ಪ್ರತಿವಾರದಂತೆ ಈ ವಾರ ಕೂಡ ಬಿಗ್‍ಬಾಸ್ ಮನೆಯಲ್ಲಿ ಒಬ್ಬ ಕಳಪೆ ಪ್ರದರ್ಶನ ನೀಡಿದ ವ್ಯಕ್ತಿ ಹಾಗೂ ಒಬ್ಬ ಅತ್ಯುತ್ತಮ ಸದಸ್ಯನನ್ನು ಆರಿಸುವಂತೆ ಮನೆಯ ಸದಸ್ಯರಿಗೆ ತಿಳಿಸಲಾಯಿತು.
ಅದರಂತೆ ಮಂಜು, ನಾನು ಪ್ರಶಾಂತ್ ಸಂಬರ್ಗಿಯವರ ಹೆಸರನ್ನು ಸೂಚಿಸಲು ಇಷ್ಟ ಪಡುತ್ತೇನೆ. ಮನೆಯ ಕೆಲಸ ಸರಿಯಾಗಿ ಮಾಡುವುದಿಲ್ಲ. ಅದಕ್ಕಿಂತಲೂ ನನಗೆ ದುಬಾರಿ ಮತ್ತೊಂದನ್ನು ಹಾಡಿದ್ದಾರೆ. ಒಂದು ಟಾಸ್ಕ್‍ನಲ್ಲಿ ಗ್ರೂಪ್ ಅಂತ ಬಂದಾಗ ಏನೇ ತಪ್ಪು ಮಾಡಿದ್ದರು ಒಪ್ಪಿಕೊಳ್ಳಬೇಕು, ಇಲ್ಲ ನಿಧಾನವಾಗಿ ಬಿಡಿಸಿ ಹೇಳಬೇಕೆಂದು ಹೇಳಿದರು. ನಂತರ ರಘು ನಾನು ಪ್ರಶಾಂತ್ ಎಂದು ಹೇಳುತ್ತೇನೆ. ಕಾರಣ ಕೆಲವೊಂದು ಅನಾವಶ್ಯಕ ಕಮೆಂಟ್‍ಗಳು ಕ್ಯಾಪ್ಟನ್ ಮಾತಿಗೆ ವಿರೋಧ ವ್ಯಕ್ತಪಡಿಸುವುದು ಇನ್ನಿತರ ವಿಚಾರಗಳು ಹಿಡಿಸಲಿಲ್ಲ ಎನ್ನುತ್ತಾರೆ. ಅಲ್ಲದೆ ನಿಧಿ ಸುಬ್ಬಯ್ಯ ಅವರ ಗ್ರೂಪ್‍ನಲ್ಲಿದ್ದಾಗ ನಾನು 2-3 ಭಾರೀ ಡಿಮೊಟಿವೇಟ್ ಆಗಲು ಕಾರಣ ಅವರು, ಡಿ ಮೋಟಿವೇಟ್ ಮಾಡುವುದು ಅವರ ಶಕ್ತಿ ಎಂದು ಕೊಳ್ಳುತ್ತೇನೆ ಎಂದು ಪ್ರಶಾಂತ್ ಹೆಸರನ್ನು ಹೇಳುತ್ತಾರೆ.
ಈ ವೇಳೆ ಮಾತನಾಡಿದ ಪ್ರಶಾಂತ್ ಸಂಬರ್ಗಿ ಮಂಜು ಹಾಗೂ ನಿಧಿ ಆಯ್ಕೆ ಪೂರ್ವ ನಿಯೋಜಿತ, ಬುಧವಾರ ಮಂಜು ನನಗೆ ಈ ವಾರ ಕಳಪೆ ಬೋರ್ಡ್ ನಿನಗೆ ಹಾಕುತ್ತೇನೆ ಎಂದು ಮೊದಲೇ ಹೇಳಿದ್ದರು. ಅಲ್ಲದೆ ನಿಧಿ ಕೂಡ ಸ್ವಿಮಿಂಗ್ ಪೂಲ್ ಬಳಿ ಕಾಯ್ತಿರು ಈ ವಾರ ಕಳಪೆ ಬೋರ್ಡ್ ಹಾಕುತ್ತೇನೆ ಎಂದು ಹೇಳಿರುವುದಾಗಿ ಆರೋಪಿಸಿದರು. ನಂತರ ನಿಧಿ ಹಾಗೂ ಮಂಜು ನಾವು ಈ ಮನೆಯಲ್ಲಿ ಎಲ್ಲರಿಗೂ ಈ ರೀತಿ ಹಾಸ್ಯ ಮಾಡಲು ಹೇಳುತ್ತೇವೆ ಆದರೆ ಯಾವುದೇ ರೀತಿಯ ಪೂರ್ವ ನಿಯೋಜಿತ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ.
ಹೀಗೆ ವೈಷ್ಣವಿ ಗೌಡ, ದಿವ್ಯಾ ಉರುಡುಗ, ಶಂಕರ್, ಶಮಂತ್ ಹಾಗೂ ಕ್ಯಾಪ್ಟನ್ ವಿಶ್ವನಾಥ್ ಕೂಡ ಪ್ರಶಾಂತ್ ಸಂಬರ್ಗಿಯವರನ್ನು ಈ ವಾರದ ಕಳಪೆ ಪ್ರದರ್ಶನ ತೋರಿದ ಸದಸ್ಯ ಎಂದು ಸೂಚಿಸಿ ಕಳಪೆ ಬೋರ್ಡ್ ನೀಡುತ್ತಾರೆ.
ಬಳಿಕ ಕಳಪೆ ಬೋರ್ಡ್ ಧರಿಸಿ ಜೈಲು ಸೇರಿದ ಪ್ರಶಾಂತ್, ಮನೆಯ ಗುಂಪುಗಾರಿಕೆಯನ್ನು ಖಂಡಿಸಿ ನಾನು 24 ಗಂಟೆಗಳ ಕಾಲ ಮೌನವಾಗಿದ್ದು, ಯಾವುದೇ ಆಹಾರವನ್ನು ಸೇವಿಸುವುದಿಲ್ಲ ಎಂದು ಪ್ರಶಾಂತ್ ಸಂಬರ್ಗಿ ಇದೀಗ ಪ್ರತಿಭಟನೆ ನಡೆಸುತ್ತಿದ್ದಾರೆ.