ಕರಿಬೇವಿನ ಎಲೆಗಳನ್ನು ಅಡುಗೆಗೆ ಒಗ್ಗರಣೆ ನೀಡಲು ಬಳಸುತ್ತೇವೆ ಎಂದು ನಮಗೆ ಗೊತ್ತು. ಆದರೆ ಇದರಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ತಿಳಿದುಕೊಂಡರೆ ನೀವು ಪ್ರತಿನಿತ್ಯ ಕರಿಬೇವನ್ನು ಬಳಸುತ್ತೀರಿ.
ಆಡುಗೆ ಮನೆಯ ವಿಚಾರಕ್ಕೆ ಬಂದರೆ ಪ್ರತಿಯೊಬ್ಬರ ಮನೆಯಲ್ಲಿ ಕರಿಬೇವಿನ ಎಲೆಗಳು ಆಹಾರದ ರುಚಿ ಮತ್ತು ವಾಸನೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದು ಮಾತ್ರವಲ್ಲದೇ ಕರಿಬೇವು ಔಷಧೀಯ ಗುಣಗಳನ್ನು ಕೂಡ ಹೊಂದಿದೆ.
ಆರೋಗ್ಯಕಾರಿ ಪ್ರಯೋಜನಗಳು:
* ಆಹಾರದಲ್ಲಿ ಕರಿಬೇವನ್ನು ಬಳಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
* ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಕರಿಬೇವಿನ ಪಾತ್ರ ಬಹುಮುಖ್ಯವಾಗಿದೆ.
* ಕರಿಬೇವಿನಲ್ಲಿ ಅನೇಕ ಔಷಧೀಯ ಗುಣಗಳಿರುವುದರಿಂದ ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
* ಕರಿಬೇವಿನ ಎಲೆಗಳ ಸೇವನೆಯಿಂದ ದೇಹ ತೂಕವನ್ನು ನಿಯಂತ್ರಣದಲ್ಲಿಡಬಹುದು. ಇದರ ಎಲೆಗಳು ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ.
* ಕೂದಲು ಬೇಳವಣಿಗೆಗೆ ಕರಿಬೇವನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ ಹಚ್ಚಿಕೊಂಡರೆ ಒಳ್ಳೆಯದು.
* ಖಾದ್ಯಗಳಿಗೆ ಹಾಕಿರುವ ಕರಿಬೇವಿನ ಎಲೆಗಳನ್ನು ತೆಗೆದು ಇಡದೆ ಸೇವಿಸುವುದರಿಂದ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.
* ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವ ಸಾಮಥ್ರ್ಯವನ್ನು ಕರಿಬೇವು ಹೊಂದಿದೆ.