ಕನ್ನಡ ಹೆಸರಿನ ಗ್ರಾಮಗಳಿಗೆ ಮರುನಾಮಕರಣ ಮಾಡ್ಬೇಡಿ- ಕೇರಳ ಸಿಎಂಗೆ ಹೆಚ್‍ಡಿಕೆ ಪತ್ರ

Public TV
1 Min Read
hdk 4

ಬೆಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಗ್ರಾಮಗಳಿಗೆ ಕನ್ನಡ ಹೆಸರು ತೆಗೆದು ಮಲೆಯಾಳಂ ಹೆಸರು ಮರು ನಾಮಕರಣ ಮಾಡಿರುವ ಕೇರಳ ಸರ್ಕಾರದ ನಿರ್ಧಾರವನ್ನ ಹಿಂಪಡೆಯುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಕಾಸರಗೋಡಿನ ಗ್ರಾಮಗಳ ಕನ್ನಡ ಹೆಸರನ್ನ ಬದಲಿಸದಂತೆ ಮನವಿ ಮಾಡಿದ್ದಾರೆ.

kerala cm

ಕನ್ನಡ ಪರಿಮಳವನ್ನು ಹೊಂದಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಕೆಲವು ಗ್ರಾಮಗಳನ್ನು ಮಲಯಾಳಂ ಹೆಸರು ಮರುನಾಮಕರಣ ಮಾಡಲು ಕೇರಳ ಸರ್ಕಾರದ ನಿರ್ಧರಿಸಿರುವ ಬಗ್ಗೆ ಮಾಧ್ಯಮಗಳಿಂದ ತಿಳಿಯಿತು. ಇದು ಸರಿಯಿದ್ದರೂ, ಭಾಷಾ ಸಾಮರಸ್ಯದ ಹೆಸರಿನಲ್ಲಿ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ನಾನು ವಿನಂತಿಸುತ್ತೇನೆ. ಕರ್ನಾಟಕದೊಂದಿಗೆ ಈ ಭಾಗದ ಜನರಿಗೆ ದಶಕಗಳಿಂದ ಉತ್ತಮ ಭಾಂದವ್ಯವಿದೆ. ಮತ್ತು ಈ ಪ್ರದೇಶದ ಜನರು ಯಾವಾಗಲೂ ಪರಸ್ಪರರ ಭಾಷಾ ಪರಂಪರೆಗೆ ಅನುಗುಣವಾಗಿರುತ್ತಾರೆ. ಅದು ಸಾಂಸ್ಕೃತಿಕ ಸಹಬಾಳ್ವೆಯಾಗಿದೆ.

ಈ ಸಂಪ್ರದಾಯವನ್ನು ಮುಂದುವರಿಸ ಬೇಕಾಗಿದೆ. ಹೆಸರು ಬದಲಾವಣೆಯು ಅರ್ಥದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಹಳ್ಳಿಯ ಹೆಸರುಗಳು ಮೂಲ ಕನ್ನಡ ಪರಿಮಳವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುವುದು ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ಪತ್ರದ ಮೂಲಕ ಹೆಸರು ಮರುನಾಮಕರಣ ಮಾಡದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಡುಗೆ ಮಾಡುವ ವರ ಬೇಕಾಗಿದ್ದಾನೆ- ಜಾಹೀರಾತು ವೈರಲ್

Share This Article
Leave a Comment

Leave a Reply

Your email address will not be published. Required fields are marked *