– ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಅಸಮಾಧಾನ
ಯಾದಗಿರಿ: ಕಳೆದ ಒಂದು ವಾರದಲ್ಲಿ ಯಾದಗಿರಿ ಸಕ್ರಿಯ ಕೇಸ್ ಗಳ ಸಂಖ್ಯೆ 700 ರ ಗಡಿದಾಟಿದೆ. ಅಂತರ್ ರಾಜ್ಯ ಪ್ರಯಾಣಿಕರು ಜಿಲ್ಲೆಗೆ ಮಾರಕವಾಗಿ ಪರಿಣಮಿಸಿದ್ದಾರೆ. ಹೀಗಿದ್ದರೂ ಸಹ ಯಾದಗಿರಿ ಜಿಲ್ಲಾಡಳಿತ ನಿರ್ಲಕ್ಷ್ಯ ನೀತಿಗೆ ಜಾರಿದೆ.
ಕರ್ನಾಟಕ ಮತ್ತು ತೆಲಂಗಾಣ ರಾಜ್ಯದ ಗಡಿಯಲ್ಲಿ ಕೋವಿಡ್ ಟೆಸ್ಟ್ ಚೆಕ್ ಪೋಸ್ಟ್ ಇಲ್ಲದ ಪರಿಣಾಮ, ಯಾವುದೇ ಕೋವಿಡ್ ಟೆಸ್ಟ್ ರಿಪೋರ್ಟ್ ಇಲ್ಲದೆ ತೆಲಂಗಾಣ ರಾಜ್ಯದ ವಾಹನಗಳು ರಾಜ್ಯಕ್ಕೆ ಎಂಟ್ರಿ ನೀಡುತ್ತಿವೆ. ಯಾವುದೇ ಮಾಸ್ಕ್ ಇಲ್ಲದೆ ಒಂದೇ ವಾಹನದಲ್ಲಿ ಕಿಕ್ಕಿರಿದು ಜನರ ಅಂತರ್ ರಾಜ್ಯ ಪ್ರಯಾಣ ಮಾಡುತ್ತಿದ್ದಾರೆ.
ಕುರಿಗಳಂತೆ ಪ್ರಯಾಣಿಕರನ್ನು ಹೊತ್ತು ಖಾಸಗಿ ವಾಹನಗಳು ಗಡಿಯನ್ನು ದಾಟುತ್ತಿವೆ. ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಗಡಿಯಲ್ಲಿ ಪತ್ತೆಯೇ ಇಲ್ಲದ ಪರಿಸ್ಥಿತಿಯಿದೆ.