– ಎಚ್‍ಎಎಲ್‍ನಲ್ಲೂ ಓರ್ವನ ಬರ್ಬರ ಹತ್ಯೆ
– ಇತ್ತೀಚೆಗೆ ಜೈಲಿನಿಂದ ರಿಲೀಜ್ ಆಗಿದ್ದ ವ್ಯಕ್ತಿ
ಬೆಂಗಳೂರು: ಕೊರೊನಾ ವೈರಸ್, ಲಾಕ್‍ಡೌನ್‍ನಿಂದಾಗಿ ಸೈಲೆಂಟ್ ಆಗಿದ್ದ ಬೆಂಗಳೂರಿನ ರೌಡಿಗಳು, ಪುಡಿ ರೌಡಿಗಳು ಮತ್ತೆ ತಮ್ಮ ಕೃತ್ಯ ಆರಂಭಿಸಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಸೆಕ್ಯುರಿಟಿ ಗಾರ್ಡ್‍ನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಶಿವಣ್ಣ (65) ಕೊಲೆಯಾದ ವ್ಯಕ್ತಿ. ವೃದ್ಧ ಶಿವಣ್ಣ ಅವರು ಕಲಾಸಿಪಾಳ್ಯದಲ್ಲಿರುವ ಮುತ್ತೂಟ್ ಫೈನಾನ್ಸ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದರು. ದುಷ್ಕರ್ಮಿಗಳು ನಿನ್ನೆ ರಾತ್ರಿ ಕೊಲೆಗೈದು ಪರಾರಿಯಾಗಿದ್ದಾರೆ. ಘಟನೆಯು ಕಲಾಸಿಪಾಳ್ಯ ಪೊಲೀಸ್ ಠಾಣೆ ಸಮೀಪದಲ್ಲೇ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ ಕಲಾಸಿಪಾಳ್ಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಚ್‍ಎಎಲ್: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಘಟನೆ ಎಚ್‍ಎಎಲ್ ಸಮೀಪದಲ್ಲಿ ನಡೆದಿದೆ. ಅರವಿಂದ್ (27) ಕೊಲೆಯಾದ ವ್ಯಕ್ತಿ.
ದುಷ್ಕರ್ಮಿಗಳು ನಿನ್ನೆ ತಡರಾತ್ರಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಅರವಿಂದ್ ಇತ್ತೀಚೆಗಷ್ಟೇ ಜೈಲಿನಿಂದ ರಿಲೀಜ್ ಆಗಿ ಬಂದಿದ್ದ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದ್ದು, ಸ್ಥಳಕ್ಕೆ ಎಚ್‍ಎಎಲ್ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.