ಕಲಬುರಗಿ: ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಭಾನುವಾರ ನಗರದಲ್ಲಿನ ಬಹುಮನಿ ಕೋಟೆ ವೀಕ್ಷಣೆ ಮಾಡಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಲಬುರಗಿ ಬಹುಮನಿ ಕೋಟೆ ಅತಿ ಸುಂದರ, ವಿಶಾಲವಾಗಿದ್ದು, ಇಲ್ಲಿನ ಜಾಮಿಯಾ ಮಸೀದಿ ಇಡೀ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಮಸೀದಿಗಳಲ್ಲಿ ಒಂದಾಗಿದೆ. ಕೋಟೆಯಲ್ಲಿರುವ ಫಿರಂಗಿ ಅತ್ಯಂತ ದೊಡ್ಡದಾಗಿದೆ. ಹೀಗಾಗಿ ಕೋಟೆ ಅಭಿವೃದ್ಧಿಗೆ ನೀಲ ನಕ್ಷೆ ಸಿದ್ಧ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೋಟೆಯನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
ವಿಷನ್ 2050ಗೆ ಈಗಾಗಲೇ ಪ್ಲ್ಯಾನ್ ರೂಪಿಸಿದ್ದು, ಕೋಟೆ ಅಭಿವೃದ್ಧಿಗಾಗಿ ಪುರಾತತ್ವ ಇಲಾಖೆ ಜೊತೆ ಸಹ ಚರ್ಚಿಸಲಾಗಿದೆ. ಕೋಟೆಯಲ್ಲಿನ ಮನೆಗಳನ್ನು ಆದಷ್ಟು ಶೀಘ್ರ ಬೇರೆಡೆ ಸ್ಥಳಾಂತರ ಮಾಡಲಾಗುವದು. ಬಳಿಕ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ನಿರಾಣಿ ಹೇಳಿದರು.