ಕರ್ಮ ನಿಮ್ಮನ್ನ ಬಿಡಲ್ಲ- ರಿಯಾ ಬಂಧನಕ್ಕೆ ಅಂಕಿತಾ ಪ್ರತಿಕ್ರಿಯೆ

Public TV
2 Min Read
Rhea Ankita

-ಗುಡ್ ನ್ಯೂಸ್ ಎಂದ ಸುಶಾಂತ್ ಸೋದರಿ

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯ ಬಂಧನವಾಗಿದ್ದು, ಸುಶಾಂತ್ ಸಿಂಗ್ ರಜಪೂತ್ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಕರ್ಮ ನಿಮ್ಮ ವಿಧಿಯನ್ನ ನಿರ್ಧರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಅದೃಷ್ಟದಿಂದ ಏನು ಸಾಧಿಸಲು ಸಾಧ್ಯವಿಲ್ಲ. ಅದು ಕೇವಲ ಕ್ಷಣಿಕ. ನೀವು ಮಾಡುವ ಕೆಲಸಗಳು ನಿಮ್ಮ ಅದೃಷ್ಟವನ್ನ ಬದಲಾಯಿಸುತ್ತದೆ. ಅದುವೇ ಕರ್ಮ ಎಂದು ಬರೆದಿರುವ ಸಾಲುಗಳ ಫೋಟೋವನ್ನ ಅಂಕಿತಾ ಲೋಖಂಡೆ ಹಂಚಿಕೊಂಡಿದ್ದಾರೆ. ಮೂರು ದಿನದ ವಿಚಾರಣೆ ಬಳಿಕ ನಟಿ ರಿಯಾ ಚಕ್ರವರ್ತಿಯನ್ನ ಎನ್‍ಸಿಬಿ ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸುತ್ತಿದೆ. ಮೂರು ದಿನಗಳ ಹಿಂದೆ ರಿಯಾ ಸೋದರ ಶೌವಿಕ್, ಸ್ಯಾಮುಯೆಲ್ ಮಿರಂಡಾನನ್ನ ಬಂಧಿಸಲಾಗಿದೆ. ಇದೀಗ ರಿಯಾ ಡ್ರಗ್ಸ್ ಪಂಜರದಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ

https://www.instagram.com/p/CE38ht-h0S_/

ಇತ್ತ ರಿಯಾ ಬಂಧನದ ಸುದ್ದಿಗೆ ಸುಶಾಂತ್ ಸೋದರಿ ಕೃತಿ ಸಂತಸ ವ್ಯಕ್ತಪಡಿಸಿ, ಗುಡ್ ನ್ಯೂಸ್, ದೇವರು ನಮ್ಮ ಜೊತೆಯಲ್ಲಿದ್ದಾನೆ ಎಂದು ಬರೆದಿರುವ ವಾಟ್ಸಪ್ ಚಾಟ್ ಸ್ಕ್ರೀನ್‍ಶಾಟ್ ವೈರಲ್ ಆಗ್ತಿದೆ. ಕೃತಿ ಪ್ರತಿಕ್ರಿಯೆಗೆ ಕಮೆಂಟ್ ಮಾಡಿರುವ ಅಂಕಿತಾ ಲೋಖಂಡೆ, ದೀ (ಅಕ್ಕ) ಎಂದು ಬರೆದು ಹೃದಯದ ಎಮೋಜಿ ಹಾಕಿದ್ದಾರೆ. ಇದನ್ನೂ ಓದಿ: ಹೌದು, ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿದ್ದೆ: ರಿಯಾ ಚಕ್ರವರ್ತಿ

Ankita Chat

ಭಾನುವಾರ ಆರು ಗಂಟೆ ಮತ್ತು ಸೋಮವಾರ ಎಂಟು ಗಂಟೆ ರಿಯಾ ಎನ್‍ಸಿಬಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಇಂದು ವಿಚಾರಣೆಗೆ ಹಾಜರಾಗಿದ್ದ ವೇಳೆ ರಿಯಾರನ್ನ ಬಂಧಿಸಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಸಿಬಿಐಗೆ ವರ್ಗಾವಣೆಗೆ ಆಗುತ್ತಿದ್ದಂತೆ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿದ್ದರು. ಈ ವೇಳೆ ರಿಯಾ ನಡೆಸಿದ್ದ ವಾಟ್ಸಪ್ ಚಾಟ್ ಡ್ರಗ್ಸ್ ಸೇವನೆಯ ಸುಳಿವು ನೀಡಿತ್ತು. ಸಿಬಿಐ ಡ್ರಗ್ಸ್ ಸಂಬಂಧಿಸಿದ ಪ್ರಕರಣದ ಮಾಹಿತಿಯನ್ನ ಎನ್‍ಸಿಬಿಗೆ ವರ್ಗಾಯಿಸಿತ್ತು. ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೇಸ್- ಸ್ಪೋಟಕ ಆಡಿಯೋ ಕ್ಲಿಪ್ ಔಟ್

Rhea Chakraborty and sushant singh

ಎನ್‍ಸಿಬಿ ವಿಚಾರಣೆ ವೇಳೆ ಅಕ್ಕ ರಿಯಾಗಾಗಿ ಡ್ರಗ್ಸ್ ಖರೀದಿ ಮಾಡುತ್ತಿದ್ದೆ ಎಂದು ಶೌವಿಕ್ ಚಕ್ರವರ್ತಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಈಗಾಗಲೇ ಅಧಿಕಾರಿಗಳು ಶೌವಿಕ್ ಡ್ರಗ್ಸ್ ಖರೀದಿಸುತ್ತಿದ್ದ ಸ್ಥಳಗಳ ಮಹಜರನ್ನ ಅಧಿಕಾರಿಗಳು ನಡೆಸಿದ್ದಾರೆ.  ಇದನ್ನೂ ಓದಿ: ರಿಯಾ ಚಕ್ರವರ್ತಿ ಹೊರ ನಡೆದ ಬಳಿಕ ಸುಶಾಂತ್ ಮನೆಯಲ್ಲಿ ಜೂನ್ 8 ರಿಂದ 14ರ ನಡುವೆ ನಡೆದಿದ್ದೇನು?

Share This Article
Leave a Comment

Leave a Reply

Your email address will not be published. Required fields are marked *