ಮುಂಬೈ: ಬಾಲಿವುಡ್ ಬೇಬೋ, ಸೈಫ್ ಮಡದಿ ಕರೀನಾ ಕಪೂರ್ ಬೇಬಿ ಬಂಪ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಆರೋಗ್ಯದ ಬಗ್ಗೆ ನಿಗಾ ಇರಲಿ ಎಂದು ಸಲಹೆ ನೀಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಕರೀನಾ ಕಪೂರ್ ತಮ್ಮ ವೈಯಕ್ತಿಕ ಜೀವನದ ಮಾಹಿತಿಯನ್ನ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕರೀನಾ ಕಪೂರ್ ಖಾನ್, ಕೆಲ ದಿನಗಳ ಹಿಂದೆ ಮುಂಬೈಗೆ ವಾಪಸ್ ಆಗಿದ್ದಾರೆ. ಖಾಸಗಿ ಕಂಪನಿಯ ಜಾಹೀರಾತಿನ ಶೂಟಿಂಗ್ ತೊಡಗಿಕೊಂಡಿರುವ ಕರೀನಾ ಕಪೂರ್, ನಾವಿಬ್ಬರು ಚಿತ್ರೀಕರಣದ ಸೆಟ್ ನಲ್ಲಿದ್ದೇವೆ ಎಂದು ಬರೆದು ಬೇಬಿ ಬಂಪ್ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ.
ಜನವರಿಯಲ್ಲಿ ಮಗುವಿನ ಆಗಮನವಾಗಲಿದೆ ಎಂದು ಪಟೌಡಿ ಕುಟುಂಬ ತಿಳಿಸಿದೆ. ಅಕ್ಟೋಬರ್ 16, 2012ರಂದು ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮದುವೆಯಾಗಿದ್ದರು. ದಂಪತಿಗೆ ಡಿಸೆಂಬರ್ 20, 2016ರಂದು ಗಂಡು ಮಗು ಜನನವಾಗಿತ್ತು. ಇದೀಗ ದಂಪತಿ ಎರಡನೇ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ.