ಕಾರವಾರ: ಪಾಕಿಸ್ತಾನದಿಂದ ಉಗ್ರರು ಸಮುದ್ರ ಮಾರ್ಗ ಮೂಲಕ ಬಂದು ಮುಂಬೈ ಮೇಲೆ ದಾಳಿ ನಡೆಸಿದ ಬಳಿಕ ಭಾರತೀಯ ಕೋಸ್ಟ್ ಗಾರ್ಡ್ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಾ ಬಂದಿದ್ದು, ಈಗ ಎರಡು ಫಾಸ್ಟ್ ಪ್ಯಾಟ್ರೋಲ್ ಹಡಗುಗಳು(ಎಫ್‍ಪಿವಿ) ಸೇರ್ಪಡೆಯಾಗಿದೆ.
ಭದ್ರತೆ, ಸಮುದ್ರಮಾರ್ಗದ ಕಳ್ಳಸಾಗಾಣಿಕೆ ತಡೆಯುವವ ಹಾಗೂ ಸಮುದ್ರದಲ್ಲಿ ತೊಂದರೆಗೆ ಸಿಲುಕುವ ಮೀನುಗಾರರ ರಕ್ಷಣೆಗೆ ಭಾರತೀಯ ಕೋಸ್ಟ್ ಗಾರ್ಡ್ ಎರಡು ಫಾಸ್ಟ್ ಪ್ಯಾಟ್ರೋಲ್ ಹಡಗುಗಳನ್ನು ಕಾರವಾರ ವಿಭಾಗಗಕ್ಕೆ ನಿಯೋಜಿಸುವ ಮೂಲಕ ಉತ್ತರ ಕನ್ನಡದ ಕರಾವಳಿಯ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.
Advertisement
ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿಎಸ್) ಕಾರವಾರ ಘಟಕವು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮಾಜಾಳಿಯಿಂದ ದಕ್ಷಿಣದ ಭಟ್ಕಳದವರೆಗೆ ತನ್ನ ವ್ಯಾಪ್ತಿ ಹೊಂದಿದೆ.
Advertisement
ಕಾರವಾರದಲ್ಲಿ ಐಸಿಜಿಎಸ್ 2009ರ ನವೆಂಬರ್ 4 ರಿಂದ ಕಾರ್ಯಾರಂಭ ಮಾಡಿದಾಗಿನಿಂದ 2 ಇಂಟರ್ ಸೆಪ್ಟರ್ ಬೋಟ್‍ಗಳು ಮತ್ತು 2 ಇಂಟರ್ ಸೆಪ್ಟರ್ ಕ್ರಾಫ್ಟ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿತ್ತು.
Advertisement
Advertisement
ಇಂದಿನಿಂದ ಐಸಿಜಿಎಸ್ ಸಾವಿತ್ರಿಬಾಯಿ ಪುಲೆ ಮತ್ತು ಐಸಿಜಿಎಸ್ ಕಸ್ತೂರ್ಬಾ ಗಾಂಧಿ ಎಂಬ ಎರಡು ಫಾಸ್ಟ್ ಪ್ಯಾಟ್ರೋಲ್ ಹಡಗುಗಳನ್ನು ಇದೀಗ ಕಾರವಾರಕ್ಕೆ ನಿಯೋಜಿಸಿದೆ. ಈ ಎರಡೂ ಹಡಗುಗಳು ಈ ಮೊದಲು ನವ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಹಡಗುಗಳು ಗೋವಾ ಶಿಪ್‍ಯಾರ್ಡ್ ಲಿಮಿಟೆಡ್ ನಿರ್ಮಿಸಿದ ಫಾಸ್ಟ್ ಪ್ಯಾಟ್ರೋಲ್ ಹಡಗುಗಳಾಗಿವೆ.
ಹಡಗಿನ ವಿಶೇಷತೆ ಏನು?
ಈ ಹಡಗುಗಳು ಗಂಟೆಗೆ 35 ನಾಟ್ಸ್ ವೇಗವನ್ನು ಕ್ರಮಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ರಕ್ಷಣೆಗೆ 30 ಎಂ.ಎಂಸಿ.ಆರ್.ಎನ್ ಗನ್ ಹೊಂದಿದೆ. ಇವುಗಳನ್ನು ಉನ್ನತೀಕರಿಸಿ ಉಪಗ್ರಹ ಸಂವಹನ ಮತ್ತು ಸಂಚರಣೆ ವ್ಯವಸ್ಥೆಗಳೊಂದಿಗೆ ಅಳವಡಿಸಲಾಗಿದೆ. ಹಡಗುಗಳನ್ನು ಕಣ್ಗಾವಲು, ಗಸ್ತು ತಿರುಗಲು ವಿನ್ಯಾಸಗೊಳಿಸಲಾಗಿದೆ.
ಇದು ಆಳವಿಲ್ಲದ ನೀರಿನ ಕಾರ್ಯಾಚರಣೆಗೂ ಸಮರ್ಥವಾಗಿದೆ. ಎಫ್‍ಪಿವಿಗಳು ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆ, ಕಡಲ್ಗಳ್ಳತನ ವಿರೋಧಿ ಗಸ್ತು, ಮೀನುಗಾರಿಕೆ ರಕ್ಷಣೆ ಮತ್ತು ಶೋಧ ಹಾಗೂ ಪಾರುಗಾಣಿಕಾ ಕಾರ್ಯಾಚರಣೆಗಳಿಗೆ ಸಹ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ.
ಈ ಹಿಂದೆ ಈ ಎರಡೂ ಹಡಗುಗಳು ಹಲವಾರು ಎಸ್.ಎ.ಆರ್ ಕಾರ್ಯಾಚರಣೆಗಳು, ಕಡಲ್ಗಳ್ಳತನ ವಿರೋಧಿ ಗಸ್ತು ಮತ್ತು ಕಣ್ಗಾವಲು ಪ್ರಯತ್ನಗಳಲ್ಲಿ ಭಾಗಿಯಾಗಿವೆ. ಇದಲ್ಲದೆ ಹಲವಾರು ಸಂದರ್ಭಗಳಲ್ಲಿ ಸಮುದ್ರದಲ್ಲಿರುವ ಮೀನುಗಾರರಿಗೆ ಇವುಗಳ ಮೂಲಕ ನೆರವು ನೀಡಲಾಗಿದೆ.
ಕದಂಬ ನೌಕಾ ನೆಲೆ, ಕೈಗಾ ಅಣು ಸ್ಥಾವರದಂತಹ ಮಹತ್ತರ ಯೋಜನೆಗಳ ಮೇಲೆ ಸಮುದ್ರ ಮಾರ್ಗದಿಂದ ದಾಳಿ ಮಾಡದಂತೆ ಕರಾವಳಿ ಭಾಗದಲ್ಲಿ ಭದ್ರತೆಗೆ ನೀಡಲಿದ್ದು ಕಾರವಾರ ಭಾಗದ ಕೋಸ್ಟ್ ಗಾರ್ಡ್ ವಿಭಾಗಕ್ಕೆ ಹೆಚ್ಚಿನ ಬಲ ಬಂದಂತಾಗಿದೆ.