– ಉಗಳಬೇಡ ಅಂದಿದ್ದಕ್ಕೆ ಪ್ರತೀಕಾರ
ಲಕ್ನೋ: ಉಗಳಬೇಡ ಎಂದಿದ್ದಕ್ಕೆ ಯುವಕನೊಬ್ಬ ನೆರೆಹೊರೆಯವರಿಗೆ ಸೇರಿದ 11 ಪಾರಿವಾಳಗಳನ್ನು ಸಾಯಿಸಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಭಾಗಪತ್‍ನಲ್ಲಿ ನಡೆದಿದೆ.
ರಾಹುಲ್ ಸಿಂಗ್ 11 ಪಾರಿವಾಳಗಳನ್ನು ಕೊಂದಿರುವ ಯುವಕ. ಈತನ ತನ್ನ ಪಕ್ಕದ ಮನೆಯ ನಿವಾಸಿ ಧರಂಪಾಲ್ ಸಿಂಗ್ ಮನೆಯ ಛಾವಣಿಯ ಮೇಲೆ ಹೋಗಿದ್ದಾನೆ. ಅಲ್ಲಿ ಪಂಜರದಲ್ಲಿದ್ದ ಹನ್ನೊಂದು ಪಾರಿವಾಳಗಳಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಪರಿಣಾಮ 11 ಪಾರಿವಾಳಗಳು ಸಾವನ್ನಪ್ಪಿವೆ.
ಇತ್ತ ಧರಂಪಾಲ್ ಸಿಂಗ್ ಸತ್ತ ಪಾರಿವಾಳಗಳ ವಿಡಿಯೋವನ್ನು ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಆರೋಪಿ ರಾಹುಲ್ ಸಿಂಗ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆರೋಪಿ ರಾಹುಲ್ ಸಿಂಗ್ ಪರಾರಿಯಾಗಿದ್ದಾನೆ.
ರಾಹುಲ್ ಮನೆಯ ಮುಂದೆ ಉಗುಳುತ್ತಲೇ ಇರುತ್ತಿದ್ದನು. ಹೀಗಾಗಿ ನಾನು ಮನೆಯ ಮುಂದೆ ಉಗುಳಬೇಡ ಎಂದಿದ್ದೆ. ಅಲ್ಲದೇ ಕೊರೊನಾ ವೈರಸ್ ದಿನಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ ಎಂದು ಯುವಕನಿಗೆ ಹೇಳಿದ್ದೆ ಎಂದು ಧರಂಪಾಲ್ ಸಿಂಗ್ ತಿಳಿಸಿದ್ದಾರೆ.
ರಾಹುಲ್ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಧರಂಪಾಲ್ ಸಿಂಗ್ ಒಡೆತನದ ಪಾರಿವಾಳಗಳನ್ನು ಕೊಂದಿದ್ದಾನೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದೇವೆ. ಶೀಘ್ರದಲ್ಲೇ ನಾವು ಯುವಕನನ್ನು ಬಂಧಿಸುತ್ತೇವೆ ಎಂದು ಅಧಿಕಾರಿ ಓಂಪಾಲ್ ಸಿಂಗ್ ಹೇಳಿದ್ದಾರೆ.