಮಾರಾಟ ಮಾಡೋ ದಂಧೆ ಮಾಡ್ತಾ ಕೂತಿದ್ದಿರಾ ಅಂದ್ರೆ ಎಲ್ಲರೂ ಶಾಮೀಲಾಗಿದ್ದೀರಾ ಅಂತ ಅರ್ಥ. ತನಿಖೆ ಮಾಡಿದ್ರೆ ಎಲ್ಲಾ ಈಚೆ ಬರುತ್ತೆ ಅಮೇಲೆ ಎಲ್ಲರೂ ಅದನ್ನ ಎದುರಿಸಬೇಕಾಗುತ್ತೆ.. ನೀವೇ ಜವಾಬ್ದಾರರು.. ನಾನು ಯಾರನ್ನು ಕೂಡ ಸುಮ್ಮನೆ ಬಿಡೋದಿಲ್ಲ. ವಾಸ್ತಾವಾಂಶ ಮುಚ್ಚಿಟ್ಟು ಏನು ಮಾತನಾಡಬೇಡಿ ಇಲ್ಲಿ..
ಅಧಿಕಾರಿ: ಸರ್ ವಾಸ್ತವ ಏನಂದ್ರೆ ಎಲ್ಲಾ ಅಧಿಕಾರಿಗಳು.. ಹಗಲು ರಾತ್ರಿ ಕೆಲಸ ಮಾಡ್ತಾ ಇದ್ದೀವಿ.
ಸಿಎಂ: ಕೆಲಸ ಮಾಡೋದು ಮುಖ್ಯ ಅಲ್ಲಾ ಕಣ್ರೀ… ಬ್ಲಾಕ್ ಮಾರ್ಕೆಟ್‍ನಲ್ಲಿ ಮಾರಾಟ ಆಗ್ತಾ ಇದೆಯಲ್ಲಾ.. ಅದಕ್ಕೆ ಏನ್ ಹೇಳ್ತಿರಾ..? ಕೆಲಸ ಮಾಡ್ತಿಲ್ಲಾ ಅಂತಾ ಹೇಳಿದ್ನಾ ನಾನು.. ಯಾರನ್ನು ಕೂಡ ಸುಮ್ಮನೆ ಬಿಡೋದಿಲ್ಲ.