ಕಲಬುರಗಿ: ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯಿಂದಾಗಿ 4 ತಿಂಗಳ ಗಂಡು ಮಗು ಸೇರಿಸಿ ಜಿಲ್ಲೆಯ 25 ಜನರಿಗೆ ಸೋಮವಾರ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಡಿ.ಸಿ ಶರತ್ ಬಿ. ತಿಳಿಸಿದ್ದಾರೆ.
ಇವರೆಲ್ಲರು ಸರ್ಕಾರಿ ಕ್ವಾರಂಟೈನ್ ನಲ್ಲಿದ್ದು, ಸೋಂಕು ಪತ್ತೆಯಾದ ಕೂಡಲೇ ಇವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
Advertisement
Advertisement
ಅಫಜಲಪುರ ತಾಲೂಕಿನ ರಾಮನಗರ ಗ್ರಾಮದ 4 ತಿಂಗಳ ಗಂಡು ಮಗು (ರೋಗಿ-3315) ಮತ್ತು ರೇವೂರ ಗ್ರಾಮದ 25 ವರ್ಷದ ಯುವಕ (ರೋಗಿ-3395) ಮತ್ತು ಚಿತ್ತಾಪುರ ತಾಲೂಕಿನ ಕಿಣ್ಣಿಸುಲ್ತಾನ ತಾಂಡಾದ 45 ವರ್ಷದ ಪುರುಷ (ರೋಗಿ-3373) ಮತ್ತು ಯಾಗಾಪುರ ತಾಂಡಾದ 16 ವರ್ಷದ ಯುವಕನಲ್ಲಿ (ರೋಗಿ-3384) ಕೋವಿಡ್-19 ಕಂಡುಬಂದಿದೆ.
Advertisement
ಆಳಂದ ತಾಲೂಕಿನ ಹಿರೋಳಿ ತಾಂಡಾದ 22 ವರ್ಷದ ಯುವತಿ (ರೋಗಿ-3374) ಮತ್ತು 3 ವರ್ಷದ ಹೆಣ್ಣು ಮಗು (ರೋಗಿ-3375), ನರೋಣಾ ಗ್ರಾಮದ 65 ವರ್ಷದ ವೃದ್ಧೆ (ರೋಗಿ-3382) ಮತ್ತು 34 ವರ್ಷದ ಪುರುಷ (ರೋಗಿ-3383) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
Advertisement
ಕಾಳಗಿ ಪಟ್ಟಣದ 35 ವರ್ಷದ ಯುವಕ (ರೋಗಿ-3385), ಕಾಳಗಿ ತಾಲೂಕಿನ ಮಾಳಗಿಯ 20 ವರ್ಷದ ಯುವಕ (ರೋಗಿ-3386), ಕಲ್ಲಹಿಪ್ಪರಗಾ ಗ್ರಾಮದ 32 ವರ್ಷದ ಯುವಕ (ರೋಗಿ-3387), ವಚ್ಚಾ ಗ್ರಾಮದ 30 ವರ್ಷದ ಯುವಕನಿಗೆ (ರೋಗಿ-3388) ಮಹಾಮಾರಿ ಸೋಂಕು ಅಂಟಿಕೊಂಡಿದೆ.
ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದ 26 ವರ್ಷದ ಯುವಕ (ರೋಗಿ-3389), 20 ವರ್ಷದ ಯುವಕ (ರೋಗಿ-3390), 20 ವರ್ಷದ ಯುವಕ (ರೋಗಿ-3391) ಹಾಗೂ ಮುಕರಂಬಾ ಗ್ರಾಮದ 19 ವರ್ಷದ ಯುವಕ (ರೋಗಿ-3392) ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಕಲಬುರಗಿ ನಗರದ ನ್ಯೂ ಬ್ಯಾಂಕ್ ಕಾಲೋನಿಯ 25 ವರ್ಷದ ಯುವಕ (ರೋಗಿ-3396), ಸೇಡಂ ಪಟ್ಟಣದ 54 ವರ್ಷದ ಪುರುಷ (ರೋಗಿ-3393) ಮತ್ತು 44 ವರ್ಷದ ಪುರುಷನಿಗೆ (ರೋಗಿ-3394) ಕೊರೊನಾ ವೈರಸ್ ಪತ್ತೆಯಾಗಿದೆ.
ಕಮಲಾಪುರ ತಾಲೂಕಿನ ವಿ.ಕೆ.ಸಲಗರ್ ಗ್ರಾಮದ 7 ವರ್ಷದ ಬಾಲಕ (ರೋಗಿ-3376), 8 ವರ್ಷದ ಬಾಲಕಿ (ರೋಗಿ-3377), 12 ವರ್ಷದ ಬಾಲಕಿ (ರೋಗಿ-3378), 15 ವರ್ಷದ ಬಾಲಕಿ (ರೋಗಿ-3379), 35 ವರ್ಷದ ಮಹಿಳೆ (ರೋಗಿ-3380) ಹಾಗೂ 45 ವರ್ಷದ ಪುರುಷನಿಗೆ (ರೋಗಿ-3381) ಮಹಾಮಾರಿ ಕೊರೋನಾ ಸೋಂಕು ದೃಢವಾಗಿದೆ.
ಇದರಿಂದ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 305ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 128 ಜನ ಗುಣಮುಖರಾಗಿ ಈಗಾಗಲೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 170 ಸಕ್ರೀಯ ರೋಗಿಗಳಿದ್ದಾರೆ ಎಂದು ಶರತ್ ಬಿ. ವಿವರಿಸಿದರು.