ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ (73) ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಏಪ್ರಿಲ್ 13ರಂದು ಹೆಗಡೆ ಅವರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ಉಸಿರಾಟದ ತೊಂದೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ವಿಧಿವಶರಾಗಿದ್ದಾರೆ.
Advertisement
2020ರಲ್ಲಿ ಲಾಕ್‍ಡೌನ್ ವೇಳೆ ವರ್ಚುವಲ್ ಮಾದರಿಯಲ್ಲಿ ಮಾತಿಮ ಮಂಟಪ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಕಲಾವಿದರ ಬದುಕಿನ ಚಿತ್ರಣ ಮತ್ತು 70 ವರ್ಷ ಮೀರಿದ ಕಲಾವಿದರ ಸಂದರ್ಶನ ಸಹ ಮಾಡಲಾಗಿತ್ತು. ಈ ಸರಣಿಯಲ್ಲಿ ಅಕಾಡೆಮಿ 50 ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಲಾಕ್‍ಡೌನ್ ವೇಳೆ ಆರಂಭವಾಗಿದ್ದ ಮಾತಿನ ಮಂಟಪಕ್ಕೆ ಮೆಚ್ಚುಗೆ ಸಹ ವ್ಯಕ್ತವಾಗಿತ್ತು. ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಹೆಗಡೆ ಅವರು ಕಲಾವಿದರ ಏಳಿಗೆಗಾಗಿ ಸಾಕಷ್ಟು ಕೆಲಸ ಮಾಡಿದ್ದರು.
Advertisement