ಕಷ್ಟಪಟ್ಟು ಮೇಲೆ ಬಂದವರ ವಿರುದ್ಧ ಷಡ್ಯಂತ್ರ ಅಂದ್ರು ಬಿ.ಸಿ.ಪಾಟೀಲ್

Public TV
3 Min Read
BC PATIL 2

– ಸಂದೇಶದ ಮೇರೆಗೆ ಕೋರ್ಟ್ ಮೊರೆ ಹೋದ್ರಾ ಸುಧಾಕರ್?

ಕೊಪ್ಪಳ/ಚಿಕ್ಕಬಳ್ಳಾಪುರ: ಮಾಜಿ ಮಂತ್ರಿಗಳ ರಾಸಲೀಲೆ ಪ್ರಕರಣದ ಬೆನ್ನಲೆ ಬಿಎಸ್‍ವೈ ಸಂಪುಟದ ಆರು ಸಚಿವರು ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸದಂತೆ ಆದೇಶ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೊಪ್ಪಳದಲ್ಲಿ ಸಚಿವ ಬಿ.ಸಿ. ಪಾಟೀಲ್ ಮತ್ತು ಸಚಿವ ಸುಧಾಕರ್ ಕೋರ್ಟ್ ಮೊರೆ ಹೋಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

besy

ಕೃಷಿ ಸಚಿವ ಬಿ.ಸಿ.ಪಾಟೀಲ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಮ್ಮ ಯಶಸ್ಸನು ಸಹಿಸದೆ ಷಡ್ಯಂತ್ರ ಮಾಡಲಾಗಿದ್ದು, ನಮ್ಮ ಹೆಸರು ಹಾಳು ಮಾಡಲು ಬಹಳ ಜನ ಕಾಯುತ್ತಿದ್ದಾರೆ. ಹೀಗಾಗಿ ನಾವು ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಹೇಳಿದ್ದಾರೆ. ಇತ್ತ ಸಚಿವ ಸುಧಾಕರ್, ಪ್ರಮುಖರ ಸಂದೇಶ ಹಾಗೂ ನಿರ್ಧಾರದಂತೆ ನಾವು ಪಾಲಿಸಿದ್ದೇವೆ ಅಂತ ಹೇಳಿದರು.

st somashekhar bairati basavaraju narayan gowda

ನಮಗೆ ಆತಂಕ ಇಲ್ಲ: ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ನಾವು ಕಷ್ಟ ಪಟ್ಟು ಮೇಲೆ ಬಂದವರು ಹೀಗಾಗಿ ನಮ್ಮ ಮೇಲೆ ಬಹಳ ಜನರ ಕಣ್ಣಿದೆ. ಕಾಲ ಬಹಳ ಕೆಟ್ಟಿದೆ. ನಾವು ಬಹಳ ಕಷ್ಟಪಟ್ಟು ಮೇಲೆ ಬಂದವರು. ಹೀಗಾಗಿ ನಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಾರೆ. ಇಂತಹ ಹಲವಾರು ಘಟನೆ ನಡೆದಿವೆ. ಹೀಗಾಗಿ ನಾವು ಕೋರ್ಟ್ ಮೊರೆ ಹೋಗಿದ್ದೇವೆ. ನಮಗೆ ಆತಂಕ ಏನೂ ಇಲ್ಲ, ಅಪಖ್ಯಾತಿ ತರೋ ಜನ ಬಹಳ ಇದ್ದು, ಸತ್ಯ ಹೊಸ್ತಿಲು ದಾಟಿ ಬರೋ ಹೊತ್ತಿಗೆ ಸುಳ್ಳು ಊರೆಲ್ಲ ಸುತ್ತಿ ಬರತ್ತೆ. ನಾವು ರಾಜೀನಾಮೆ ಕೊಟ್ಟು ಬಂದವರು, ನಮ್ಮ ಮೇಲೆ ಬಹಳಷ್ಟು ಜನ ಹಗೆ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದರು.

bc patil dr k sudhakar shivaram hebbar

ಸಂದೇಶ ಪಾಲನೆ: ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಈ ವಿಚಾರ ಪಕ್ಷ ಹಾಗೂ ಸರ್ಕಾರದ ವೇದಿಕೆಯಲ್ಲಿ ಚರ್ಚೆಯಾಗಿದೆ. ಪ್ರಮುಖರ ಸಂದೇಶ ಹಾಗೂ ನಿರ್ಧಾರದಂತೆ ನಾವು ಪಾಲಿಸಿದ್ದೇವೆ. ಸದನಾನಂದಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಅವರ ಬಳಿಯೇ ನಾನು ಮಾತಾಡುವೆ. ಸದಾನಂದಗೌಡರು ಮಾಹಿತಿ ಕೊರತೆಯಿಂದ ಹಾಗೆ ಹೇಳಿರಬೇಕು. ನಾವು ಅವರಿಗೆ ತಿಳಿಸುತ್ತೇವೆ. ಮತ್ತಷ್ಟು ಸಚಿವರು ನ್ಯಾಯಾಲಯದ ಮೊರೆ ಹೋಗಬಹುದು ನಮಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಸಿಡಿ ಭಯದಲ್ಲಿ ಫೋನ್‍ನಲ್ಲಿ ಬ್ಯುಸಿಯಾದ ಬಿ.ಸಿ ಪಾಟೀಲ್, ಸುಧಾಕರ್..!

BC PATIL

ಸಚಿವರನ್ನ ಸಮರ್ಥಿಸಿಕೊಂಡ ಬೊಮ್ಮಾಯಿ: ಮಾಜಿ ಸಚಿವರ ಪ್ರಕರಣದ ನಂತರ ಬಹಳಷ್ಟು ಊಹಾಪೋಹಗಳು, ಸಂಶಯಾಸ್ಪದ ಷಡ್ಯಂತ್ರಗಳು, ಪೂರ್ವಭಾವಿ ಹನಿಟ್ರ್ಯಾಪ ಸೇರಿದಂತೆ ಬಹಳಷ್ಟು ವಿಚಾರಗಳು ಬಂದಿವೆ. ಹೀಗಾಗಿ ಕೆಲವು ಸಚಿವರು, ಶಾಸಕರಾಗಲಿ ಅವರ ತೇಜೋವಧೆ ಆಗೋ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ನ್ಯಾಯಾಂಗದ ರಕ್ಷಣೆ ಕೋರಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದನ್ನೂ ಓದಿ:  ನಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡಬೇಡಿ – 6 ಸಚಿವರಿಂದ ಕೋರ್ಟ್‍ಗೆ ಅರ್ಜಿ

ತೇಜೋವಧೆ, ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವಂಥದ್ದು ಮತ್ತು ರಾಜಕೀಯವಾಗಿ ಅಸ್ಥಿರತೆಯನ್ನ ರಾಜ್ಯದಲ್ಲಿ ಮಾಡಬೇಕು ಅನ್ನೋ ಹಿನ್ನೆಲೆ ಕಂಡು ಕೆಲವರು ನ್ಯಾಯಾಂಗದ ರಕ್ಷಣೆ ಕೋರಿದ್ದಾರೆ. ದೂರು ಕೊಟ್ಟವರು ಏನು ಮಾಹಿತಿ ಕೊಡಬೇಕಾಗಿತ್ತು. ಆ ಮಹಿಳೆ ಬಂದು ಹೇಳಿಕೆ ಕೊಡಬೇಕಾಗಿತ್ತು ಇದುವರೆಗೆ ಕೊಟ್ಟಿಲ್ಲ. ಇಂಥಾ ಕೇಸ್ ನಲ್ಲಿ ಮುಂದೆ ಬಂದು ದೂರು ಕೊಡದಿರೋದು, ಹೇಳಿಕೆ ಕೊಡದಿರೋದು ಆಗದಿರೋ ಸಂದರ್ಭದಲ್ಲಿ ಷಡ್ಯಂತ್ರ ಸೇರಿದಂತೆ ಎಲ್ಲ ಸಂಶಯಗಳಿಗೆ ಕಾರಣವಾಗಿದೆ. ಹೀಗಾಗಿ ಕೆಲವರು ಕಾನೂನಿನ ರಕ್ಷಣೆ ತೆಗೆದುಕೊಳ್ತಿದ್ದಾರೆ. ಪೊಲೀಸರು ಸಹ ಎಲ್ಲ ಆಯಾಮಗಳಲ್ಲಿ ತನಿಖೆ ಮಾಡ್ತೀವಿ ಎಂದರು. ಇದನ್ನೂ ಓದಿ: ವೀಡಿಯೋ ಪ್ರಕರಣ- ಕನಕಪುರ, ಬೆಳಗಾವಿ ಕಡೆಯವರೇ ಇದಕ್ಕೆ ಕಾರಣ ಎಂದ ಯೋಗೇಶ್ವರ್

ಸಿಡಿ ವಿಚಾರದಲ್ಲಿ ಜನರು ಹಲವಾರು ಹೇಳಿಕೆ ಕೊಟ್ಟಿದ್ದಾರೆ. ಕೆಲವರು ಹತ್ತೊಂಬತ್ತು ಜನ ಇದ್ದಾರೆ ಅಂತಿದ್ದಾರೆ. ಕೆಲವರು ಡೀಲ್ ಆಗಿದೆ ಅಂತಿದ್ದಾರೆ. ಎಲ್ಲ ವಿಚಾರಗಳನ್ನ ಗಮನಿಸಿದ್ದೇವೆ. ಎಲ್ಲೆಲ್ಲಿ ತನಿಖೆ ಮಾಡಬೇಕೋ ಅಲ್ಲಿ ಎಲ್ಲ ತನಿಖೆ ಮಾಡುತ್ತೇವೆ. ಇದನ್ನೂ ಓದಿ: ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು – ಲಿಂಬಾವಳಿಯಿಂದ ನಡ್ಡಾ ಮಾಹಿತಿ ಸಂಗ್ರಹ

ದಿನೇಶ ಕಲ್ಲಹಳ್ಳಿ ಬಿಜೆಪಿ ಜೊತೆ ಗುರುತಿಸಿಕೊಂಡಿರೋ ವಿಚಾರ ಕೇಳಿದಾಗ, ಎಲ್ಲಾರು ಯಾವ್ಯಾವ ಪಕ್ಷದಲ್ಲಿ ಇದ್ದಾರೆ ಯಾರಿಗೊತ್ತು. ಏನು ದೂರು ಕೊಟ್ಟಿದ್ದಾರೆ. ಅದರ ಬಗ್ಗೆ ಎರಡು ಬಾರಿ ಕರೆದಿದ್ದೇವೆ. ಎರಡು ಬಾರಿ ಕರೆದಾಗಲೂ ಅವರು ಏನು ಹೇಳಿಕೆ ಕೊಟ್ಟಿದ್ದಾರೆ ಮಾಧ್ಯಮಗಳ ಮುಂದೆಯೆ ಇದೆ. ಅದರ ಆಧಾರದ ಮೇಲೆ ತನಿಖೆ ಮಾಡ್ತೇವೆ ನಾವು. ಅವರು ಯಾರು ಜೊತೆ ಗುರುತಿಸಿಕೊಂಡಿದ್ದಾರೆ ಅದು ನಮಗೆ ಸಂಬಂಧವಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *