ಕೋಲ್ಕತ್ತಾ: ಬೈಕ್ ಕಳ್ಳನನ್ನು ಹಿಡಿಯಲು ಹೋದ ಪೋಲಿಸ್ ಅಧಿಕಾರಿಯನ್ನೇ ಸ್ಥಳೀಯರು ಸೇರಿ ಹೊಡೆದು ಕೊಂದಿರುವ ಘಟನೆ ಪಶ್ಚಿಮ ಬಂಗಾಲದ ಉತ್ತರ ದಿನಾಜ್‍ಪುರ್ ನಲ್ಲಿ ನಡೆದಿದೆ.
ಉತ್ತರ ದಿನಾಜ್‍ಪುರ್ ಜಿಲ್ಲೆಯ ಬಿಹಾರ್ ಕಿಶಾನ್‍ಗಂಜ್ ಪೊಲೀಸ್ ಠಾಣೆಯ ಎಸ್‍ಎಚ್‍ಒ ಅಶ್ವಿನಿ ಕುಮಾರ್ ಅವರು ಗೋಲ್‍ಪೋಖರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದಕ್ಕೆ ಬೈಕ್ ಕಳ್ಳನನ್ನು ಬಂಧಿಸಲು ತೆರಳಿದಾಗ ಅಲ್ಲಿನ ಸ್ಥಳೀಯರ ಗುಂಪೊಂದು ಅಶ್ವಿನಿ ಕುಮಾರ್ ಅವರನ್ನು ಹೊಡೆದು ಕೊಂದು ಹಾಕಿದೆ.
ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳನನ್ನು ಬಂಧಿಸಲು ಹೋದಾಗ ಈ ಘಟನೆ ನಡೆದಿದೆ. ನಾವು ಬೈಕ್ ಕಳ್ಳನನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಐಜಿ. ಪೂರ್ಣಿಯಾ ರೇಂಜ್ ಪ್ರತಿಕ್ರಿಯಿಸಿದ್ದಾರೆ.
WB: SHO of Kishanganj Police Station in Bihar, Ashwini Kumar beaten to death by a crowd in a village in Goalpokhar police station area of Uttar Dinajpur. IG Purnia Range says, "He had come for a raid in connection with a bike theft. Islampur SP with us. We'll raid & make arrests" pic.twitter.com/lwUEodPDWr
— ANI (@ANI) April 10, 2021
ಈ ಕುರಿತು ಬಿಹಾರ್ ಪೊಲೀಸ್ ಸಂಘದ ಅಧ್ಯಕ್ಷ ಮೃತ್ಯುಂಜಯ್ ಕೆ ಸಿಂಗ್ ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿ, ಎಸ್‍ಎಚ್‍ಒ ಅವರನ್ನು ಹೊಡೆದು ಸಾಯಿಸಲಾಗಿದ್ದು, ಮೃತಪಟ್ಟ ಪೊಲೀಸ್ ಅಧಿಕಾರಿಯ ಮೃತದೇಹವನ್ನು ಪೊಲೀಸರು ಸ್ಥಳದಿಂದ ವಶಪಡಿಸಿಕೊಂಡು, ಸ್ಥಳೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಿಕೊಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.