ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ದಾಖಲೆ ಮಾಡಿದೆ. ಒಟ್ಟು 17.24 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಬಿಡುಗಡೆಯಾದ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರ ಎಂಬ ಹೆಗ್ಗಳಿಕಗೆ ಪಾತ್ರವಾಗಿದೆ.
Advertisement
Advertisement
ಕರ್ನಾಟಕದಲ್ಲಿ ಮೊದಲ ದಿನವೇ 17. 24 ಕೋಟಿ ಗಳಿಸಿದರೆ ಆಂಧ್ರ – ತೆಲಂಗಾಣದಲ್ಲಿ 3.12 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಒಟ್ಟು 20.36 ಕೋಟಿ ರೂ. ಗಳಿಕೆ ಮಾಡಿದೆ. ಈ ಮೊದಲು ಯಶ್ ಅಭಿನಯದ ಕನ್ನಡ ಕೆಜಿಎಫ್ ಮೊದಲ ದಿನ 12.50 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
Advertisement
All Time Day 1 Massive Record In Sandalwood
Roberrt Collects 17.24 Cr In Kannada
Andra And Telangana First Day Collection – 3.12 Cr#dboss #roberrt #darshan pic.twitter.com/AA2socR2pm
— D Company(R)Official (@Dcompany171) March 12, 2021
Advertisement
ಕೋವಿಡ್ ಲಾಕ್‍ಡೌನ್ ಬಳಿಕ ಬಿಡುಗಡೆಯಾದ ಎರಡನೇ ಬಿಗ್ ಬಜೆಟ್ ಚಿತ್ರ ಇದಾಗಿದ್ದು, ದಚ್ಚು ಅಭಿಮಾನಿಗಳು ಸಂತೋಷದಿಂದ ಸಲೆಬ್ರೆಟ್ ಮಾಡಿ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದಾರೆ.
Fantastic Commercial Entertainer. DBoss is just Wow. He just weaves his Magic in Emotional, Comedy & Action sequences. Asha Bhat looks cute. Tharun has handled the most Bankable star very well. Rich Production Values as a result of Umapathy. @dasadarshan @TharunSudhir @umap30071 pic.twitter.com/imQDMxfO4S
— D Company(R)Official (@Dcompany171) March 11, 2021
ಕಲೆಕ್ಷನ್ ವಿಚಾರವನ್ನು ದರ್ಶನ್ ಅವರ ಅಧಿಕೃತ ಫ್ಯಾನ್ ಪೇಜ್ ಟ್ವೀಟ್ ಮಾಡಿ ತಿಳಿಸಿದೆ. ಚಿತ್ರ ಮಂದಿರಗಳ ಮುಂದೆ ಜನಸಾಗರವೇ ಸೇರಿದೆ. ಸಿನಿಮಾ ಬಿಡುಗಡೆಯಾದ ಮೊದಲೇ ಕನ್ನಡ ಮತ್ತು ತೆಲಗು ವರ್ಷನ್ ಹಾಡುಗಳು ಎಲ್ಲಡೆ ಸದ್ದು ಮಾಡಿದ್ದು, ಸಿನಿಮಾ ಮೇಲೆ ಇರುವ ನೀರಿಕ್ಷೆಯನ್ನು ಹೆಚ್ಚಿಸಿತ್ತು. ಇದೀಗ ಸಿನಿಮಾ ಸೂಪರ್ ಎನ್ನುವ ಕೂಗು ಎಲ್ಲಡೆ ಕೇಳಿ ಬರುತ್ತಿದೆ.
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಬಿಡುಗಡೆಯಾದ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಪಡೆದು ರಾಬರ್ಟ್ ಚಿತ್ರ ಹೊಸ ದಾಖಲೆ ನಿರ್ಮಿಸಿದೆ, ????????????????????
ಎರಡನೇ ದಿನವೂ ತನ್ನ ವಿಜಯಯಾತ್ರೆ ಯನ್ನು ಅದ್ಧೂರಿಯಾಗಿ ಮುಂದುವರಿಸಿದೆ✌️✌️❤️ @dasadarshan @UmapathyFilms @TharunSudhir pic.twitter.com/pRxDPOYHry
— D Company(R)Official (@Dcompany171) March 12, 2021
ಸರಿಸುಮಾರು ಒಂದೂವರೆ ವರ್ಷಗಳಿಂದ ದುಚ್ಚು ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ರಾಬರ್ಟ್ ಮೂಲಕ ದಚ್ಚುನ ಗ್ರ್ಯಾಂಡ್ ಎಂಟ್ರಿಗೆ ಅಭಿಮಾನಿಗಳು ಫೀದಾ ಆಗಿದ್ದಾರೆ. ಸಿನಿಮಾ ವೀಕ್ಷಣೆಗೆ ಚಿತ್ರಮಂದಿರಗಳತ್ತ ದಚ್ಚು ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಸಿನಿಮಾ ಅಭಿಮಾನಿಗಳು ದಂಡು ಹರಿದು ಬರುತ್ತಿದೆ.
ಕರ್ನಾಟಕ ಪ್ರತಿ ಏರಿಯಾ ವಾರು ಕಲೆಕ್ಷನ್ ಫಸ್ಟ್ ಡೇ
ಬಿಕೆಟಿ ಮತ್ತು ಸೌತ್ ಕೆನರಾ = 7cr (Including multiplex )
ಎಂಎಂಸಿಎಚ್ = 2cr
ದುರ್ಗ ಮತ್ತು ದಾವಣಗೆರೆ =2.24cr
ಶಿವಮೊಗ್ಗ =1cr
ಹೈದರಾಬಾದ್ ಕರ್ನಾಟಕ =3cr
ಬಾಂಬೆ ಕರ್ನಾಟಕ =2cr pic.twitter.com/9h1sXTKGiA
— D Company(R)Official (@Dcompany171) March 12, 2021
ಎಲ್ಲೆಲ್ಲಿ ಎಷ್ಟು ಕಲೆಕ್ಷನ್?
ಬೆಂಗಳೂರು ಕೋಲಾರ, ತುಮಕೂರು ಮತ್ತು ದಕ್ಷಿಣ ಕನ್ನಡ 7 ಕೋಟಿ ರೂ., ಮಂಡ್ಯ, ಮೈಸೂರು, ಚಾಮರಾಜನಗರ 2 ಕೋಟಿ ರೂ., ಚಿತ್ರದುರ್ಗ ಮತ್ತು ದಾವಣಗೆರೆ 2.24 ಕೋಟಿ ರೂ., ಶಿವಮೊಗ್ಗ 1 ಕೋಟಿ ರೂ., ಹೈದರಾಬಾದ್ ಕರ್ನಾಟಕ 3 ಕೋಟಿ ರೂ., ಬಾಂಬೆ ಕರ್ನಾಟಕ 2 ಕೋಟಿ ರೂ. ಗಳಿಸಿದೆ.
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಬಿಡುಗಡೆಯಾದ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಪಡೆದು ರಾಬರ್ಟ್ ಚಿತ್ರ ಹೊಸ ದಾಖಲೆ ನಿರ್ಮಿಸಿದೆ, ????????????????????
ಎರಡನೇ ದಿನವೂ ತನ್ನ ವಿಜಯಯಾತ್ರೆ ಯನ್ನು ಅದ್ಧೂರಿಯಾಗಿ ಮುಂದುವರಿಸಿದೆ✌️✌️❤️ @dasadarshan @UmapathyFilms @TharunSudhir @aanandaaudio pic.twitter.com/3UcKkefJhv
— D Company(R)Official (@Dcompany171) March 12, 2021
ಎರಡನೇ ದಿನವೂ ತನ್ನ ವಿಜಯಯಾತ್ರೆ ಯನ್ನು ಅದ್ಧೂರಿಯಾಗಿ ಮುಂದುವರಿಸಿದ್ದು ಶನಿವಾರ, ಭಾನುವಾರ ರಜೆ ಇರುವ ಕಾರಣ ಮತ್ತಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಥಿಯೇಟರ್ ಕಡೆ ಬರಲಿದ್ದಾರೆ.