ವಿಜಯಪುರ: ಕಳ್ಳಬಟ್ಟಿ ಮದ್ಯ ಸೇವಿಸಿ ಯುವಕ ಸಾವಿಗೀಡಾದ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾ. ಜಾಲಗೇರಿ ತಾಂಡಾ-1 ರಲ್ಲಿ ಘಟನೆ ನಡೆದಿದೆ.
ಸಹದೇವ ಜುಮ್ಮನ್ನಗೊಳ ಸಾವಿಗೀಡಾದ ವ್ಯಕ್ತಿ. ಈತ ಕಳ್ಳಬಟ್ಟಿ ಸೇವಿಸಿ ಸಾವನ್ನಪ್ಪಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ಸಹದೇವ ಜಿಲ್ಲೆಯ ಬಬಲೇಶ್ವರ ನಿವಾಸಿಯಾಗಿದ್ದು, ತಾಯಿ ತವರೂರು ಜಾಲಗೇರಿಯಲ್ಲೇ ವಾಸವಿದ್ದ. ಜಾಲಗೇರಿ ತಾಂಡಾದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಮದ್ಯ ಸೇವನೆಯಿಂದಲೇ ಯುವಕನ ಸಾವಾಗಿದೆ ಅಂತ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕಳ್ಳಬಟ್ಟಿ ಮದ್ಯ ಮಾರುವವರ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಘಟನೆ ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.