ಬೆಂಗಳೂರು: ಕೊರೊನಾ ಕಾರಣದಿಂದಾಗಿ ಬಣ್ಣದ ಲೋಕದಲ್ಲಿ ಕೆಲಸ ಮಾಡುವ ಬಹುತೇಕ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರಿಗೆ ಸಹಾಯ ಮಾಡಲು ಸ್ಯಾಂಡಲ್‍ವುಡ್ ನಟ ಉಪೇಂದ್ರ ಅವರು ಮುಂದೆ ಬಂದಿದ್ದಾರೆ. ಅವರ ಜೊತೆಗೆ ಕನ್ನಡ ಚಿತ್ರರಂಗದ ಅನೇಕರು ಕೈ ಜೋಡಿಸಿದ್ದಾರೆ.
ಶ್ರೇಯಸ್ ರವಿಕುಮಾರ್ 25 kg ಯ 10 ಬ್ಯಾಗ್ ಒಟ್ಟು 250 kg ಅಕ್ಕಿ ನೀಡಿದ್ದಾರೆ ????
Mr.Shreyas Ravikumar donated 250 kgs of Rice for those in need. Thank you. pic.twitter.com/H1ybUb7qBR
— Upendra (@nimmaupendra) May 12, 2021
Advertisement
ಉಪೇಂದ್ರ ಮಾಡುತ್ತಿರುವ ಪುಣ್ಯದ ಕೆಲಸಕ್ಕೆ ಅನೇಕರು ಕೈ ಜೋಡಿಸಿದ್ದಾರೆ. ತಮ್ಮ ಕೈಲಾದಷ್ಟು ದೇಣಿಗೆ ನೀಡುವ ಮೂಲಕ ಅಗತ್ಯ ಇರುವವರಿಗೆ ನೆರವು ತಲುಪುವಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಉಪೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಅಮೆರಿಕಾದಲ್ಲಿ ನೆಲಸಿರುವ ಶಾಸ್ತ್ರೀ ಸಿನಿಮಾದ ನಾಯಕಿ ಸಹಾಯವನ್ನು ಮಾಡಲು ಮುಂದಾಗಿದ್ದಾರೆ.
Advertisement
ಶಾಸ್ತ್ರಿ ಚಿತ್ರದ ನಾಯಕ ನಟಿ ಮಾನ್ಯ ಈಗ ಅಮೆರಿಕದಲ್ಲಿ ನೆಲೆಸಿದ್ದು ಇಲ್ಲಿನ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಒಂದು ಲಕ್ಷ ರುಪಾಯಿ ಕಳಿಸಿದ್ದಾರೆ ???? ಈ ಹಣದಿಂದ ದಿನಸಿ ಕಿಟ್ ಸದ್ಯದಲ್ಲೇ ವಿತರಿಸಿ ಅದರ ವಿವರ ತಿಳಿಸುತ್ತೇವೆ. pic.twitter.com/V2AxOcnK7X
— Upendra (@nimmaupendra) May 11, 2021
Advertisement
ಶಾಸ್ತ್ರೀ ಚಿತ್ರದ ನಾಯಕ ನಟಿ ಮಾನ್ಯ ಈಗ ಅಮೆರಿಕದಲ್ಲಿ ನೆಲೆಸಿದ್ದು ಇಲ್ಲಿನ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಒಂದು ಲಕ್ಷ ರುಪಾಯಿ ಕಳಿಸಿದ್ದಾರೆ. ಈ ಹಣದಿಂದ ದಿನಸಿ ಕಿಟ್ ಸದ್ಯದಲ್ಲೇ ವಿತರಿಸಿ ಅದರ ವಿವರ ತಿಳಿಸುತ್ತೇವೆ ಎಂದು ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.
Advertisement
ಖ್ಯಾತ ನಟ ಸಾದುಕೋಕಿಲ ಅವರು ಎರಡೂವರೆ ಲಕ್ಷ ರೂಪಾಯಿ ಮೊತ್ತದಲ್ಲಿ ದಿನಸಿ ಕಿಟ್ಗಳನ್ನು ಆರ್ಕೆಸ್ಟ್ರಾ ಕಲಾವಿದರುಗಳಿಗೆ ಹಂಚಲು ಮುಂದೆ ಬಂದಿದ್ದಾರೆ ???????? ವಿತರಣೆಯ ವಿವರಗಳನ್ನು ಸದ್ಯದಲ್ಲೇ ತಿಳಿಸುತ್ತಾರೆ. pic.twitter.com/q6gJo5bk69
— Upendra (@nimmaupendra) May 11, 2021
ಬಿ. ಸರೋಜಮ್ಮ ಅವರು ನಾಲ್ಕು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ. ಸಹಕಲಾವಿದರಿಗೆ ಕಿಟ್ ಕೊಡುವ ಜವಾಬ್ದಾರಿ ನಾನು ತೆಗೆದುಕೊಂಡಿರುವುದರಿಂದ ಅಮ್ಮ ಕೊಡುತ್ತಿರುವ ಹಣವನ್ನು ಸಾಧುಕೋಕಿಲರವರ ನೇತೃತ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ನೀಡಲು ತಿಳಿಸಿದ್ದಾರೆ.
ಸುಪ್ರಸಿಧ್ದ ಅಭಿನೇತ್ರಿ ಬಿ. ಸರೋಜಮ್ಮ ಅವರು ನಾಲ್ಕು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ???? ಸಹಕಲಾವಿದರಿಗೆ ಕಿಟ್ ಕೊಡುವ ಜವಾಬ್ದಾರಿ ನಾನು ತೆಗೆದುಕೊಂಡಿರುವುದರಿಂದ ಅಮ್ಮ ಕೊಡುತ್ತಿರುವ ಹಣವನ್ನು ಸಾದು ಕೋಕಿಲರವರ ನೇತ್ರತ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ನೀಡಲು ತಿಳಿಸಿದ್ದಾರೆ. pic.twitter.com/DaAKPEikD4
— Upendra (@nimmaupendra) May 11, 2021
ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಕೊರೊನಾ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣ, ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ಯಸ್ತರನ್ನು ಸಂಪರ್ಕಿಸಿ. ನಿಮ್ಮ ಉಪ್ಪಿ ಎಂದು ಸೋಶಿಯಲ್ ಮೀಡಿಯಾದಲ್ಲಿ ತಿಳಿಸುವ ಮೂಲಕ ಉಪೇಂದ್ರ ಈ ಕೆಲಸವನ್ನು ಪ್ರಾರಂಭಿಸಿದ್ದಾರೆ.