– ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಪ್ಯಾಕೇಜ್ ಘೋಷಣೆ
ಬೆಂಗಳೂರು: ಕಳೆದ ಬಾರಿ ಹೀಗೆ ಲಾಕ್‍ಡೌನ್ ಪ್ಯಾಕೇಜ್ ಘೋಷಣೆ ಮಾಡಿದರು. ಸರಿಯಾಗಿ ಹಣ ಕೊಡಲಿಲ್ಲ. ಈಗ ಸರಿಯಾಗಿ ಪ್ಯಾಕೇಜ್ ಹಂಚಿಕೆ ಮಾಡ್ತಾರೆ ಅನ್ನೋ ಗ್ಯಾರಂಟಿ ಇಲ್ಲಾ ಎಂದು ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
Advertisement
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಸಾವಿರ ಪಂಚಾಯ್ತಿ ಮೂಲಕ ಕೊಡಬೇಕು. ಇದು ಕೊಡಬೇಕು ಅಂತ ಕೊಟ್ಟಿರೋದಲ್ಲ. ನಾವೆಲ್ಲಾ ಒತ್ತಾಯ ಮಾಡಿದೆವು ಅಂತ ಏನೋ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಬಡವರ ಬಗ್ಗೆ ಚಿಂತನೆ ಮಾಡುವಂತ ಸರ್ಕಾರ ಅಂತು ಇದಲ್ಲ ಎಂದು ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.
Advertisement
Advertisement
ಕೊಡುವ ವಿಧಾನವೇ ಸಂಪೂರ್ಣ ಫೈಲ್ಯೂರ್ ಆಗಿದೆ. ಇಂದಿರಾ ಕ್ಯಾಂಟೀನ್ ಊಟಕ್ಕೆ ಆಧಾರ್ ಕಾರ್ಡ್ ಐಡಿ ಕಾರ್ಡ್ ತನ್ನಿ ಅಂದಿದ್ದರು. ನಾವು ಹೇಳಿದ ಮೇಲೆ ವಾಪಸ್ ಪಡೆದರು. ಕಾರ್ಮಿಕರು ಶ್ರಮಿಕ ವರ್ಗಕ್ಕೆ ಏನು ಇಲ್ಲಾ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದಿದ್ದಾರೆ.
Advertisement
ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ. ಹತ್ತು ಲಕ್ಷ ಡ್ರೈವರ್ ಇದ್ದಾರೆ ಎಂದು ಹೇಳಿ ಎರಡು ಲಕ್ಷ ಜನರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಪರಿಹಾರ ಹಂಚಿಕೆ ವಿಧಾನ ಸರಿ ಇಲ್ಲ. ಪರಿಹಾರ ಹಂಚುವ ಜವಾಬ್ದಾರಿ ಗ್ರಾಮ ಪಂಚಾಯ್ತಿಗೆ ಕೊಡಿ. ಅವರು ಮಡಿವಾಳ, ಕ್ಷೌರಿಕ ಹೂ ಮಾರುವವನು, ಆರ್ಚಕರು, ಅಡಿಗೆ ಮಾಡುವವನು ಎಲ್ಲರೂ ಅವರಿಗೆ ಗೊತ್ತಾಗುತ್ತೆ. ಹಳ್ಳಿ ಜನ ಮೋಸ ಮಾಡದೇ ಎಲ್ಲರಿಗೂ ಕೊಡ್ತಾರೆ ಎಂದಿದ್ದಾರೆ.
ನಮಗಂತು ಸರ್ಕಾರದ ನಿರ್ವಾಹಣೆ ಬಗ್ಗೆ ವಿಶ್ವಾಸ ಇಲ್ಲ. ನಮ್ಮ ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಸರ್ಕಾರದ ಮೇಲೆ ನಂಬಿಕೆ ಇಲ್ಲಾ ಅಂತಾನೆ ಡಿಸಿಗಳ ಜೊತೆ ಪಿಎಂ ಮೀಟಿಂಗ್ ಮಾಡಿದ್ದಾರೆ. ಇವರು ಪ್ಯಾಕೇಜ್ ಮಾಡಿರುವ ಹಂಚುವ ವಿಧಾನವೇ ಸರಿ ಇಲ್ಲಾ ಎಂದು ಆಕ್ರೋಶ ಹೊರಹಾಕಿದ್ದಾರೆ.