ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಗೆದ್ದ ಪ್ರಸಿದ್ಧ್ ಕೃಷ್ಣ

Public TV
2 Min Read
PRASIDH KRISHNA

ಚೆನ್ನೈ: ಕೋಲ್ಕತ್ತಾ ಮತ್ತು ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯಕ್ಕೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗದ ಬೌಲರ್ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರು ಸಂದರ್ಶಕರು ಕೇಳಿದ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

PRASIDH KRISHNA 2

ಐಪಿಎಲ್ ಆರಂಭಕ್ಕೂ ಮೊದಲು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯಲ್ಲಿ ಭಾರತ ತಂಡಕ್ಕೆ ಪಾರ್ದಾಪಣೆ ಮಾಡಿದ ಯುವ ವೇಗಿ ಪ್ರಸಿದ್ಧ್ ಕೃಷ್ಣ ತನ್ನ ಚೊಚ್ಚಲ ಪಂದ್ಯದಲ್ಲೇ ತಾನೊಬ್ಬ ಪ್ರತಿಭಾವಂತ ಬೌಲರ್ ಎಂಬುದನ್ನು ತೋರಿಸಿ ಕೊಟ್ಟಿದ್ದರು. ಆ ಬಳಿಕ ಇದೀಗ ಆರಂಭಗೊಂಡಿರುವ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಕೆಕೆಆರ್ ತಂಡದ ಪರವಾಗಿ ಆಡುತ್ತಿರುವ ಪ್ರಸಿದ್ಧ್ ಕೃಷ್ಣ ಮೊದಲ ಪಂದ್ಯದಲ್ಲೇ ಮತ್ತೆ ತನ್ನ ಬೌಲಿಂಗ್ ಕರಾಮತ್ತನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್‍ನಲ್ಲಿ ಭರವಸೆಯ ವೇಗಿಯಾಗಿ ಗುರುತಿಸಿಕೊಂಡಿದ್ದಾರೆ.

PRASIDH KRISHNA 3

ಕೆಕೆಆರ್ ಮತ್ತು ಎಸ್‍ಆರ್‍ಎಚ್ ನಡುವಿನ ಪಂದ್ಯಕ್ಕೂ ಮೊದಲು ಕ್ರೀಡಾ ಸಂದರ್ಶಕರು ಪ್ರಸಿದ್ಧ್ ಕೃಷ್ಣ ಅವರನ್ನು ಸಂದರ್ಶನ ಮಾಡಿದ್ದರು ಈ ವೇಳೆ ಪ್ರಸಿದ್ಧ್ ಕೃಷ್ಣ ಸಂದರ್ಶಕರು ಇಂಗ್ಲೀಷ್‍ನಲ್ಲಿ ಕೇಳಿದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿದ್ದಾರೆ.

ಮೊದಲು ಸಂದರ್ಶಕರು ನೀವು ಟೀಂ ಇಂಡಿಯಾದಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದ ಬಳಿಕ ನಿಮ್ಮ ಬೌಲಿಂಗ್‍ನಲ್ಲಿ ಏನು ಬದಲಾವಣೆ ಮಾಡಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಸಿದ್ಧ್ ಕೃಷ್ಣ, ನನ್ನ ಪ್ರದರ್ಶನ ಹಾಗೇ ಇದೆ ಅಲ್ಲಿನ ಪ್ರದರ್ಶನ ತುಂಬಾ ಖುಷಿ ಕೊಟ್ಟಿದೆ. ಅದೇ ರೀತಿ ಇಲ್ಲಿಯು ಕೂಡ ತಂಡಕ್ಕಾಗಿ ಉತ್ತಮ ಪ್ರದರ್ಶನ ಕೊಡಬೇಕೆಂದು ಇದ್ದೇನೆ ಎಂದಿದ್ದಾರೆ.

ನಂತರ ಇಂಗ್ಲೆಂಡ್ ಸರಣಿಯಲ್ಲಿ ಮಾರ್ಗನ್ ಇಂಗ್ಲೆಂಡ್ ತಂಡದ ನಾಯಕರಾಗಿದ್ದರು. ಆ ಪಂದ್ಯದಲ್ಲಿ ನೀವು ಉತ್ತಮ ಪ್ರದರ್ಶನ ತೋರಿದ್ದೀರಿ ಬಳಿಕ ಅಲ್ಲಿ ಮಾರ್ಗನ್ ಜೊತೆ ಮಾತುಕತೆ ಮಾಡಿದ್ದೀರ ಎಂದು ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಪ್ರಸಿದ್ಧ್, ಆ ಸರಣಿಯಲ್ಲಿ ನಾವಿಬ್ಬರು ಪರಸ್ಪರ ಚೆನ್ನಾಗಿ ತಿಳಿದಿದ್ದರಿಂದ ಮಾತುಕತೆ ನಡೆಸುತ್ತಿದ್ದೇವು. ಇದೀಗ ಒಂದೇ ತಂಡದಲ್ಲಿ ಆಡುತ್ತಿದ್ದೇವೆ ಇಲ್ಲಿಯೂ ಕೂಡ ತುಂಬಾ ಮಾತುಕತೆಯಲ್ಲಿ ತೊಡಗಿದ್ದೇವೆ ಎಂದಿದ್ದಾರೆ.

ಬಳಿಕ ಸಂದರ್ಶಕರು ಕಳೆದ ಬಾರಿಯ ಐಪಿಎಲ್ ಹೋಲಿಕೆ ಮಾಡಿದರೆ ಈ ಬಾರಿಯ ಐಪಿಎಲ್‍ನಲ್ಲಿ ಒಬ್ಬ ಬೌಲರ್ ಆಗಿ ಬೌಲಿಂಗ್ ಕೌಶಲ್ಯ, ಮಾನಸಿಕವಾಗಿ ಮತ್ತು ದೈಹಿಕವಾಗಿ ಯಾವರೀತಿ ಬದಲಾವಣೆ ಮಾಡಿಕೊಂಡಿದ್ದೀರಿ ಎಂದಾಗ, ಪ್ರಸಿದ್ಧ್ ಈ ಕುರಿತು ನನ್ನನ್ನು ನೋಡಿ ಮುಂದೆ ನೀವೇ ತಿಳಿಸಬೇಕೆಂದಿದ್ದಾರೆ.

ಈ ಬಾರಿಯ ಐಪಿಎಲ್‍ನ ಕೊನೆಯ 5 ಪಂದ್ಯಗಳು ಕೆಕೆಆರ್ ತಂಡ ಬೆಂಗಳೂರಿನಲ್ಲಿ ಆಡಲಿದೆ ಅಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದೀರ ಎಂದು ಸಂದರ್ಶಕರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರಸಿದ್ಧ್ ನಾನು ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಆಡುತ್ತಿದ್ದೇನೆ ಹಾಗಾಗಿ ಇದು ನನಗೆ ತುಂಬಾ ಸಹಕಾರಿಯಾಗಲಿದೆ ಅಲ್ಲಿ ಉತ್ತಮ ಪ್ರದರ್ಶನ ತೋರಲು ಬಯಸುತ್ತೇನೆ ಎಂದಿದ್ದಾರೆ.

KKR

ಪ್ರಸಿದ್ಧ್ ಕೃಷ್ಣ ಎಸ್‍ಆರ್‍ಎಚ್ ವಿರುದ್ಧದ ಪಂದ್ಯದಲ್ಲಿ ತನ್ನ ಮೊದಲ ಓವರ್‍ ನ ಮೂರನೇ ಎಸೆತದಲ್ಲೇ ಎದುರಾಳಿ ತಂಡದ ಸ್ಪೋಟಕ ಬ್ಯಾಟ್ಸ್‌ಮ್ಯಾನ್ ನಾಯಕ ಡೇವಿಡ್ ವಾರ್ನರ್ ಅವರ ವಿಕೆಟ್ ಬೇಟೆಯಾಡಿ ಕೆಕೆಆರ್‍ ಗೆ ಮೇಲುಗೈ ತಂದು ಕೊಟ್ಟಿದ್ದರು. ಈ ಪಂದ್ಯದಲ್ಲಿ 4 ಓವರ್ ಮಾಡಿದ ಪ್ರಸಿದ್ಧ್ 35ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದು ಮಿಂಚಿದ್ದರು.

Share This Article
Leave a Comment

Leave a Reply

Your email address will not be published. Required fields are marked *