– 8 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ
ನವದೆಹಲಿ: ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದ್ದು, ರಾಜ್ಯದ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಅವರು ನೇಮಕವಾಗಿದ್ದಾರೆ.
ಈ ಹಿಂದೆ ಕರ್ನಾಟಕದ ಉಸ್ತುವಾರಿಯಾಗಿದ್ದ ಗೆಹ್ಲೋಟ್ ಅವರನ್ನು ಇದೀಗ ವಿ.ಆರ್.ವಾಲಾ ಜಾಗಕ್ಕೆ ಆಯ್ಕೆ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟ ಪುನಾರಚನೆ ಚರ್ಚೆಯ ಬೆನ್ನಲ್ಲೇ ಗೆಹ್ಲೋಟ್ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಲಾಗಿದ್ದು, ಕುತೂಹಲ ಹುಟ್ಟಿಸಿದೆ. ಮೂಲತಃ ಮಧ್ಯಪ್ರದೇಶದವರಾದ ಗೆಹ್ಲೋಟ್, ದಲಿತ ಕುಟುಂಬದಲ್ಲಿ ಹುಟ್ಟಿದವರು. ಕೇಂದ್ರ ಸಾಮಾಜಿಕ, ನ್ಯಾಯ, ಸಬಲೀಕರಣ ಸಚಿವರಾಗಿದ್ದ ಇವರು, ಪ್ರಸ್ತುತ ರಾಜ್ಯಸಭಾ ಬಿಜೆಪಿ ನಾಯಕರಾಗಿದ್ದಾರೆ.
Advertisement
President appoints Thaawarchand Gehlot as Governor of Karnataka, Hari Babu Kambhampati as Governor of Mizoram, Mangubhai Chhaganbhai Patel as Governor of Madhya Pradesh, and Rajendra Vishwanath Arlekar as Governor of Himachal Pradesh pic.twitter.com/ZA1GrFrgLV
— ANI (@ANI) July 6, 2021
Advertisement
ರಾಜ್ಯದಲ್ಲಿ 6 ವರ್ಷ 10 ತಿಂಗಳಿಂದ ವಜೂಭಾಯಿ ರುಧಾಬಾಯಿ ವಾಲಾ ರಾಜ್ಯಪಾಲರಾಗಿದ್ದಾರೆ. ವಿ.ಆರ್.ವಾಲಾ 2014ರ ಸೆಪ್ಟೆಂಬರ್ ನಲ್ಲಿ ರಾಜ್ಯದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು. 2019ರ ಸೆಪ್ಟೆಂಬರ್ ನಲ್ಲಿ ವಿ.ಆರ್ ವಾಲಾ ಅವರ 5 ವರ್ಷದ ಅಧಿಕಾರಾವಧಿ ಪೂರ್ಣಗೊಂಡಿತ್ತು. ಅಧಿಕಾರ ಮುಗಿದ ಬಳಿಕವೂ ವಾಲಾ ಅವರನ್ನೇ ಮುಂದುವರಿಸಲಾಗಿತ್ತು.
Advertisement
Mizoram Governor PS Sreedharan Pillai appointed as Goa Governor, Haryana Governor Satyadev Narayan Arya appointed as Tripura Governor, Tripura Governor Ramesh Bais appointed as Jharkhand Governor & Himachal Pradesh Governor Bandaru Dattatraya appointed as Haryana Governor
— ANI (@ANI) July 6, 2021
Advertisement
ಮಿಜೋರಾಂ ರಾಜ್ಯಪಾಲರಾಗಿ ಹರಿ ಬಾಬು ಕಂಭಂಪತಿ, ಮಧ್ಯಪ್ರದೇಶ ಮಂಗುಭಾಯ್ ಚಗನ್ಭಾಯ್ ಪಟೇಲ್, ಹಿಮಾಚಲ ಪ್ರದೇಶ ರಾಜೇಂದ್ರನ್ ವಿಶ್ವನಾಥ್ ಅರ್ಲೆಕರ್, ಗೋವಾ ಪಿ.ಎಸ್.ಶ್ರೀಧರನ್ ಪಿಳ್ಳೈ, ತ್ರಿಪುರ ಸತ್ಯದೇವ್ ನಾರಾಯಣ್ ಆರ್ಯ, ಜಾರ್ಖಂಡ್ ರಮೇಶ್ ಬೈಸ್ ಹಾಗೂ ಹರಿಯಾಣ ರಾಜ್ಯಪಾಲರಾಗಿ ಬಂದಾರು ದತ್ತಾತ್ರೇಯ ಅವರನ್ನು ನೇಮಿಸಲಾಗಿದೆ.