– ರಾಜ್ಯದ ಜನರಿಗೆ ತೊಂದರೆ ಆದರೆ ಸರ್ಕಾರವೇ ಹೊಣೆ
ಹಾಸನ: ಈಗ ಇರುವ ಕೊರೊನಾ ಕರ್ಫ್ಯೂವನ್ನೇ ಸರ್ಕಾರ ಲಾಕ್‍ಡೌನ್ ಎಂದು ಹೆಸರು ಬದಲಿಸಿದೆ. ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ದಿನ 50 ರಿಂದ 55 ಸಾವಿರ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಅದಕ್ಕಿಂತ ಕೆಟ್ಟ ಸುದ್ದಿ ಅಂದ್ರೆ ಪ್ರತಿ ದಿನ 250 ರಿಂದ 300 ಜನ ಸಾಯುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. ಈಗ ಮಹಾರಷ್ಟ್ರದಲ್ಲಿ ಪ್ರತಿ ದಿನ ಸುಮಾರು 3,500 ಅಷ್ಟೇ ಪಾಸಿಟಿವ್ ಬರುತ್ತಿವೆ. ಇದಕ್ಕೆ ಕಾರಣ ಅವರು ವಾರದಲ್ಲಿ ಒಂದು ದಿನ ಮಾತ್ರ ಅಗತ್ಯವಸ್ತು ಕೊಳ್ಳಲು ಅವಕಾಶ ಮಾಡಿಕೊಟ್ಟು ಅಲ್ಲಿ ಸಂಪೂರ್ಣ ಲಾಕ್‍ಡೌನ್ ನಿರ್ವಹಣೆ ಮಾಡಿದರು ಎಂದು ತಿಳಿಸಿದರು.
ದಿನ ನಿತ್ಯ 6 ರಿಂದ 12 ಗಂಟೆ ಓಡಾಡಡಲು ಬಿಟ್ಟು ಸಂಜೆಯಿಂದ ಲಾಕ್‍ಡೌನ್ ಮಾಡ್ತೀವಿ ಅಂತಿದ್ದಾರೆ. ಈಗ ಇರುವ ಕೊರೊನಾ ಕರ್ಫ್ಯೂವನ್ನೇ ಲಾಕ್‍ಡೌನ್ ಅಂತಿದ್ದಾರೆ. ಇಲ್ಲಿ ಹೆಸರು ಬದಲಾವಣೆ ಬಿಟ್ರೆ ಕಾರ್ಯ ರೀತಿ ಸೇಮ್ ಇದೆ. ಈ ಲಾಕ್‍ಡೌನ್ ಫಲ ತರುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ತೊಂದರೆ ಆದರೆ ಸರ್ಕಾರವೇ ಹೊಣೆ. ಲಾಕ್‍ಡೌನ್ ತಿದ್ದುಪಡಿ ಮಾಡಿ ವಾರದಲ್ಲಿ ಒಂದು ಅಥವಾ ಎರಡು ದಿನ ಅಗತ್ಯವಸ್ತು ಕೊಳ್ಳಲು ಅವಕಾಶ ಮಾಡಿಕೊಡಬೇಕು. ಸಂಪೂರ್ಣ ಲಾಕ್‍ಡೌನ್ ಮಾಡದಿದ್ದರೆ ಸೋಂಕಿತರ ಸಂಖ್ಯೆ ಕಡಿಮೆ ಆಗಲು ಸಾಧ್ಯವಿಲ್ಲ. ದಯವಿಟ್ಟು ಸರ್ಕಾರ ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.