ಚಿಕ್ಕಬಳ್ಳಾಪುರ: ಕಲ್ಲು ಕ್ವಾರಿ ಹೊಂಡದಲ್ಲಿ ಮುಳುಗಿ ತಾಯಿ-ಮಗಳು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಹಾರೋಬಂಡೆ ಬಳಿ ನಡೆದಿದೆ.
ಹಾರೋಬಂಡೆ ಗ್ರಾಮ ಹೊರವಲಯದ ಕಲ್ಲುಕ್ವಾರಿ ಹೊಂಡದಲ್ಲಿ ಬಟ್ಟೆ ತೊಳೆಯಲು ತನ್ನ ಎರಡು ಹೆಣ್ಣು ಮಕ್ಕಳೊಂದಿಗೆ ತಾಯಿ ಪೂಜಾ ತೆರಳಿದ್ದರು. ಬಟ್ಡೆ ತೊಳೆಯುವ ವೇಳೆ 8 ವರ್ಷದ ಮಗಳಾದ ಮಂಜುಳಾ ಆಯತಪ್ಪಿ ಕಾಲು ಜಾರಿ ಹೊಂಡಕ್ಕೆ ಜಾರಿ ಬಿದ್ದಿದ್ದಾಳೆ. ಈ ವೇಳೆ ಮಗಳನ್ನ ರಕ್ಷಿಸಲು ಮುಂದಾದ ತಾಯಿ ಪೂಜಾ ಸಹ ಹೊಂಡಕ್ಕೆ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಆಗ್ನಿಶಾಮಕ ದಳ ಸಿಬ್ಬಂದಿ ಮೃತದೇಹಗಳನ್ನ ಹೊರತೆಗೆದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.