ಪಾಟ್ನಾ: ತ್ರೇತಾಯುಗದಲ್ಲಿ ಸೀತಾದೇವಿ ಸ್ವಯಂವರದಲ್ಲಿ ಶ್ರೀರಾಮ ಬಿಲ್ಲು ಮುರಿದ ಕಥೆ ನೀವು ಕೇಳಿರಬೇಕು. ಈಗ ಅದೇ ರೀತಿಯಲ್ಲಿ ಬಿಹಾರದ ಸರಣಾ ಜಿಲ್ಲೆಯಲ್ಲಿ ಓರ್ವ ಮದುವೆಯಲ್ಲಿ ಬಿಲ್ಲು ಮುರಿದು ವಧುವಿನ ಕೊರಳಿಗೆ ಹಾರ ಹಾಕಿದ್ದಾನೆ. ಮದುವೆಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸರಣಾ ಜಿಲ್ಲೆಯ ಸೋನುಪುರದ ಸಬಲ್ಪುರ ಪೂರ್ವ ಭಾಗದಲ್ಲಿ ಮದುವೆ ನಡೆದಿದೆ.
ಕೊರೊನಾ ಕಾಲದಲ್ಲಿ ಅದ್ಧೂರಿ ಮದುವೆಗಳಿಗೆ ಬ್ರೇಕ್ ಬಿದ್ದಿದೆ. ಹಾಗಾಗಿ ಎಷ್ಟೋ ಜನರು ಮನೆಗಳಲ್ಲಿ ಸರಳವಾಗಿ ಮದುವೆ ನೆರೆವೇರಿಸುತ್ತಿದ್ದಾರೆ. ಆದ್ರೂ ಕೆಲವರಿಗೆ ವಿಶೇಷ ಮತ್ತು ವಿಭಿನ್ನವಾಗಿ ಮದುವೆ ಆಗಬೇಕು. ವೇದಿಕೆಗೆ ಎಂಟ್ರಿ ನೀಡುವ ಬಗ್ಗೆಯೂ ಪ್ಲಾನ್ ಮಾಡಿಕೊಳ್ಳುತ್ತಾರೆ. ಈಗ ಅದೇ ರೀತಿಯಲ್ಲಿ ವರ ರಾಮಾಯಣದಲ್ಲಿ ಸ್ವಯಂವರ ರೀತಿಯಲ್ಲಿ ಧನಸ್ಸು ಮುರಿದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾನೆ. ಇದನ್ನೂ ಓದಿ: ತನ್ನ ಮದುವೆಯನ್ನು ಲೈವ್ ಆಗಿ ವರದಿ ಮಾಡಿದ ಪತ್ರಕರ್ತ!- ವಿಡಿಯೋ ಈಗ ವೈರಲ್
ಸೀತಾ ಸ್ವಯಂವರದಲ್ಲಿ ದೊಡ್ಡ ದೊಡ್ಡ ಬಲಶಾಲಿ ಯೋಧರು ಭಾಗಿಯಾಗಿದ್ರು. ಆದ್ರೆ ಇಲ್ಲಿ ವರನಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮೊದಲು ಸ್ಟೇಜ್ ಮೇಲೆ ಬರುವ ವರ, ಧನಸ್ಸು ಇರಿಸುವ ಮೇಜಿನ ಮುಂದೆ ಬಂದು ಎಲ್ಲರಿಗೂ ನಮಸ್ಕರಿಸುತ್ತಾನೆ. ನಂತರ ಪರಮೇಶ್ವರನನ್ನು ನೆನೆದು ಶ್ರೀರಾಮನಂತೆ ಧನಸ್ಸು ಎತ್ತಿ, ಮುರಿಯುತ್ತಾನೆ. ಧನಸ್ಸು ಮುರಿಯುತ್ತಿದ್ದಂತೆ ಮದುವೆಗೆ ಆಗಮಿಸಿದ ಅತಿಥಿಗಳೆಲ್ಲ ಚಪ್ಪಾಳೆ ಹೊಡೆದು ಕೇಕೆ ಹಾಕಿದ್ದಾರೆ. ಇದನ್ನೂ ಓದಿ: 100 ಕಿ.ಮೀ ಏಕಾಂಗಿಯಾಗಿ ಸೈಕಲ್ ಸವಾರಿ- ವಾಪಸ್ ಪತ್ನಿಯ ಜೊತೆ ಬಂದ
ವರ ಧನಸ್ಸು ಮುರಿಯುತ್ತಿದ್ದಂತೆ ಮಹಿಳೆಯರು ಹಾಡು ಹೇಳುತ್ತಾ ವಧುವನ್ನ ವೇದಿಕೆಗೆ ಕರೆ ತಂದಿದ್ದಾರೆ. ಆನಂತರ ಜೋಡಿ ಪರಸ್ಪರ ಹಾರ ಬದಲಿಸಿಕೊಂಡು ಎಲ್ಲರ ಆಶೀರ್ವಾದ ಪಡೆದುಕೊಂಡರು. ಇದನ್ನೂ ಓದಿ: ದಿನಸಿ ತರಲು ಕಳುಹಿಸಿದ್ರೆ ಪತ್ನಿ ಜೊತೆ ಬಂದ ಮಗ – ತಾಯಿ ಶಾಕ್