– ಬೆಂಗಳೂರಿನಲ್ಲಿ 2,906 ಜನಕ್ಕೆ ತಗುಲಿದ ಮಹಾಮಾರಿ
– ಬೀದರ್ ದ್ವಿ ಶತಕ, ಕಲಬುರಗಿ, ಮೈಸೂರು, ತುಮಕೂರಿನಲ್ಲಿ ಸೆಂಚೂರಿ
ಬೆಂಗಳೂರು: ಎರಡನೇ ದಿನವೂ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 4 ಸಾವಿರದ ಗಡಿ ದಾಟಿದ್ರೆ, ಮಹಾನಗರಿ ಬೆಂಗಳೂರು ಕೊರೊನಾ ರಕ್ಕಸಿಯ ಬಾಹುಗಳಲ್ಲಿ ಬಂಧಿಯಾಗುತ್ತಿರುವ ಸೂಚನೆಗಳು ಸಿಗುತ್ತಿವೆ. ಇಂದು ರಾಜ್ಯದಲ್ಲಿ 4,237 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 18 ಸೋಂಕಿತರು ಪ್ರಾಣ ಬಿಟ್ಟಿದ್ದಾರೆ.
ಸದ್ಯ ರಾಜ್ಯದಲ್ಲಿ 30,865 ಸಕ್ರಿಯ ಪ್ರಕರಣಗಳಿದ್ದು, 265 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಸಂಖ್ಯೆ 10,01,238ಕ್ಕೆ ಏರಿಯಾಗಿದೆ. ಇದುವರೆಗೂ ಕೊರೊನಾಗೆ 12,585 ಜನರು ಸಾವನ್ನಪ್ಪಿದ್ದಾರೆ. ಇಂದು 1,599 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.3.65 ಮತ್ತು ಮರಣ ಪ್ರಮಾಣ ಶೇ.0.42ರಷ್ಟಿದೆ. ಇಂದು 1,15,732 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರಿನಲ್ಲಿ 2,906 ಮಂದಿಗೆ ಸೋಂಕು ತಗುಲಿದ್ರೆ, ಬೀದರ್ ನಲ್ಲಿ ಡಬಲ್ ಸೆಂಚೂರಿ, ಕಲಬುರಗಿ, ಮೈಸೂರು ಮತ್ತು ತುಮಕೂರಿನಲ್ಲಿ ಮೂರಂಕಿಯ ಗಡಿ ದಾಟಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 19, ಬಳ್ಳಾರಿ 25, ಬೆಳಗಾವಿ 46, ಬೆಂಗಳೂರು ಗ್ರಾಮಾಂತರ 73, ಬೆಂಗಳೂರು ನಗರ 2,906, ಬೀದರ್ 218, ಚಾಮರಾಜನಗರ 17, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 51, ಚಿತ್ರದುರ್ಗ 28, ದಕ್ಷಿಣ ಕನ್ನಡ 30, ದಾವಣಗೆರೆ 17, ಧಾರವಾಡ 57, ಗದಗ 15, ಹಾಸನ 67, ಹಾವೇರಿ 4, ಕಲಬುರಗಿ 144, ಕೊಡಗು 23, ಕೋಲಾರ 31, ಕೊಪ್ಪಳ 9, ಮಂಡ್ಯ 67, ಮೈಸೂರು 109, ರಾಯಚೂರು 21, ರಾಮನಗರ 3, ಶಿವಮೊಗ್ಗ 24, ತುಮಕೂರು 102, ಉಡುಪಿ 53, ಉತ್ತರ ಕನ್ನಡ 44, ವಿಜಯಪುರ 18 ಮತ್ತು ಯಾದಗಿರಿಯಲ್ಲಿ 5 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.