ಚೆನ್ನೈ: ಕಲರ್ ಫುಲ್ ಟೂರ್ನಿ ಐಪಿಎಲ್‍ನ 14ನೇ ಆವೃತ್ತಿಗೆ ಸಿದ್ಧತೆಗಳು ನಡೆಯುತ್ತಿದೆ. ಈ ಟೂರ್ನಿಯಲ್ಲಿ ಭಾಗವಹಿಸಲು ಕಾಯುತ್ತಿರುವ ಕ್ರಿಕಟ್ ಆಟಗಾರರು ಇದೀಗ ತಮ್ಮ ಹೆಸರನ್ನು ಹರಾಜಿಗೆ ನೋಂದಾಯಿಸಿಕೊಂಡು ಸಜ್ಜಾಗುತ್ತಿದ್ದಾರೆ. ಈಗಾಗಲೇ 1097 ಕ್ರಿಕೆಟ್‍ಗರು ನೋಂದಣಿ ಪೂರ್ಣಗೊಳಿಸಿ ಬಿಡ್ಡಿಂಗ್‍ಗಾಗಿ ಕಾಯುತ್ತಿದ್ದಾರೆ.
Advertisement
ವಿಶ್ವದೆಲ್ಲೆಡೆಯಿಂದ ಒಟ್ಟು 1097 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದು, ಈ ಪೈಕಿ 814 ಮಂದಿ ಭಾರತೀಯ ಕ್ರಿಕೆಟಿಗರಾದರೆ ಇನ್ನೂಳಿದ 283 ಮಂದಿ ವಿದೇಶಿ ಆಟಗಾರರಾಗಿದ್ದಾರೆ. ಆಟಗಾರರ ಹರಾಜಿಗೆ ಹೆಸರು ನೋಂದಾಯಿಸಿಕೊಳ್ಳಲು ಗುರುವಾರ ಕೊನೇ ದಿನವಾಗಿತ್ತು. ಹರಾಜಿನಲ್ಲಿ ಈ ಬಾರಿ ವಿಶೇಷ ಆಕರ್ಷಣೆಯಾಗಿ ಸಚಿನ್ ತೆಂಡುಲ್ಕರ್ ಅವರ ಮಗ ಅರ್ಜುನ್ ತೆಂಡುಲ್ಕರ್ ಒಂದು ಕಡೆಯಾದರೆ, ಇನ್ನೊಂದು ಕಡೆ 7 ವರ್ಷಗಳ ನಿಷೇಧದ ಬಳಿಕ ಕ್ರಿಕೆಟ್‍ಗೆ ಮರಳಿರುವ ತಿರುವನಂತಪುರಂ ಎಕ್ಸ್‌ಪ್ರೆಸ್ ಖ್ಯಾತಿಯ ಶ್ರೀಶಾಂತ್ ಕಾಣಿಸಿಕೊಳ್ಳಲಿದ್ದಾರೆ.
Advertisement
Advertisement
ಫ್ರಾಂಚೈಸಿಗಳಿಗೆ ಗರಿಷ್ಠ 25 ಆಟಗಾರರನ್ನು ಹೊಂದಿರಲು ಅವಕಾಶವಿದ್ದು, ಎಲ್ಲ ತಂಡಗಳು ಕೋಟಾ ಭರ್ತಿ ಮಾಡಿಕೊಂಡರೆ ಹರಾಜಿನಲ್ಲಿ ಒಟ್ಟು 61 ಆಟಗಾರರು ಬಿಕರಿಯಾಗುವ ಲಕ್ಷಣಗಳಿವೆ. ಹರಾಜಿನಲ್ಲಿ ಭಾರತದ 814 ಮಂದಿ, ವೆಸ್ಟ್ ಇಂಡೀಸ್‍ನ 56, ಆಸ್ಟ್ರೇಲಿಯಾದ 42, ದಕ್ಷಿಣ ಆಫ್ರಿಕಾದ 38 ಮತ್ತು ಶ್ರೀಲಂಕಾದ 31, ಆಘ್ಫಾನಿಸ್ತಾನದ 30, ನ್ಯೂಜಿಲೆಂಡ್ 29, ಇಂಗ್ಲೆಂಡ್ 21, ಯುಎಇ 9, ನೇಪಾಳ 8, ಸ್ಕಾಟ್ಲೆಂಡ್ 7, ಬಾಂಗ್ಲಾದೇಶ 5, ಐರ್ಲೆಂಡ್, ಅಮೆರಿಕ, ಜಿಂಬಾಬ್ವೆಯ ತಲಾ 2 ಆಟಗಾರರೂ ಮತ್ತು ನೆದರ್ಲೆಂಡ್‍ನ ಒಬ್ಬರು ಸೇರಿ ಒಟ್ಟು 1,097 ಆಟಗಾರರೂ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
Advertisement
ವಿವಿಧ ತಂಡಗಳಿಂದ ಕೈಬಿಟ್ಟಿರುವ 11 ಕ್ರಿಕೆಟಿಗರ ಮೂಲ ಬೆಲೆ 2 ಕೋಟಿ ಆಗಿದ್ದು, ಈ ಪಟ್ಟಿಯಲ್ಲಿ ಸ್ಟಾರ್ ಕ್ರಿಕೆಟಿಗರಾದ ಕೇದಾರ್ ಜಾಧವ್, ಹರ್ಭಜನ್ ಸಿಂಗ್, ಸ್ಟೀವನ್ ಸ್ಮಿತ್ ಕಾಣಿಸಿಕೊಂಡಿದ್ದಾರೆ. ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಈ ಬಾರಿಯೂ ಐಪಿಎಲ್‍ನಿಂದ ದೂರ ಉಳಿದಿದ್ದಾರೆ.
ಈ ಬಾರಿಯ ಐಪಿಎಲ್ ಭಾರತದಲ್ಲೇ ನಡೆಯಲಿದ್ದು, ಈಗಾಗಲೇ ಬಲಿಷ್ಠ ತಂಡ ಕಟ್ಟಲು ತಯಾರಿಯಲ್ಲಿರುವ ಫ್ರಾಂಚೈಸ್‍ಗಳು ಐಸಿಸಿ ಟಿ20 ರ್ಯಾಂಕಿಂಗ್‍ನಲ್ಲಿ ನಂ. 1 ಬ್ಯಾಟ್ಸ್‌ಮ್ಯಾನ್ ಎನಿಸಿರುವ ಡೇವಿಡ್ ಮಲಾನ್, ಆರನ್ ಫಿಂಚ್ ಮತ್ತು ಯುವ ಆಟಗಾರ ಅರ್ಜುನ್ ತೆಂಡುಲ್ಕರ್ ಮತ್ತು ಸ್ಪೀಡ್ ಸ್ಟಾರ್ ಶ್ರೀಶಾಂತ್ ಮೇಲೆ ಕಣ್ಣಿಟ್ಟಿದೆ. ಫೆಬ್ರವರಿ 18ರಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ