ಮುಂಬೈ: ಇಂದು ಸಹೋದರ ದಿನಾಚರಣೆಯ ಪ್ರಯುಕ್ತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರು ತಮ್ಮ ಮುದ್ದಾದ ಮಕ್ಕಳ ಕ್ಯೂಟ್ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮೂಲತ ಕರಾವಳಿ ಮೂಲದ ಶಿಲ್ಪಾ ಶೆಟ್ಟಿಯವರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಸದ್ಯ ಪತಿ ರಾಜ್ ಕುಂದ್ರಾರವರನ್ನು ವಿವಾಹವಾದ ಬಳಿಕ ಮುಂಬೈನಲ್ಲಿ ತಂಗಿರುವ ಶಿಲ್ಪಾ ಶೆಟ್ಟಿ, ಸಿನಿಮಾರಂಗದಿಂದ ದೂರ ಉಳಿದಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಸದ್ಯ ಇಂದು ಸಹೋದರ ದಿನಾಚರಣೆಯ ವಿಶೇಷವಾಗಿ ಶಿಲ್ಪಾ ಶೆಟ್ಟಿ ತಮ್ಮ ಮಕ್ಕಳಾದ ವಿಯಾನ್ ಹಾಗೂ ಸಮೀಶಾ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ವಿಯಾನ್ ಗಾರ್ಡನ್ ಏರಿಯಾದಲ್ಲಿ ಕುಳಿತು ಎಳನೀರು ಕುಡಿಯುತ್ತಿರುತ್ತಾನೆ. ಈ ವೇಳೆ ಸಮೀಶಾ ತನಗೆ ಎಳನೀರು ಕೊಡುವಂತೆ ಅಣ್ಣನ ಬಳಿ ಕೇಳುತ್ತಾಳೆ. ಆಗ ಮೊದಲಿಗೆ ಎಳನೀರು ಕೊಡದೇ ವಿಯಾನ್ ಕುಡಿಯುತ್ತಿದ್ದಾಗ, ಶಿಲ್ಪಾ ಶೆಟ್ಟಿಯವರು ಶೇರಿಂಗ್ ಇಸ್ ಕೇರಿಂಗ್ ಎನ್ನುತ್ತಾರೆ. ಹೀಗೆ ಹೇಳುತ್ತಿದ್ದಂತೆ ವಿಯಾನ್ ಸ್ಟ್ರಾ ಮೂಲಕ ಎರಡು ಹನಿ ಎಳನೀರನ್ನು ಸಮೀಶಾಗೆ ನೀಡಿದ್ದಾನೆ.
View this post on Instagram
ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಇಬ್ಬರು ಮಕ್ಕಳು ಬಹಳ ಕ್ಯೂಟ್ ಆಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮೇ 21ರಂದು ವಿಯಾನ್ 9ನೇ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಪ್ರೀತಿಯ ಪುತ್ರನಿಗೆ ಪುಟಾಣಿ ನಾಯಿ ಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
View this post on Instagram