ಕಲ್ಪರಸ ಎಂಬ ಕಲಿಯುಗದ ಅಮೃತ- ಕೃಷಿಕರ ಬಾಳು ಬಂಗಾರ

Public TV
2 Min Read
udupi kapla rasa 1

ಉಡುಪಿ: ಎಂಟು ತೆಂಗಿನ ಮರ ಇದ್ದರೆ ಸಾಕು ಲಕ್ಷ ಲಕ್ಷ ಸಂಪಾದಿಸಬಹುದು. ಕರ್ನಾಟಕದಲ್ಲಿ ಉಕಾಸ ಕಂಪನಿ ಆರಂಭವಾಗಿದ್ದು, ಕಲಿಯುಗದ ಕಲ್ಪರಸ ಕೃಷಿಕನ ಕೈ ಹಿಡಿಯಲಿದೆ. ಕೃಷಿಕ ತಿಂಗಳು ತಿಂಗಳು ವಿಟಮಿನ್ “ಎಂ” ಜೇಬಿಗಿಳಿಸಿಕೊಳ್ಳುವ ಹೊಸ ದಾರಿ ಕಾಣಿಸುತ್ತಿದೆ.

udupi kapla rasa1

ತೆಂಗು ಬೆಳೆಗಾರರ ಹಿತರಕ್ಷಣೆ ಹಾಗೂ ತೆಂಗು ಉತ್ಪನ್ನಗಳ ಮೌಲ್ಯವರ್ಧನೆಗೆ ಉಡುಪಿಯಲ್ಲಿ ತೆಂಗಿನ ಕಲ್ಪರಸ ಮಾರುಕಟ್ಟೆಗೆ ಬಿಡುಗಡೆಗೆ ಸಿದ್ಧವಾಗಿದೆ. ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಕಲ್ಪರಸ ತೆಗೆಯುವ ಸಂಸ್ಕರಣಾ ಘಟಕ ಆರಂಭಿಸಲಾಗಿದ್ದು, 14 ಯುವಕರಿಗೆ 45 ದಿನದ ತರಬೇತಿ ನಡೆಯುತ್ತಿದೆ. ತೆಂಗಿನ ಮರ ಹತ್ತುವ, ಹೊಂಬಾಳೆಗೆ ಕಟ್ಟು ಬಿಗಿದು ಐಸ್ ಬಾಕ್ಸ್ ಜೋಡಿಸುವ ದಿನಕ್ಕೆರಡು ಬಾರಿ ಕಲ್ಪರಸ ತೆಗೆದು ಕೆಡದಂತೆ ಕಾಪಾಡುವ ತರಬೇತಿ ಕೊಡಲಾಗುತ್ತಿದೆ.

udupi KALPA RASA5

ಉಡುಪಿ ಜಿಲ್ಲೆಯಲ್ಲಿ 1,028 ರೈತರು ಸಂಸ್ಥೆಗೆ ಶೇರುದಾರರಾಗಿದ್ದು, ಮುಂದಿನ 5 ವರ್ಷದಲ್ಲಿ 5 ಸಾವಿರ ಕುಟುಂಬ ಸೇರ್ಪಡೆಯಾಗಲಿದೆ. ಉಕಾಸ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ತೆಂಗು ಬೆಳೆಗಾರರು ವರ್ಷಕ್ಕೆ ಲಕ್ಷಾಂತರ ರೂಪಾಯಿ ಬೆಳೆಯಬೇಕು ಎಂಬ ಉದ್ದೇಶ ನಮ್ಮ ಸಂಸ್ಥೆಯದ್ದು ಸುಮಾರು ಮೂರು ಸಾವಿರ ಯುವಕರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ತಿಂಗಳಿಗೆ 25ರಿಂದ 30 ಸಾವಿರ ರೂಪಾಯಿ ಆದಾಯ ಗಳಿಸಬಹುದು ಎಂದರು.

udupi KALPA RASA3

ಕಲ್ಪರಸ ದಿಂದ ಆರೋಗ್ಯಕ್ಕೆ ಸಿಗುವ ಲಾಭ:
ಕಲ್ಪರಸದಲ್ಲಿ ವಿಟಮಿನ್ ಎ, ಬಿ, ಸಿ.. ಕಬ್ಬಿಣದ ಅಂಶ, 17 ರೀತಿಯ ಅಮೀನೋ ಆಮ್ಲಗಳು ಅಡಕವಾಗಿವೆ. ಕಲ್ಪರಸ ಒಂದು ಕಂಪ್ಲೀಟ್ ಹೆಲ್ತ್ ಡ್ರಿಂಕ್ ಆಗಿದೆ. ಕಲ್ಪರಸದಲ್ಲಿ ಇರುವಷ್ಟು ಶಕ್ತಿಯುತವಾದ ಅಂಶ ಹೆಲ್ತ್ ಡ್ರಿಂಕ್ ಬೇರೆ ಡ್ರಿಂಕ್‍ಗಳಲ್ಲಿ ಇಲ್ಲ. ಗ್ರಾಹಕನ ಆರೋಗ್ಯ ಸುಧಾರಣೆ, ರೈತರಿಗೆ ಶಕ್ತಿ ತುಂಬುವ ಉದ್ದೇಶವಿದೆ. ವಿಪರೀತ ಸಿಹಿಯಾದ ಕಲ್ಪರಸ ಕುಡಿದ ನಂತರ ಬಾಯಾರಿಕೆ ಆಗಲ್ಲ. ಪೌಷ್ಟಿಕಾಂಶಯುಕ್ತ ಮತ್ತು ಹಸಿವು ನೀಗಿಸುತ್ತದೆ.

ಸೊಸೈಟಿಯ ರೂಲ್ಸ್ ಹೀಗಿದೆ ನೋಡಿ:
ಒಂದು ರೈತ ಕುಟುಂಬಕ್ಕೆ 8 ತೆಂಗಿನ ಮರಗಳಿಂದ ಮಾತ್ರ ಕಲ್ಪರಸ ಸಂಗ್ರಹಿಸುವ ಅವಕಾಶವನ್ನು ನೀಡಲಾಗಿದೆ. ಒಂದು ಮರದಿಂದ ಪ್ರತಿದಿನ 2 ಲೀಟರ್ ಸಿಹಿರಸ ಇಳಿಯಲಿದೆ. ವರ್ಷಕ್ಕೆ 8 ಮರದಿಂದ 5,000 ಲೀಟರ್ ರಸ ಇಳಿದರೆ ವಾರ್ಷಿಕ ಸುಮಾರು ಒಂದು ಲಕ್ಷ ರೂಪಾಯಿ ಆದಾಯ ಸಿಗುತ್ತದೆ. ಕಲ್ಪರಸ ತೆಗೆಯುವ ತಜ್ಞ ಯುವಕರು ಲೀಟರ್‍ಗೆ 25 ರೂಪಾಯಿ, ಪಿಎಫ್, ಇಎಸ್.ಐ ಸೌಲಭ್ಯ ಪಡೆಯಲಿದ್ದಾರೆ.

udupi KALPA RASA4

ಕುಂದಾಪುರ ತೆಂಗು ಬೆಳೆಗಾರ ಸೀತಾರಾಮ ಮಾತನಾಡಿ, ನಾನು ಎಂಟು ಮರ ಸೊಸೈಟಿಗೆ ಕೊಟ್ಟಿದ್ದೇನೆ. ನಿವೃತ್ತ ಜೀವನ ಸಾಗಿಸಲು ಅದರ ವರಮಾನ ಹೊಂಬಾಳೆಯಿಂದ ಪ್ರತಿದಿನ 2ರಿಂದ 3 ಬಾರಿ ಕಲ್ಪರಸ ಇಳಿಸಬಹುದು ಎಂದಿದ್ದಾರೆ.

ನಾನು ಗಾರೆ ಕೆಲಸಕ್ಕೆ ಹೋಗುತ್ತಿದ್ದೆ. ಅಲ್ಲಿ ಪಡುವ ಶ್ರಮಕ್ಕೆ ನಮಗೆ ಸಿಗುವ ಸಂಬಳ ಬಹಳ ಕಡಿಮೆ. ಈ ವೃತ್ತಿಯಲ್ಲಿ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ದೇಹಕ್ಕೆ ವಿಶ್ರಾಂತಿಯೂ ಸಿಗುತ್ತದೆ. ಮನಸ್ಸು ಮಾಡಿದರೆ 30 ಸಾವಿರಕ್ಕಿಂತ ಹೆಚ್ಚು ಸಂಬಳ ಗಳಿಸಬಹುದು. ನಮ್ಮ ಮನೆಯ ತೋಟದ ಕೆಲಸವೂ ಮಾಡಬಹುದು ಎಂದು ಕಲ್ಪರಸ ತೆಗೆಯುವ ತಜ್ಞ ಶರತ್ ಹೇಳಿದ್ದಾರೆ.

udupi KALPA RASA6

ಪ್ರತಿ ಗ್ರಾಮಗಳಲ್ಲಿ ಕನಿಷ್ಟ 20ರಿಂದ 30 ಮಂದಿ ರೈತರನ್ನೊಳಗೊಂಡ ಸಹಕಾರ ಸಂಘ ರಚನೆಯಾದರೆ ಪ್ರಧಾನಿ ಮೋದಿ ಹೇಳಿದಂತೆ ರೈತರ ವರಮಾನ ಡಬ್ಬಲ್ ದಾಟಲಿದೆ. ಅಬಕಾರಿ ಇಲಾಖೆ ತನ್ನ ಕಪಿಮುಷ್ಠಿ ಬಿಟ್ಟರೆ ರೈತರ ಬಾಳು ಬಂಗಾರವಾಗಲಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *