ಚೆನ್ನೈ: ಮೇಕೆದಾಟು ಡ್ಯಾಂ ವಿಚಾರದಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಕದನ ಎನ್ನುವಂತಾಗಿದೆ. ಈಗ ತಮಿಳುನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕ ಕೆಡಾರ್‍ನ ಮಾಜಿ ಐಪಿಎಸ್ ಅಧಿಕಾರಿ, ಕರ್ನಾಟಕ ಸಿಂಗಂ ಅಂತಲೇ ಹೆಸರಾಗಿದ್ದ ಅಣ್ಣಾಮಲೈ ಈಗ ಕರ್ನಾಟಕದ ವಿರುದ್ಧವೇ ತಿರುಗಿಬಿದ್ದಿದ್ದಾರೆ.
Chennai | Newly appointed Chief Minister of Karnataka, Basavaraj Bommai has said that they will build Mekadatu Dam. In spite of being in the same party, we will stage a fasting protest on Aug 5 against the Karnataka govt over this: BJP's Tamil Nadu president K Annamalai pic.twitter.com/LA27qg9vH2
— ANI (@ANI) July 29, 2021
Advertisement
ಮೇಕೆದಾಟು ಜಲಾಶಯ ನಿರ್ಮಾಣ ಕಾಮಗಾರಿ ವಿರೋಧಿಸಿ ಕರ್ನಾಟಕದ ವಿರುದ್ಧ ಆಗಸ್ಟ್ 5ರಷ್ಟು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ನಮ್ಮದೇ ಸರ್ಕಾರ ಇರಬಹುದು.. ಆದ್ರೆ ನಾವು ತಮಿಳುನಾಡು ಸರ್ಕಾರದ ಪರ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 21 ಸಚಿವರ ಪಟ್ಟಿಗೆ ಇನ್ನೂ ಹೈಕಮಾಂಡ್‍ನಿಂದ ಸಿಕ್ಕಿಲ್ಲ ಗ್ರೀನ್‍ಸಿಗ್ನಲ್
Advertisement
Advertisement
ಇದು ರಾಜ್ಯ ಬಿಜೆಪಿ ನಾಯಕರಿಗೆ ಇರಿಸುಮುರಿಸು ತಂದಿದೆ. ಆದರೂ ಎಂಎಲ್‍ಸಿ ತೇಜಸ್ವಿನಿ ಗೌಡ ಪರೋಕ್ಷವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ವಿಚಾರ ಬಂದಾಗ ನಾವೆಲ್ಲಾ ಒಂದೇ, ಪ್ರಾದೇಶಿಕ ವಿಚಾರ ಬಂದಾಗ ಮಾತ್ರ ಬೇರೆ ಬೇರೆ ಎಂದಿದ್ದಾರೆ.
Advertisement