ಕರ್ನಾಟಕದಲ್ಲಿ 1,488 ಪಾಸಿಟಿವ್, ಬೆಂಗಳೂರಿನಲ್ಲಿ 925 ಜನಕ್ಕೆ ಸೋಂಕು -8 ಮಂದಿ ಬಲಿ

Public TV
1 Min Read
Corona 8

ಬೆಂಗಳೂರು: ಇಂದು ಕರ್ನಾಟಕದಲ್ಲಿ 1,488 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಬೆಂಗಳೂರಿನಲ್ಲಿ 925 ಹೊಸ ಕೊರೊನಾ ಕೇಸ್ ಪತ್ತೆಯಾಗಿದ್ದು ಸಾವಿರದ ಗಡಿಯತ್ತ ಬೆಂಗಳೂರು ದಾಪುಗಾಲಿಡುತ್ತಿದೆ.

5d78aa9b 0800 4f6f 98b5 94ac882bb386

ಆಸ್ಪತ್ರೆಯಿಂದ 341 ಜನ ಡಿಸ್ಚಾರ್ಜ್ ಆಗಿದ್ದಾರೆ. 8 ಜನ ಕೊರೊನಾಗೆ ಬಲಿಯಾಗಿದ್ದಾರೆ. ಇಂದು ರಾಜ್ಯಾದ್ಯಂತ ಒಟ್ಟು 76,018 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.

64acf63d 109f 4686 a7fc 39827747c0ba

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,65,102 ಕ್ಕೆ ಏರಿಕೆ ಆಗಿದೆ. ಈ ಪೈಕಿ 9,41,309 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 11,359 ಸಕ್ರಿಯ ಪ್ರಕರಣಗಳಿವೆ.

5ba348ad 0e80 4101 b9a5 a0eed9258b2f

ಒಟ್ಟು ಇಲ್ಲಿಯವರೆಗೆ 12,415 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 131 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 5,973 ಆಂಟಿಜನ್ ಟೆಸ್ಟ್, 87,397 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 93,370 ಮಂದಿಗೆ ಪರೀಕ್ಷೆ ಮಾಡಲಾಗಿದೆ.

158c5a9c 1d7c 4a58 b42c a1899ec8f144

ಬೆಂಗಳೂರು ನಗರದಲ್ಲಿ 925 ಮಂದಿಗೆ ಸೋಂಕು ಬಂದಿದೆ. ದಕ್ಷಿಣ ಕನ್ನಡ 64, ಕಲಬುರಗಿ 59, ಬೀದರ್ 53, ಮೈಸೂರು 49, ವಿಜಯಪುರ 46, ತುಮಕೂರು 41, ಮತ್ತು ಉಡುಪಿಯಲ್ಲಿ 38 ಮಂದಿಗೆ ಸೋಂಕು ಬಂದಿದೆ. ಒಟ್ಟು ಮಂದಿ ಐಸಿಯುನಲ್ಲಿದ್ದು, ಬೆಂಗಳೂರಿನಲ್ಲಿ 51, ಕಲಬುರಗಿ 15, ಮಂಡ್ಯ 9, ಧಾರವಾಡ ಮತ್ತು ಮೈಸೂರಿನಲ್ಲಿ ತಲಾ 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *