– ಆಸ್ಪತ್ರೆಗೆ ಹೋಗುವ ವೇಳೆ ಸಾವು
– ವಾಂತಿ ಮಾಡುತ್ತಾ ಮಾಡಿ ಪ್ರಾಣ ಬಿಟ್ಟರು
ಭೋಪಾಲ್: ಕಳ್ಳಬಟ್ಟಿ ಸೇವಿಸಿ 12 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಕಳ್ಳಬಟ್ಟಿಯನ್ನು ಸೇವಿಸಿದವರ ಪೈಕಿ 12 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಇನ್ನೂ 6ಜನರು ಸಾವು ಬದುಕಿನ ಮಧ್ಯೆ ಹೋರಾಟವನ್ನು ನಡೆಸುತ್ತಿದ್ದಾರೆ. ಮಧ್ಯಪ್ರದೇಶ ಮಾನ್ಪುರಿ ಪೃಥ್ವಿ ಹಾಗೂ ಪಹಾವಾಲಿ ಗ್ರಾಮದಲ್ಲಿ ಕಳ್ಳಬಟ್ಟಿ ಸೇವಿಸಿ ಹಲವರು ಪ್ರಾಣವನ್ನು ಬಿಟ್ಟಿದ್ದಾರೆ.
Death toll rises to 12, treatment of 6 people is underway after consuming liquor in Morena #MadhyaPradesh
— ANI (@ANI) January 12, 2021
ಸ್ಥಳಿಯವಾಗಿ ತಯಾರಿಸಿದ ಕಳ್ಳಬಟ್ಟಿಯನ್ನು ಸೇವಿಸಿದ್ದಾರೆ. ರಾತ್ರಿ ಮದ್ಯ ಸೇವಿಸಿದ ಕೂಡಲೇ ವಾಂತಿ ಮಾಡಲು ಆರಂಭಿಸಿದ್ದಾರೆ. ಕೂಡಲೇ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ಮಾರ್ಗ ಮಧ್ಯದಲ್ಲಿಯೇ ಪ್ರಾಣವನ್ನು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೋರೆನಾ ಜಿಲ್ಲೆಯ ಪಹವಾಲಿಯಲ್ಲಿ ನಾಲ್ವರು ಪ್ರಾಣ ಬಿಟ್ಟಿದ್ದಾರೆ. ಮನುಪುರ್ ಜಿಲ್ಲೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. 7 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಮಧ್ಯಪ್ರದೇಶದ ಹಲವು ಹಳ್ಳಿಗಳಲ್ಲಿ ಕಳ್ಳಬಟ್ಟಿಯನ್ನು ತಯಾರಿಸಲಾಗುತ್ತದೆ. ಇದರಿಂದಾಗಿ ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಕುರಿತಾಗಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.