ಮುಂಬೈ: ಕೊರೊನಾ ವೈರಸ್ ಮಿತಿಮೀರಿ ಹರಡುತ್ತಿದೆ. ಬೆಡ್‍ಗಳು ಸಿಗದೇ ಸಾಕಷ್ಟು ಜನರು ಒದ್ದಾಡುತ್ತಿದ್ದಾರೆ. ಕೊರೊನಾ ಹೆಚ್ಚದಂತೆ ತಡೆಯಲು ಸಾಕಷ್ಟು ಜನರು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಈಗ ಎಸ್‍ಎಸ್ ರಾಜಮೌಳಿ ನಿರ್ದೇಶನದ ಆರ್‍ಆರ್‍ಆರ್ ಚಿತ್ರ ತಂಡ ಕೂಡ ಇದೇ ಮಾದರಿಯ ಕೆಲಸದಲ್ಲಿ ತೊಡಗಿದೆ. ವಿಶೇಷ ಎಂದರೆ, ಚಿತ್ರತಂಡದ ಪ್ರತಿಯೊಬ್ಬರೂ ಬೇರೆ ಬೇರೆ ಭಾಷೆಯಲ್ಲಿ ಮಾತನಾಡಿದ್ದಾರೆ.
View this post on Instagram
ರಾಜಮೌಳಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಲಿಯಾ ಭಟ್, ಜೂ. ಎನ್‍ಟಿಆರ್, ರಾಮ್ ಚರಣ್, ರಾಜಮೌಳಿ, ಅಜಯ್ ದೇವಗನ್ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳು ಒಂದೊಂದು ಭಾಷೆಯಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ. ಜೂ.ಎನ್‍ಟಿಆರ್ ಕನ್ನಡಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
View this post on Instagram
ವೀಡಿಯೋದಲ್ಲಿ ಕನ್ನಡದಲ್ಲಿ ಮಾತನಾಡಿರುವ ಜೂ.ಎನ್‍ಟಿಆರ್ ಎಲ್ಲರಿಗೂ ನಮಸ್ಕಾರ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ದೊಡ್ಡ ಅಸ್ತ್ರವಾಗಿದೆ. ಸದಾ ಮಾಸ್ಕ್ ಧರಿಸಿ. ಕೈ ಸ್ವಚ್ಛವಾಗಿಟ್ಟುಕೊಳ್ಳಿ. ಪಬ್ಲಿಕ್‍ನಲ್ಲಿ ಓಡಾಡುವಾಗ ಅಂತರ ಕಾಯ್ದುಕೊಳ್ಳಿ. ಮಾಸ್ಕ್ ಧರಿಸುವುದಾಗಿ ಹಾಗೂ ವ್ಯಾಕ್ಸಿನ್ ಹಾಕಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿ ಎಂದು ಕೋರಿದ್ದಾರೆ. ಜೂನೀಯರ್ ಎನ್‍ಟಿಆರ್ ಕನ್ನಡದಲ್ಲಿ ಜಾಗೃತಿಯ ಸಂದೇಶವನ್ನು ತಲುಪಿಸಿರುವುದು ವಿಶೇಷವಾಗಿದೆ.